ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜಯಂತಿಯಲ್ಲಿ ಗ್ರೇಡ್​&2 ತಹಸೀಲ್ದಾರ್​ ಕಲಾವತಿ, ತಾಪಂ ಮಾಜಿ ಸದಸ್ಯ ಎಂ.ವಿ.ರುದ್ರೇಶ್​, ಗ್ರಾಪಂ ಮಾಜಿ ಅಧ್ಯೆ ಮಂಜಮ್ಮ, ವೀರಶೈವ ಮಹಾಸಭೆ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ರಾಜಮ್ಮಪ್ರಕಾಶ್​ ಇದ್ದರು.  
ರಾಜ್ಯ

ಸಮಯಪ್ರಜ್ಞೆ ಧೈರ್ಯದ ಪ್ರತಿಕ / NELMANGAL

ನೆಲಮಂಗಲ : ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಗ್ರೇಡ್​&2 ತಹಸೀಲ್ದಾರ್​ ಕಲಾವತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜಯಂತಿಯಲ್ಲಿ ಮಾತನಾಡಿದ ಅವರು, ಯುದ್ಧದ ಗಂಧಗಾಳಿ ಗೊತ್ತಿಲ್ಲದಿದ್ದರೂ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಸೈನಿಕರ ವಿರುದ್ಧ ಹೋರಾಡಿದ ಓಬವ್ವ ಅವರ ಆದರ್ಶ ಎಲ್ಲರಿಗೂ ಮಾದರಿ. ಅವರ ಶೌರ್ಯದ ಸಾಧನೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ವೀರವನಿತೆ ಒನಕೆ ಓಬವ್ವ ಅಭಿಮಾನಿ ಬಳಗ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಶತ್ರು ಸೈನ್ಯವು ಚಿತ್ರದುರ್ಗದ ಕೋಟೆ ಮೇಲೆ ಹಠಾತ್ತಾಗಿ ಆಕ್ರಮಿಸಿದಾಗ ಒನಕೆಯನ್ನೇ ಅಸ್ತ್ರವಾಗಿಟ್ಟುಕೊಂಡು ಶತ್ರುಗಳನ್ನು ಎದುರಿಸಿ ಶೌರ್ಯ, ಸಾಹಸ ಮೆರೆದ ಧೀರ ಮಹಿಳೆ ಒನಕೆ ಓಬವ್ವ. ವೈರಿಗಳನ್ನು ಸದೆಬಡಿದ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಎಂ.ವಿ.ರುದ್ರೇಶ್​, ಗ್ರಾಪಂ ಮಾಜಿ ಅಧ್ಯೆ ಮಂಜಮ್ಮ, ವೀರಶೈವ ಮಹಾಸಭೆ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ರಾಜಮ್ಮಪ್ರಕಾಶ್​, ಜನಸೈನ್ಯ ಸಂಘಟನೆ ಅಧ್ಯಕ್ಷ ನರಸಿಂಹಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ಶಿರಸ್ತೇದಾರ್​ ವಿಮಲಾ, ರಾಜಸ್ವ ನಿರೀಕ್ಷಕ ಶಿವಪ್ರಸಾದ್​, ಮುಖಂಡ ಗಂಗರಾಜು, ರವಿಕುಮಾರ್​, ನಾಗೇಂದ್ರ, ಕನಕರಾಜು, ಹನುಮಂತರಾಜು ಇದ್ದರು.