ಬೆಳವಡಿ ಮಲ್ಲಮ್ಮ ಉತ್ಸವದ ವಿಚಾರ ಸಂಕಿರಣವನ್ನು ಜಡಿಸಿದ್ದೇಶ್ವರ ಸ್ವಾಮೀಜಿ, ಡಾ.ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ ಉದ್ಘಾಟಿಸಿದರು. ಈರಣ್ಣ ಕರಿಕಟ್ಟಿ, ಎ.ಎನ್.ಪ್ಯಾಟಿ, ಸವಿತಾ ಪಾಟೀಲ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೆಲಹೊಂಗಲ/ಮಲ್ಲಮ್ಮನ ಬೆಳವಡಿ
ಮಹಿಳಾ ಸೆನ್ಯ ಕಟ್ಟಿ ನಾಡ ರಣೆಗಾಗಿ ಶೌರ್ಯ ಮೆರೆದ ರಾಣಿ ಮಲ್ಲಮ್ಮ ಅವರ ಸಮಾಧಿ ಸೇರಿ ಕುರುಹು ಪತ್ತೆ ಮಾಡಬೇಕು. ಪ್ರಾಧಿಕಾರ ರಚಿಸಿ ಸಮಗ್ರ ಅಭಿವದ್ಧಿಪಡಿಸಬೇಕು ಎಂದು ರಾಜ್ಯ ಧಾರ್ಮಿಕ ಪರಿಷತ್ ನಿರ್ದೇಶಕ ಡಾ. ಮಹಾಂತಯ್ಯ ಶಾಸಿ ಆರಾಧ್ಯಮಠ ಒತ್ತಾಯಿಸಿದರು.
ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಅಂಗವಾಗಿ ಬೆಳವಡಿ ಗ್ರಾಮದ ಸ್ಮಾರಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಮಾಧಿ ಸ್ಥಳ ನಿಖರವಾಗಿ ಎಲ್ಲಿದೆ ಎಂಬುದನ್ನು ಸಂಶೋಧಕರು, ಸಾಹಿತಿಗಳು ಹಾಗೂ ಗ್ರಾಮದ ಹಿರಿಯರು ಗುರುತಿಸುವ ಕಾರ್ಯ ತುರ್ತಾಗಿ ನಡೆಸಬೇಕು. ಬಳಿಕ ಆ ಸ್ಥಳವನ್ನು ಸರ್ಕಾರದಿಂದ ಸ್ಮಾರಕವಾಗಿ ಅಭಿವದ್ಧಿಪಡಿಸಬೇಕೆಂದು ಒತ್ತಾಯಿಸಿದರು.
ಬೆಲಹೊಂಗಲ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ಶಿವಲೀಲಾ ಮುಕುಂದ ಮಹಿಳಾ ಸಬಲೀಕರಣದಲ್ಲಿ ರಾಣಿ ಮಲ್ಲಮ್ಮ ಅವರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಮೆಸೂರಿನ ಸಾಹಿತ್ಯಿ ರಾಮಣ್ಣ ತಟ್ಟಿ ರಾಣಿ ಮಲ್ಲಮ್ಮ ಅವರ ಪರಾಕ್ರಮ ಮತ್ತು ಆಡಳಿತ ಸಾಮರ್ಥ್ಯದ ಬಗ್ಗೆ ಮಾತನಾಡಿದರು.
ಉಪನ್ಯಾಸಕಿ ನೇತ್ರಾವತಿ ಬಿಸಲೊಳ್ಳಿ ರಾಣಿ ಮಲ್ಲಮ್ಮ ಅವರ ಜೀವನ ಮತ್ತು ಪ್ರಮುಖ ಟನೆಗಳ ಕುರಿತು ವಿವರಿಸಿದರು. ರಾಣಿ ಮಲ್ಲಮ್ಮ ಪ್ರಶಸ್ತಿ ವಿಜೇತೆ ಸವಿತಾ ಪಾಟೀಲ ಮಲ್ಲಮ್ಮಳ ಪ್ರಾಧಿಕಾರದ ಕುರಿತು ಮಾತನಾಡಿದರು. ಸಮಾಜ ಸೇವಕ ಪ್ರಕಾಶ ಹುಬ್ಬಿ ಆಶಯ ನುಡಿ ಹೇಳಿದರು. ದೊಡ್ಡವಾಡ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ,
ಬಿಇಒ ಎ.ಎನ್.ಪ್ಯಾಟಿ, ವಿಠ್ಠಲ ಪಿಸೆ, ಬಿಆರ್ಸಿ ಆರ್.ಡಿ. ಹಿರೇಮಠ, ರವೀಂದ್ರ ತುರಮರಿ, ಜಿ.ಐ. ಪಾಟೀಲ, ಶಂಕರ ಕರಿಕಟ್ಟಿ, ಎಂ.ಪಿ.ಉಪ್ಪಿನ, ಎಸ್.ಸಿ. ಗುಗ್ಗರಿ, ವೀರೇಶ ಹಂಡೂರು, ಜಿತೇಂದ್ರ ನಿಡೋಣಿ, ಬಸಯ್ಯ ವಿರಕ್ತಮಠ, ಡಾ.ಡಿ.ವೈ.ಗರಗದ ರಾಚಪ್ಪ ಮಟ್ಟಿ, ಶಿವಪ್ಪ ಹುಂಬಿ ಇತರರು ಇದ್ದರು. ವಕೀಲ ಸಿ.ಎಸ್.ಚಿಕ್ಕನಗೌಡ ನಿರ್ವಹಿಸಿದರು. ವಿಶ್ವನಾಥ ಪೂಜೇರ ಸ್ವಾಗತಿಸಿದರು. ಕುಮಾರ ಮಂಗಳಗಟ್ಟಿ ನಿರೂಪಿಸಿದರು. ಯಾಸಿನ್ ಕಿತ್ತೂರ ವಂದಿಸಿದರು. ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕುಮಾರ ಮಂಗಳಗಟ್ಟಿ ನಿರೂಪಿಸಿದರು.