pules-life-and-achievements-are-an-inspiration-to-all
ಪಾವಗಡ: ಕೇಂದ್ರ ಸರ್ಕಾರ ನರೇಗಾ ಯೋಜನೆ ಕಾಯ್ದೆಯನ್ನು ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಎಂದು ಬದಲಾಯಿಸಿರುವುದರಿಂದ ರಾಜ್ಯದ ಕೋಟ್ಯಾಂತರ ಬಡ ಕೂಲಿ ಕಾರ್ಮಿಕರಿಗೆ ಅನ್ಯಾವಾಗಿದೆ. ಇದನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ತಮಟೆ ಕೂಲಿ ಕಾರ್ಮಿಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಕೆ.ಬಿ.ಒಬಳೇಶ್ ಒತ್ತಾಯಿಸಿದರು.
ಪಟ್ಟಣದ ಗುರುಭವನದ ಆವರಣದಲ್ಲಿ ಶನಿವಾರ ತಮಟೆ ಕೂಲಿ ಕಾರ್ಮಿಕ ಸಂಘದಿಂದ ಆಯೋಜಿಸಿದ್ದ ಸಾವಿತ್ರಿಬಾಯಿ ುಲೆ 195ನೇ ಜನ್ಮದಿನಾಚರಣೆ ಮತ್ತು ನರೇಗಾ ಯೋಜನೆ ಸಮಗ್ರ ಅನುಷ್ಠಾನಕ್ಕಾಗಿ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಕೆಲಸ ಸಿಗದೆ, ಮಾಡಿದ ಕೆಲಸಕ್ಕೆ ಹಣವೂ ಸಂದಾಯವಾಗದೇ ತೊಂದರೆಯಾಗುತ್ತಿದೆ. ಹೊಟ್ಟೆ ಪಾಡಿಗಾಗಿ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಜೀವನ ನಿರ್ವಹಣೆಗೆ ಕಷ್ಟವಾಗಿ ಕೂಲಿ ಕಾರ್ಮಿಕರು ಬೆಂಗಳೂರು, ಬಳ್ಳಾರಿ, ಮೈಸೂರು ಸೇರಿದಂತೆ ಹೊರ ರಾಜ್ಯಗಳಾದ ಆಂಧ್ರ, ಮಹಾರಾಷ್ಟ್ರ ಕಡೆ ವಲಸೆ ಹೋಗುವಂತಾಗುತ್ತದೆ. ಆದ್ದರಿಂದ ನರೇಗಾ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ುಲೆ ಅವರ ಜೀವನ ಚರಿತ್ರೆ ತಿಳಿಸಿ. ಅವರ ಜೀವನ, ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ತಮ್ಮ ದಿನನಿತ್ಯ ದುಡಿಮೆಯನ್ನು ದುಶ್ಚಟಗಳಿಗೆ ವ್ಯಯಿಸದೇ, ಉಳಿತಾಯ ಮಾಡಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ. ಶಿಕ್ಷಣದಿಂದ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರಿಯಲು ಸಾಧ್ಯ ಎಂದರು.
ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆರ್.ವಿ.ಚಂದ್ರಶೇಖರ್ ಮಾತನಾಡಿ, ಸಾವಿತ್ರಿಬಾಯಿ ುಲೆ ಅವರು ಹೆಣ್ಣುಮಕ್ಕಳ ಶೋಷಣೆ ವಿರುದ್ಧ ಹೋರಾಡಿ ಮಹಿಳೆಯರು ಶಿಕ್ಷಣ ಪಡೆಯುವಂತೆ ಮಾಡಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.
ತಮಟೆ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಚಂದ್ರಶೇಖರ್, ತಮಟೆ ಸುಬ್ಬರಾಯಪ್ಪ, ಕನ್ನಮೇಡಿ ಕೃಷ್ಣಮೂರ್ತಿ, ಪಿ ಹನುಮಂತರಾಯಪ್ಪ, ವಳ್ಳೂರ್ ನಾಗೇಶ್, ಮಧುಗಿರಿ ಭರತ್ ಮತ್ತಿತರರು ಇದ್ದರು.