ಕಲಬುರಗಿ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪುಟ್ಟರಾಜ ಕೊಟ್ಟ ಜ್ಞಾನ ಎಂಬ ಗಾನ ಮಾನ ದಾತ ನಾದದ ನವನೀತ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ಪ್ರವಿಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀವಿರ ಮಹಾಂತ ಶಿವಾಚಾರ್ಯರು, ನಟಿ ಉಮಾಶ್ರೀ, ವಿಜಯಕುಮಾರ ಪಾಟೀಲ್​, ಗೌತಮ ಪಾಟೀಲ್​, ಜಯಶ್ರೀ ಮುಚಳಂಬಿ, ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ್​ ಛಪ್ಪರಬಂದಿ ಇತರರಿದ್ದರು. 
ರಾಜ್ಯ

ಪುಟ್ಟರಾಜ ಗವಾಯಿಗಳು ಸಂಗೀತದ ಸಾಮ್ರಾಟ್​

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಸದಸ್ಯೆ ಉಮಾಶ್ರೀ ಹೇಳಿಕೆ
  • ಪ್ರವಚನ ಪ್ರವಿಣ ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ: ನಾಡಿನ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಸಾಮ್ರಾಟ್​ ಆಗಿದ್ದರು ಎಂದು ಚಿತ್ರನಟಿ, ವಿಧಾನ ಪರಿಷತ್​ ಸದಸ್ಯೆ ಉಮಾಶ್ರೀ ಶ್ಲಾಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿತ್ತಾಪೂರನ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್​ ಸಹಯೋಗದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪುಟ್ಟರಾಜ ಕೊಟ್ಟ ಜ್ಞಾನ ಎಂಬ ಗಾನ ಮಾನ ದಾತ ನಾದದ ನವನೀತ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ಪ್ರವಿಣ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪುಟ್ಟರಾಜ ಕವಿ ಗವಾಯಿಗಳು ನಮಗೆ ಅಂತರಾತ್ಮದ ಶಕ್ತಿ ತುಂಬಿದವರು. ಅವರಲ್ಲಿ ದೈವಿಕ ಶಕ್ತಿಯ ಅಂಶಗಳಿದ್ದವು. ರಂಗಭೂಮಿಗೆ ವೈಭವ ತಂದು ಕೊಟ್ಟವರು. ಹೀಗಾಗಿ ನಾಡಿನ ರಂಗಭೂಮಿ ಕ್ಷೇತ್ರದಲ್ಲಿ ಬಹು ದೊಡ್ಡ ಪಾತ್ರ ನಿರ್ವಹಿಸಿದರು ಎಂದು ಕೆಲ ಘಟನೆಗಳನ್ನು ಸ್ಮರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಕಾರ್ಯ ಚಟುವಟಿಕೆ ಶ್ಲಾನೀಯ ಎಂದರು.
ಸಾನಿಧ್ಯ ವಹಿಸಿದ್ದ ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀವಿರ ಮಹಾಂತ ಶಿವಾಚಾರ್ಯರು ಮಾತನಾಡಿದರು. ಸಮಾರಂಭ ಉದ್ಘಾಟಿಸಿದ ಡಿಸಿಸಿ ಬ್ಯಾಂಕ್​ ನಿರ್ದೇಶಕ ಗೌತಮ ವೈಜನಾಥ ಪಾಟೀಲ್​ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ಮಾತನಾಡಿ, ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳು ಕರ್ನಾಟಕದ ಮಹಾನ್​ ಸಂಗೀತ ಸಾಧಕರು. ದೃಷ್ಟೀಹಿನರಾಗಿದ್ದರೂ ಸಂಗೀತ, ಸಾಹಿತ್ಯ ಮತ್ತು ಸಮಾಜ ಸೇವೆಯ ಮೂಲಕ ಅಸಾಧಾರಣ ಸಾಧನೆ ಮಾಡಿ ನಾಡಿನ ಸಾವಿರಾರು ಜನರ ಬದುಕಿಗೆ ಬೆಳಕಾದರು. ಇಂಥ ಮಹಾತ್ಮನನ್ನು ಪರಿಷತ್ತು ವಿಶಿಷ್ಟ ಕಾರ್ಯಕ್ರಮದ ಮೂಲಕ ಸ್ಮರಿಸಲಾಗಿದೆ. ಅಧ್ಯಾತ್ಮಿಕ ವಿಚಾರಗಳ ಪ್ರಚಾರಗೈಯ್ಯುತ್ತಿರುವ ನಾಡಿನ ಶ್ರೇಷ್ಠ ಪ್ರವಚನಕಾರರನ್ನು ಪರಿಷತ್ತು ನಾಡಿನಲ್ಲೇ ಇದೆ ಮೊದಲ ಬಾರಿ ಗೌರವಿಸಲಾಗಿದೆ. ಇಂಥ ಪ್ರಥಮ ಕಾರ್ಯಕ್ರಮಗಳಿಗೆ ಕಲಬುರಗಿ ಜಿಲ್ಲಾ ಕಸಾಪ ಸಾಯಾಗಿದೆ ಎಂದು ಹೇಳಿದರು.
ಸಹಕಾರಿ ಧುರೀಣ ಚನ್ನಮಲ್ಲಯ್ಯ ಹಿರೇಮಠ ಜೇವರ್ಗಿ, ನಗನೂರಿನ ಜಗದೀಶ ಶರಣರು, ಮಹಿಳಾ ಸಂಟಕಿ ಜಯಶ್ರೀ ಮುಚಳಂಬಿ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರಾಗ ಸಂಗಮ ಸೇವಾ ಟ್ರಸ್ಟ್​ ಅಧ್ಯೆ ಶ್ವೇತಾ ಪಾಟೀಲ, ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಮಾತನಾಡಿದರು. ಪ್ರಮುಖರಾದ ಧರ್ಮರಾಜ ಜವಳಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಸೋಮಶೇಖರಯ್ಯಾ ಹೊಸಮಠ, ಹಣಮಂತರಾವ ಪೆಂಚನಪಳ್ಳಿ ಸೇರಿ ಇತರರಿದ್ದರು.
ಈ ಸಮಾರಂಭದ ವಿಶೇಷ ಆಕರ್ಷಣೆಯಾಗಿ ಕಳೆದ ಹಲವು ದಶಕಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಮ್ಮ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಮೌಲ್ಯ, ಸಾಮಾಜಿಕ ಜಾಗೃತಿ ಹಾಗೂ ಸಾಂಸ್ಕೃತಿಕ ಅರಿವು ಮೂಡಿಸುತ್ತಿರುವ ಜಿಲ್ಲೆಯ 31 ಜನ ಹಿರಿಯ ಪ್ರವಚನಕಾರರಿಗೆ ಪ್ರವಚನ ಪ್ರವಿಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
"

ನೊಂದ ಮನಸ್ಸುಗಳಿಗೆ ಬೆಳ್ಳಿ ಬಂಗಾರ ಮುಖ್ಯವಲ್ಲ. ಒಳ್ಳೆಯ ಮಾತುಗಳು ಪ್ರವಚನಕಾರರಿಗೆ ಗೌರವ ಹೆಚ್ಚುತ್ತದೆ. ಗದುಗಿನ ಪುಣ್ಯಾಶ್ರಮದ ಮಣ್ಣು ತಾಕಿದರೆ ಸಾಕು, ಎಲ್ಲರಿಗೂ ಸಂಗೀತದ ನಾದ ತಟ್ಟುತ್ತದೆ. ಈ ದಿಸೆಯಲ್ಲಿ ಪುಟ್ಟರಾಜ ಗವಾಯಿಗಳ ಕುರಿತು ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹ.

— ಶ್ರೀವಿರ ಮಹಾಂತ ಶಿವಾಚಾರ್ಯರು, ಮಹಾಂತೇಶ್ವರ ಮಠ, ಚಿನ್ಮಯಗಿರಿ.