ಆನೇಕಲ್ ತಾಲೂಕಿನ ಹಳೆಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಅವಿರೋಧ ಆಯ್ಕೆಯಾದ ಅಧ್ಯೆ ರಾಧಮ್ಮ ಹಾಗೂ ಉಪಾಧ್ಯ ನವೀನ್ ಅವರನ್ನು ಬೆಂಬಲಿಗರು ಸನ್ಮಾನಿಸಿದರು. ಬಿಜೆಪಿ ಯುವ ಮುಖಂಡ ಬಳ್ಳೂರು ವಸಂತ್ ರೆಡ್ಡಿ ಇತರರು ಇದ್ದರು.
ಆನೇಕಲ್ : ತಾಲೂಕಿನ ಬಳ್ಳೂರು ಗ್ರಾಪಂ ವ್ಯಾಪ್ತಿಯ ಹಳೇಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಇಚ್ಚೀಚೆಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಧಮ್ಮ ಹಾಗೂ ಉಪಾಧ್ಯರಾಗಿ ನವೀನ್ ಅವಿರೋಧ ಆಯ್ಕೆಯಾದರು.
ಬಿಜೆಪಿ ಯುವ ಮುಖಂಡ ಬಳ್ಳೂರು ವಸಂತ ರೆಡ್ಡಿ ಮಾತನಾಡಿ, ಹೈನುಗಾರಿಕೆಯನ್ನು ಉತ್ತೇಜನಗೊಳಿಸಿ ರೈತರಿಗೆ ಸಹಾಯ ಆಗುವ ನೆಟ್ಟಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂ ಕೆಲಸ ಮಾಡಬೇಕು ಎಂದು ಹೇಳಿದರು.
ಈಗಾಗಲೇ ಹೈನುಗಾರಿಕೆ ಕುಂಠಿತವಾಗುತ್ತಿದ್ದು, ಈ ಭಾಗದಲ್ಲೂ ಕೂಡ ಜನ ಪ್ರತಿದಿನ ಡೇರಿಗೆ ಹಾಲು ಹಾಕುವುದನ್ನು ಕಡಿಮೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರೈತರಿಗೆ ಉತ್ತೇಜನ ನೀಡಿ ಹಾಲು ಉತ್ಪಾದಕರ ಸಹಕಾರ ಸಂವನ್ನು ಸಹ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ಭರತ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಹೈನುಗಾರಿಕೆಗೆ ಒತ್ತನ್ನು ನೀಡುವ ಕೆಲಸ ಮಾಡುತ್ತೇವೆ. ರೈತರೂ ಕೂಡ ಹೆಚ್ಚಾಗಿ ಹೈನುಗಾರಿಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹಾಲು ಉತ್ಪಾದಕರ ಸಹಕಾರ ಸಂಕ್ಕೆ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖಂಡರಾದ ನಾರಾಯಣಪ್ಪ, ಗಣೇಶ್, ಮಾಜಿ ಅಧ್ಯ ಮುನಿರಾಜು, ನಿರ್ದೇಶಕರಾದ ಅಂಬರೀಶ್ ರೆಡ್ಡಿ, ಸುರೇಶ್, ಡಿ.ಯಲ್ಲಪ್ಪ, ಅಳ್ಳೇಳಪ್ಪ, ವೆಂಕಟಸ್ವಾಮಿ, ಸುನಂದಮ್ಮ, ರಾಜಮ್ಮ, ಅಕ್ಕಮ್ಮ, ಕಾರ್ಯದರ್ಶಿ ವೆಂಕಟೇಶ್, ಹಾಲು ಪರೀಕ ರವಿಕುಮಾರ್, ನಾಗೇಶ್, ಮುನಿರಾಜು ರೆಡ್ಡಿ, ಸಂದೀಪ್, ಜೆ.ಜಗದೀಶ್, ಎಂ.ಚರಣ್ ರಾಜ್, ಮಧನ್ ಕುಮಾರ್ ಇದ್ದರು.