ರಾಧಾಕೃಷ್ಣ ಯೋಜನೆಗೆ ಹೆಚ್ಚಾದ ವಿರೋಧ 
ರಾಜ್ಯ

ರಾಧಾಕೃಷ್ಣ ಯೋಜನೆಗೆ ಹೆಚ್ಚಿದ ವಿರೋಧ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ರಾಧಾಕೃಷ್ಣ ಯೋಜನೆಗೆ ಮಹಾರಾಷ್ಟ್ರ ರೈತರಿಂದಲೂ ವಿರೋಧ
  • ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹಿನ್ನೀರು ಕನ್ನ ಹಾಕುವ ಯೋಜನೆ
  • ಗಡಿ ಭಾಗದ ರೈತರಿಂದ ಹೆಚ್ಚಿದ ವಿರೋಧ
ರಾಧಾಕೃಷ್ಣ ಯೋಜನೆಗೆ ಮಹಾರಾಷ್ಟದ
ಗಡಿ ಗ್ರಾಮಗಳ ಜನರಿಂದಲೇ ವಿರೋಧ!
| ಕರ್ನಾಟಕದ ಕಲ್ಲೋಳ ಬ್ಯಾರೇಜ್ ಹಿನ್ನೀರನ್ನು ಇಚಲಕರಂಜಿಗೆ ಸಾಗಿಸುವ ಪ್ಲಾ್ಯನ್
ವಿಜಯವಾಣಿ ವಿಶೇಷ ಚಿಕ್ಕೋಡಿ (ಬೆಳಗಾವಿ)
ಕೃಷ್ಣಾ ನದಿ ನೀರಿಗೆ ಕನ್ನ ಹಾಕಲು ಮಹಾರಾಷ್ಟç ಸರ್ಕಾರ ರೂಪಿಸಿರುವ ರಾಧಾಕೃಷ್ಣ ನೀರಾವರಿ ಯೋಜನೆ ಕರ್ನಾಟಕದಿಂದ, ಮಹಾರಾಷ್ಟದ 10ಕ್ಕೂ ಅಧಿಕ ಗಡಿ ಗ್ರಾಮಗಳಿಂದಲೂ ವಿರೋಧ ವ್ಯಕ್ತವಾಗಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಹಿನ್ನೀರನ್ನು ಇಚಲಕರಂಜಿಗೆ ಸಾಗಿಸಲು ಮಹಾರಾಷ್ಟç ಸರ್ಕಾರ ಯೋಜನೆ ರೂಪಿಸಿದೆ. ಕಲ್ಲೋಳ ಬ್ಯಾರೇಜ್ ಹಿನ್ನೀರಿನ ಕರ್ನಾಟಕದ ಗಡಿ ಗ್ರಾಮಗಳಿಗೆ ಆಯ್ತು, ಮಹಾರಾಷ್ಟçದ ಕೊಲ್ಲಾಪುರ ಜಿ±್ಲೆ ಶಿರೋಳ ತಾಲೂಕಿನ ದಾನವಾಡ, ದತ್ತವಾಡ, ಸೈನಿಕ ಟಾಕಳಿ, ಟಾಕಳಿವಾಡಿ, ಅಕ್ಕಿವಾಟ, ಖಿದರಾಪುರ, ಘೋಸರವಾಡ, ರಾಜಾಪುರ, ಮಧುರೇವಾಡಿ, ಹೆರವಾಡ ​​ಮತ್ತು ತೆರವಾಡ ​​ಸೇರಿದಂತೆ ಹತ್ತಾರು ಗ್ರಾಮಗಳಿಗೆ ಜಲ ಮೂಲವಾಗಿದೆ. ಜಾರಿಯಾದರೆ ಈ ಎಲ್ಲ ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ ಎಂಬ ಆಕ್ರೋಶ ಗಡಿ ಮರಾಠಿಗರಿಂದ ಯೋಜನೆಯಾಗಿದೆ. ಈ ಯೋಜನೆ ವಿರೋಧಿಸಿ ಆಗಸ್ಟ್ ತಿಂಗಳಿನಲ್ಲಿ ಪ್ರತಿಭಟನೆ ನಡೆಸಲು ಮಹಾರಾಷ್ಟದ ರೈತರು ನಿರ್ಧರಿಸಿದ್ದಾರೆ. ಈ ಕುರಿತು ದಾನವಾಡ ಗ್ರಾಮ ಪಂಚಾಯಿತಿಯಲ್ಲಿ ಠರಾವು ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಚಲಕರಂಜಿ ಶಾಸಕ ರಾಹುಲ್ ಅವಾಡೆ ರೈತರ ಪ್ರತಿಭಟನೆ ತಡೆಯಲು ವಿಶೇಷ ಪ್ರಯತ್ನ. ಗ್ರಾಮಗಳ ಮುಖಂಡರ ಜತೆ ಸಭೆ ನಡೆಸಿ, ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ತಣ್ಣಗಾಗಿಸಲು ಗ್ರಾಮಗಳಿಗೆ ವಿಶೇಷ ಅನುದಾನದ ಆಮಿಷವೊಡ್ಡುತ್ತಿದೆಂಬ ಮಾತುಗಳೂ ಕೇಳಿಬಂದಿವೆ. ಅವರು ದಾನವಾಡ ಗ್ರಾಮದ ಬಳಿ ಕೃಷ್ಣಾ ನದಿ ಸಂಗಮ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಯೋಜನೆ ಸಾಧ್ಯತೆಗಳನ್ನು ಪರಿಶೀಲಿಸಿದ್ದಾರೆ.
ಕರ್ನಾಟಕದ ಗಡಿಭಾಗದ ಗ್ರಾಮಸ್ಥರು ರಾಧಾಕೃಷ್ಣ ನೀರಾವರಿ ಯೋಜನೆ ವಿರೋಧಿಸುತ್ತಿರುವ ಗಡಿ ಮರಾಠಿಗರಿಗೆ ಬೆಂಬಲ ಸೂಚಿಸಿದ್ದು, ಕರ್ನಾಟಕ ಸರ್ಕಾರ ಯೋಜನೆ ತಡೆಗೆ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.