Pulse polio campaign from 21st 
ರಾಜ್ಯ

21ರಿಂದ ಪಲ್ಸ್​ ಪೋಲಿಯೋ ಅಭಿಯಾನ

ತುಮಕೂರು ಡೆಸ್ಕ್
ತುರುವೇಕೆರೆ: ಮಕ್ಕಳ ಆರೋಗ್ಯದ ದೃಷ್ಠಿಯಿಂದ ಇಡೀ ದೇಶಾದ್ಯಂತ ಡಿ.21 ರಿಂದ 24 ರವರೆಗೆ ಹಮ್ಮಿಕೊಂಡಿರುವ ಪಲ್ಸ್​ ಪೋಲಿಯೋ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ್​ ಎನ್​.ಎ.ಕುಂಇ ಅಹಮದ್​ ತಿಳಿಸಿದರು.
ತಾಲೂಕಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,
ತಾಲೂಕಿನಲ್ಲಿ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಸುಮಾರು 9,533 ಮಕ್ಕಳಿಗೆ ಪಲ್ಸ್​ ಪೋಲಿಯೋ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿ ಹಲವಾರು ಸ್ವಯಂ ಸೇವಕರೂ ಸಹ ಈ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದರು.
ಒಟ್ಟು 90 ಬೂತ್​ಗಳಲ್ಲಿ ಪೋಲಿಯೋ ಹನಿ ಹಾಕಿಸುವ ಕಾರ್ಯ ನಡೆಯಲಿದೆ. ಪಟ್ಟಣದಲ್ಲಿ 1,189 ಮಕ್ಕಳು, ಗ್ರಾಮಾಂತರ ಪ್ರದೇಶದಲ್ಲಿ 8,344 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು.
ತಾಲೂಕಿನ ಬಾಣಸಂದ್ರದ ರೈಲ್ವೆ ನಿಲ್ದಾಣ, ಅಮ್ಮಸಂದ್ರದ ರೈಲ್ವೆ ನಿಲ್ದಾಣ, ಮಲ್ಲಾಘಟ್ಟದ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯ ಮತ್ತು ತುರುವೇಕೆರೆಯ ಬಸ್​ ನಿಲ್ದಾಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲು ಸನ್ನದ್ಧರಾಗಿರುತ್ತಾರೆ. 22 ರಿಂದ 24 ಅವರೆಗೆ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪೋಲಿಯೋ ಹನಿಯಿಂದ ವಂಚಿತರಾಗಿರುವ ಮಕ್ಕಳಿಗೆ ಅಲ್ಲೇ ಪೋಲಿಯೋ ಹನಿ ಹಾಕಲಾಗುವುದು ಎಂದರು.