ಭಂಕೂರಿನಿಂದ ಶಹಾಬಾದ್ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಾದಚಾರಿ ಮಾರ್ಗದಲ್ಲಿ ಕಸ ಎಸೆದಿರುವುದು.
- ಗಿಡ-ಗಂಟಿ, ಕಸದಿಂದ ಶಹಾಬಾದ್&ಭಂಕೂರ ಪಾದಚಾರಿ ಮಾರ್ಗ ಬಂದ್
ಶಹಾಬಾದ್: ನಗರದಿಂದ ಭಂಕೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-150ರಲ್ಲಿನ ಪಾದಚಾರಿ ಮಾರ್ಗ ಕಸ ಹಾಗೂ ಗಿಡ-ಗಂಟಿಗಳಿಂದ ತುಂಬಿಕೊಂಡಿದ್ದು, ಜನರ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ.
ಸುಮಾರು 2 ಕಿಮೀ ದೂರದ ಮಾರ್ಗದಲ್ಲಿ ಪುಟ್ಪಾತ್ ನಿರ್ಮಿಸಲಾಗಿದೆ. ಭಂಕೂರಿಗೆ ಹೋಗುವ ಜನರಿಗೆ ಹಾಗೂ ಜೆಪಿ ಕಾರ್ಖಾನೆ ಕಾಲನಿ ನಿವಾಸಿಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪುಟ್ಪಾತ್ ನಿರ್ಮಿಸಲಾಗಿದೆ. ಶಾಂತನಗರ ಮಸೀದಿ ವೃತ್ತದಿಂದ ಜಿಇ ಕಾರ್ಖಾನೆ ಗೇಟ್ವರೆಗಿನ ರಸ್ತೆ ಪಕ್ಕದಲ್ಲಿ ಮುಳ್ಳುಕಂಟಿ ಹಾಗೂ ಇತರೆ ಗಿಡಗಳು ಬೆಳೆದು ನಿಂತಿವೆ. ಅಲ್ಲದೆ ಸುತ್ತಲಿನ ಬಡಾವಣೆ ಜನರು ಮನೆಯ ತ್ಯಾಜ್ಯ, ಮಾಸಂದಂಗಡಿ ವ್ಯಾಪಾರಿಗಳು ಕಸವನ್ನು ಪುಟ್ಪಾತ್ನಲ್ಲಿ ಹಾಕುತ್ತಿದ್ದಾರೆ. ಇದರಿಂದ ದಾರಿ ಬಂದ್ ಆಗಿದ್ದು, ಅಲ್ಲದೆ ದುರ್ವಾಸನೆಯಿಂದ ಜನರ ಸಂಚಾರ ಕಮ್ಮಿಯಾಗಿದೆ.
ಮಳೆಗಾಲ ಪ್ರಾರಂಭವಾಗಿದ್ದರಿಂದ ರಸ್ತೆಯ ಎರಡು ಬದಿಯ ಪುಟ್ಪಾತ್ ಸ್ವಚ್ಛಗೊಳಿಸಬೇಕು, ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.