ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಿ fake journalists 
ರಾಜ್ಯ

ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಿ fake journalists

ಮುಳಬಾಗಿಲು: ತಾಲೂಕಿನಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ವಾಹನಗಳಿಗೆ ಪ್ರೆಸ್​ ಸ್ಟಿಕರ್​ ಅಂಟಿಸಿಕೊಂಡು ರೋಲ್​ ಕಾಲ್​ ಮಾಡುತ್ತಿದ್ದು, ಅಂತಹವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂದ ಪದಾಧಿಕಾರಿಗಳು ತಹಸೀಲ್ದಾರ್​ ವಿ.ಗೀತಾ ಮತ್ತು ಎ.ಎಸ್​.ಪಿ ಮನೀಷಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.fake journalists
ಸಂದ ತಾಲೂಕು ಅಧ್ಯ ಬಿ.ದೇವಾನಂದ್​ ಮಾತನಾಡಿ, ಪತ್ರಕರ್ತರು ಅಲ್ಲದವರು ಪ್ರೆಸ್​ ರಿಪೋರ್ಟರ್​ ಅಂತ ಹೇಳಿಕೊಂಡು ಮಾಹಿತಿ ಹಕ್ಕು ಅರ್ಜಿ ಹಾಕಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ. ಇದರಿಂದ ಮಾಧ್ಯಮ ೇತ್ರಕ್ಕೆ ಕಳಂಕ ಬರುತ್ತಿದೆ, ಇತ್ತೀಚೆಗೆ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಅನಧಿಕೃತವಾಗಿ ಯೂಟ್ಯೂಬ್​ ಮತ್ತು ಪತ್ರಕರ್ತರು ಎಂದು ಹೇಳಿಕೊಂಡು ಅಧಿಕಾರಿಗಳು ಹಾಗೂ ಕಲ್ಲು ಗಣಿಗಾರಿಕೆ ಮತ್ತಿತರ ಚಟುವಟಿಕೆಗಳಲ್ಲಿ ಇರುವವರನ್ನು ಗುರುತಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ವೃತ್ತಿಪರ ಪತ್ರಕರ್ತರಿಗೆ ತೊಂದರೆಯಾಗುತ್ತಿದ್ದು, ಕಡಿವಾಣ ಹಾಕಲು ತಾಲೂಕು ಆಡಳಿತ ಸಹಕರಿಸಬೇಕು ಎಂದು ಕೋರಿದರು.
ಇನ್ನೂ ಕೆಲವರು ಕಾರು ಮತ್ತು ದ್ವಿಚಕ್ರ ವಾಹನಗಳ ಮೇಲೆ ಪತ್ರಕರ್ತರು ಎಂದು ಹೆಸರು ಹಾಕಿಕೊಂಡು ಸಂಚಾರ ಮಾಡುತ್ತಿದ್ದಾರೆ. ಇದನ್ನು ಸಹ ಪೊಲೀಸ್​ ಇಲಾಖೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ತಾಲೂಕು ಉಪಾಧ್ಯ ವಿ.ರಾಮಕೃಷ್ಣಪ್ಪ, ವಿ.ಶಂಕರಪ್ಪ, ಕಾರ್ಯದರ್ಶಿಗಳಾದ ವಿ.ಸುಕುಮಾರ್​, ಆರ್​.ಶ್ರೀನಿವಾಸಪ್ಪ, ಖಜಾಂಚಿ ಕೆ.ತ್ಯಾಗರಾಜ್​, ಪದಾಧಿಕಾರಿಗಳಾದ ನರಸಿಂಹಶೆಟ್ಟಿ, ಅಮೃತಯ್ಯ ಇದ್ದರು.