ಬೆಂಗಳೂರು: ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟು ಮಾಡುವುದು ಮತ್ತು ನ್ಯಾಯಾಧೀಶರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಕೃತ್ಯಗಳನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬಹುದು ಎಂದಿರುವ ಹೈಕೋರ್ಟ್, ನ್ಯಾಯಾಲಯದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ವಕೀಲರೊಬ್ಬರಿಗೆ ಒಂದು ದಿನದ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಕಾರವಾರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ್ಸಿ ನ್ಯಾಯಾಲಯದಲ್ಲಿ ಅಶಿಸ್ತು ತೋರಿದ ವಕೀಲ ಪಂಕಜ್ ಕೌಶಿಕ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿರುವ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಟಿ.ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ಸೆ.11ರಂದು ಈ ಆದೇಶ ನೀಡಿದೆ. ನ್ಯಾಯಾಲಯದ ತೀರ್ಪುಗಳನ್ನು ಟೀಕಿಸಲು ಅವಕಾಶವಿದೆ. ಆದರೆ, ನ್ಯಾಯಾಧೀಶರ ವಿರುದ್ಧ ಆಧಾರರಹಿತವಾದ ವೈಯಕ್ತಿಕ ಹೇಳಿಕೆಗಳನ್ನು ನೀಡಿ ನ್ಯಾಯಾಂಗದ ನತೆಗೆ ಧಕ್ಕೆ ತರಲು ಅವಕಾಶ ನೀಡಲಾಗದು ಎಂದಿದೆ.
ಪ್ರಕರಣದ ಹಿನ್ನೆಲೆ:
ಪಂಕಜ್ ಕೌಶಿಕ್ ತಮ್ಮ ವಿರುದ್ಧದ ಪ್ರಕರಣವೊಂದರಲ್ಲಿ ಕಾರವಾರ ನ್ಯಾಯಾಲಯದಲ್ಲಿ ಸ್ವತ@ ವಾದಿಸುತ್ತಿದ್ದರು. 2022ರ ಏ.8ರಂದು ಪ್ರಕರಣದ ವಿಚಾರಣೆ ನಿಗದಿಯಾಗದಿದ್ದರೂ, ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿ ನ್ಯಾಯಾಧೀಶರು ಮತ್ತು ಬೆಂಚ್ ಕ್ಲರ್ಕ್ ಮೇಲೆ ಕೂಗಾಡಿದ್ದರು. ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿ, ತಮ್ಮಪತ್ನಿಯ ಪರವಾಗಿ ತೀರ್ಪು ನೀಡಲು ಆಕೆಯಿಂದ ನ್ಯಾಯಾಧೀಶರು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆ ಬಗ್ಗೆ ಹೈಕೋರ್ಟ್ನ ರಿಜಿಸ್ಟ್ರಿಗೆ ಮಾಹಿತಿ ನೀಡಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು ಕ್ರಮಕ್ಕೆ ಮನವಿ ಮಾಡಿದ್ದರು.
ಏ.11ರಂದು ಕ್ಷಮಾಪಣಾ ಪತ್ರ ಸಲ್ಲಿಸಿ, ತಮ್ಮ ವಿರುದ್ಧದ ಕ್ರಮ ಕೈಬಿಡುವಂತೆ ಕೋರಿದ್ದರು. ಆದರೆ, ಏ.20ರಂದು ಹಿರಿಯ ವಕೀಲರೊಬ್ಬರು ವಾದಿಸುತ್ತಿದ್ದಾಗ ಪುನಃ ಕಲಾಪಕ್ಕೆ ಪ್ರವೇಶಿಸಿದ್ದ ಪಂಕಜ್ ಕೌಶಿಕ್, ತಮ್ಮ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಕೂಗಾಡಿದ್ದರು. ಆಗ ಅವರನ್ನು ಆಸ್ಪತ್ರೆಗೆ ಕಳುಹಿಸಿ ಪರೀಸಿದಾಗ ಮದ್ಯ ಸೇವಿಸಿ ನ್ಯಾಯಾಲಯ ಪ್ರವೇಶಿಸಿದ್ದು ಪತ್ತೆಯಾಗಿತ್ತು.