ಸುಂಟಿಕೊಪ್ಪ, ಗದ್ದೆಹಳ್ಳ ಹಾಗೂ ಕೊಡಗರಹಳ್ಳಿ ರಾಷ್ಟ್ರೀಯ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಿ.ಆರ್.ಸುನಿಲ್‌ಕುಮಾರ್, ಆಶಾ ಸುರೇಶ್ ಇತರರು ಇದ್ದರು
ಸುಂಟಿಕೊಪ್ಪ: ಸುಂಟಿಕೊಪ್ಪ, ಗದ್ದೆಹಳ್ಳ ಹಾಗೂ ಕೊಡಗರಹಳ್ಳಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಯಿತು.
ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನ ಶೇ.100 ರಷ್ಟು ಪ್ರಗತಿ ಸಾಧಿಸಿದರೂ ಕೂಡ ಉಳಿದು ಹೋಗಿರ ಬಹುದಾದ ಸಾಧ್ಯತೆಗಳನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಿಂದ ತೆರೆಯಲಾದ ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿದ್ದಾರೆ. ಲಸಿಕೆಯಿಂದ ಬಿಟ್ಟು ಹೋಗಿರುವ ಮಕ್ಕಳನ್ನು ಹುಡುಕಿಕೊಂಡು ಮನೆ ಮನೆಗೆ ತೆರಳಿ ಪಲ್ಸ್ ಪೊಲಿಯೋ ಲಸಿಕೆ ನೀಡುತ್ತಿದ್ದಾರೆ.
ಗದ್ದೆಹಳ್ಳದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಕೊಡಗರಹಳ್ಳಿಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಮುಖ್ಯಪೇದೆ ಆಶಾ ಸುರೇಶ್ ಮಕ್ಕಳಿಗೆ ಹನಿಯನ್ನು ಹಾಕುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.