ದೊಡ್ಡಬಳ್ಳಾಪುರ ಕೋಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿ ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಕಂಪನಿ ಅಧಿಕಾರಿಗಳಾದ ಸೋಮೇಶ್ ಚಂದ್, ಎಸೆಂತುರ್ಕ್, ಮುಖಂಡರಗಳಾದ ನಂಜೇಗೌಡ, ವಸಂತ್, ರಾಜು, ಮುನಿರಾಜು, ಅನುಸೂಯಮ್, ಗೀತಾ, ಕೇಶವಮೂರ್ತಿ, ಮೋಹನ ಮೂರ್ತಿ, ಯಶೋದಮ್ಮ, ಲಲಿತಮ್ಮ, ಲಕ್ಷ$್ಮಣ, ರಾಮಚಂದ್ರಪ್ಪ, ವಕೀಲ ನಾಗರಾಜು ಇದ್ದರು.
ದೊಡ್ಡಬಳ್ಳಾಪುರ : ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಎಲ್ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಉಚಿತವಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ ಪಬ್ಲಿಕ್ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದ್ದು, ಪಾಲಕರಿಗೆ ಸರ್ಕಾರಿ ಶಾಲೆಗಳ ಬಗೆಗಿನ ಕಿಳೀರಿಮೆ ಬೇಡ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕಿನ ಕೋಳೂರು ಗ್ರಾಮದಲ್ಲಿ ಸಿಗ್ನಾ ಹೆಲ್ತ್ ಸೆಲ್ಯೂಷನ್ ಇಂಡಿಯಾ ಕಂಪನಿ, ರೋಟರಿ ಬೆಂಗಳೂರು ದಣ, ಸಮರ್ಪಣೆ ರೋಟರಿ ಬೆಂಗಳೂರು, ಲೇಕ್ ಸೈಡ್ಯಿಂದ ಸಿಎಸ್ಆರ್ ನಿಧಿಯಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಎರಡು ಶಾಲಾ ಕೊಠಡಿ ಮತ್ತು ಮುಖ್ಯಶಿಕ್ಷಕರ ಕೊಠಡಿ, ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಆಶಯ. ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡುವುದರಿಂದ ಅತ್ಯುತ್ತಮ ಶೈಕ್ಷಣಿಕ ಫಲಿತಾಂಶ, ದ್ವಿಭಾಷಾ ಮಾಧ್ಯಮದ ಶಿಕ್ಷಣ, ಹಣದ ಉಳಿತಾಯ, 14 ವರ್ಷಗಳ ನಿರಂತರ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.
ಕಾರ್ಪೊರೇಟ್ ಸಂಸ್ಥೆಗಳು ಸಣ್ಣಪುಟ್ಟ ಕೆಲಸ ಅಥವಾ ತಾತ್ಕಾಲಿಕ ನೆರವಿಗೆ ಸೀಮಿತವಾಗದೆ, ಸಮಾಜಕ್ಕೆ ದೊಡ್ಡಮಟ್ಟದ ಕೊಡುಗೆ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ದತ್ತು ಅಥವಾ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ, ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಶಾಲಾಕಟ್ಟಡ, ಸ್ಮಾರ್ಟ್ ತರಗತಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಾರಿಗೆ ವ್ಯವಸ್ಥೆ ಹಾಗೂ ಶಿಕ್ಷಕರ ನೇಮಕಕ್ಕೆ ಸಿಎಸ್ಆರ್ ಮೂಲಕ ನೇರವಾಗಿ ನೆರವು ನೀಡಬಹುದು ಎಂದರು.