ಭಾನುವಾರ ಸುರಿದ ಮಳೆಗೆ ಕೆಂಭಾವಿ ಪಟ್ಟಣದ ಸ್ಮಶಾನದಲ್ಲಿ ನೀರು ನಿಂತಿರುವುದು.
ಕೆಂಭಾವಿ : ಬರಗಾಲದ ಛಾಯೆ ಆವರಿಸಿ ಬೆಳೆಗಳು ಒಣಗುವ ಆತಂಕದಲ್ಲಿದ್ದ ರೈತರಿಗೆ ಭಾನುವಾರ ಒಂದು ಗಂಟೆಗೂ ಅಽಕ ಮಳೆ ಸುರಿದಿದ್ದರಿಂದ ಅನ್ನದಾತರಲ್ಲಿ ಸಂಭ್ರಮ ಮನೆ ಮಾಡಿದೆ.
ಕೆಂಭಾವಿ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ಒಣಗುತ್ತಿರುವ ಬೆಳೆಗಳಿಗೆ ಜೀವಕಳೆ ಬಂದAತಾಗಿದೆ. ಕಳೆದ ಹಲವು ದಿನಗಳಿಂದ ಮಳೆ ಕೈಕೊಟ್ಟಿದ್ದರಿಂದ ರೈತರು ಆತಂಕದಲ್ಲಿದ್ದರು. ಬಿತ್ತದ ಬೆಳೆ ಒಣಗುವ ಹಂತಕ್ಕೆ ತಲುಪಿತ್ತು. ಗ್ರಾಮೀಣ ಭಾಗಗಳಲ್ಲಿ ಮಳೆಗಾಗಿ ವಿವಿಧ ಪೂಜೆಗಳನ್ನು ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.
ಆದರೆ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹೊಲ-ಗದ್ದೆಗಳಿಗೆ ನೀರು ನುಗ್ಗಿದ್ದು, ಜಮೀನುಗಳಲ್ಲಿ ನೀರು ಹರಿಯತೊಡಗಿತು. ಪಟ್ಟಣದ ಹಲವು ರಸ್ತೆಗಳ ಮೇಲೆಯೂ ನೀರು ಹರಿದು ಕೆಲಕಾಲ ರಸ್ತೆ ಕಾಣದಂತಾಗಿತ್ತು. ೬೮ ಎಂಎA ಮಳೆ ಪ್ರಮಾಣ ದಾಖಲಾಗಿದ್ದು ಸೋಮವಾರವೂ ಮೋಡ ಕವಿದ ವಾತಾವರಣ ಮುಂದುವರೆದಿದೆ. ಅಲ್ಲದೆ ಸೋಮವಾರವೂ ಮಳೆಯಾಗುವ ಲಕ್ಷಣ ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬರದ ಆತಂಕದ ನಡುವೆ ಸುರಿದ ಈ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಮಳೆ ಮುಂದುವರಿದರೆ ಬೆಳೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿ ಮೂಡಿದ್ದು, ವರುಣನ ಆಗಮನ ಅನ್ನದಾತನ ಮೊಗದಲ್ಲಿ ಮಂದಹಾಸ ಬಂದAತಾಗಿದೆ. ಇನ್ನಷ್ಟು ಮಳೆಯಾದರೆ ಉತ್ತಮ ಬೆಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅನ್ನದಾತರು.
ಕೆರೆಯಂತಾದ ಸ್ಮಶಾನ
ಪುರಸಭೆ ಅಽಕಾರಿಗಳ ದಿವ್ಯ ನಿರ್ಲಕ್ಷ ಮತ್ತು ಬೇಜವಾಬ್ದಾರಿರಿಂದ ಪ್ರತಿ ಬಾರಿ ಮಳೆ ಬಂದಾಗ ಪಟ್ಟಣದ ಬ್ರಾಹ್ಮಣ ಸಮಾಜದ ಸ್ಮಶಾನ ಕೆರೆಯಂತಾಗುತ್ತಿದ್ದು ಭಾನುವಾರ ಸುರಿದ ಮಳೆಯಿಂದ ಮತ್ತೆ ಸ್ಮಶಾನಕ್ಕೆ ನೀರು ನುಗ್ಗಿ ಕೆರೆಯಂತಾಗಿದೆ. ಈ ಬಗ್ಗೆ ಹಲವು ಬಾರಿ ಸಮಾಜದ ಪ್ರಮುಖರು ಪುರಸಭೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೆ ಪ್ರತಿಬಾರಿ ನೀರು ನಿಲ್ಲುತ್ತಿದ್ದು ಇದು ಹೀಗೆ ಮುಂದುವರೆದರೆ ಇತ್ತೀಚಿಗೆ ನಿರ್ಮಾಣವಾದ ಸ್ಮಶಾನದ ಕಂಪೌAಡ್ ಗೋಡೆ ಬೀಳುವ ಹಂತಕ್ಕೆ ತಲುಪಲಿದೆ ಎಂಬ ಆಂತಕ್ಕೆ ಎದುರಾಗಿದೆ.