Quality education available in residential schools
ಗುಬ್ಬಿ: ಪ್ರಸ್ತುತ ದಿನಗಳಲ್ಲಿ ದೊಡ್ಡ ಮಟ್ಟದ ಅಧಿಕಾರಿಗಳು ಳಾಗಿರುವವರು ಬಹುತೇಕರು ವಸತಿ ಶಾಲೆಗಳಲ್ಲಿ ಕಲಿತವರೆ ಆಗಿದ್ದಾರೆ ಎಂದು ಹಾಲಪ್ಪ ಫೌಂಡೇಶನ್ ಸಂಸ್ಥಾಪಕ ಮುರುಳಿಧರ ಹಾಲಪ್ಪ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದ ಮುಂಭಾಗದಲ್ಲಿ ಹಾಲಪ್ಪ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಕೌಶಲಪಥ ಯುವ ಸಬಲೀಕರಣ ನವೋದಯ ಸೈನಿಕ್ ಮುರಾರ್ಜಿ ವಸತಿ ಶಾಲೆಗಳ ಕಾರ್ಯಗಾರದಲ್ಲಿ ಮಾತನಾಡಿ, ಶಿಣಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ರೀತಿಯ ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದ್ದು, ಗುಣಮಟ್ಟದ ಶಿಣ, ಆಹಾರ, ವಸತಿ, ಉಡುಪು ಎಲ್ಲವನ್ನು ಸಹ ನೀಡುತ್ತಿದೆ. ಇಂತಹ ವಸತಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಣ, ಶಿಸ್ತು, ಶ್ರದ್ಧೆ ಮೂಡುತ್ತದೆ ಎಂದರು.
ಜ್ಯೋತಿ ನವೋದಯ ಕ್ಲಾಸಿಕ್ ಶಾಲೆಯ ಬಿಬಿ ಗೋರನಾಳ ಮಾತನಾಡಿ, ನವೋದಯ ಶಾಲೆಗಳು ಸರ್ಕಾರದ ಪ್ರಮುಖ ವಸತಿ ಶಾಲೆಯಾಗಿದ್ದು, ಮಕ್ಕಳು ಒಮ್ಮೆ ಇಲ್ಲಿಗೆ ಪ್ರವೇಶಾತಿಯನ್ನು ಪಡೆದರೆ ಗುಣಮಟ್ಟದ ಶಿಣ, ವಸತಿ ಎಲ್ಲವೂ ಸಿಗುತ್ತದೆ. ಸಾರ್ವಜನರಿಕರು ಇದನ್ನು ಸದುಪಯೋಗಿಸಬೇಕೆಂದು ತಿಳಿಸಿದರು.