puls polio campaign 
ರಾಜ್ಯ

28ರಿಂದ ಪಲ್ಸ್ ಪೋಲಿಯೋ ಅಭಿಯಾನ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ 64.84 ಲಕ್ಷ ಮಕ್ಕಳನ್ನು ತಲುಪುವ ಗುರಿ* 1.14 ಲಕ್ಷ ಕಾರ್ಯಕರ್ತರ ಭಾಗಿ
ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಜೂನ್ 28 ರಂದು ( ಭಾನುವಾರ) ಪಲ್ಸ್ ಪೋಲಿಯೋ ಅಭಿಯಾನ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 64.84 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಪೋಲಿಯೋ ಹನಿ ವಿತರಣೆಗೆ ರಾಜ್ಯದಲ್ಲಿ 36,076 ಬೂತ್‌ಗಳನ್ನು ಗುರುತಿಸಲಾಗಿದೆ. ಗುಡ್ಡಗಾಡು ಪ್ರದೇಶಗಳನ್ನು ತಲುಪಲು 988 ಮೊಬೈಲ್ ತಂಡ ರಚಿಸಲಾಗಿದೆ. 2,125 ಟ್ರಾನ್ಸಿಟ್ ತಂಡವು ರೈಲು, ಬಸ್ ನಿಲ್ದಾಣ ಸೇರಿ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ. ಕಾರ್ಯಕ್ರಮಕ್ಕೆ 1.14 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದ್ದು, 7,197 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.
ರಾಜ್ಯದ ಆಸ್ಪತ್ರೆಗಳು, ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶ ಸೇರಿ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಪೋಲಿಯೋ ವಿರುದ್ಧದ ಹೋರಾಟದಲ್ಲಿ ಗೆಲುವು ಮುಂದುವರಿಸಲು ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮೊದಲನೇ ದಿನ (ಜೂ.28) ಬೂತ್‌ಗಳಲ್ಲಿ ಹಾಗೂ ನಂತರದ 2 ಮತ್ತು 3ನೇ ದಿನಗಳಲ್ಲಿ ಮನೆ ಮೆನೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಭಾರತ ಈಗ ಪೋಲಿಯೋ ಮುಕ್ತವಾಗಿದ್ದು, ಈ ಸ್ಥಿತಿಯನ್ನು ಕಾಯ್ದುಕೊಳ್ಳಲು ಕಡ್ಡಾಯವಾಗಿ ಹನಿ ಹಾಕಿಸಬೇಕು. ಹತ್ತಿರದ ಲಸಿಕಾ ಕೇಂದ್ರ ಪತ್ತೆಗೆ ಘೆಛಿಚ್ಟಚಿ ್ಖಚ್ಚ್ಚಜ್ಞಿಠಿಜಿಟ್ಞ ್ಚಛ್ಞಿಠ್ಟಿಛಿ ಓಚ್ಟ್ಞಠಿ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಇನ್‌ಸ್ಟಾಲ್ ಮಾಡಿಕೊಂಡು ಕೇಂದ್ರ ಹುಡುಕಬಹುದು ಎಂದರು.