ಬೆಂಗಳೂರು: ಪುಲೀಕೆಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ‘ಐಇಡಿ ಸ್ಫೋಟ’ (ಸುಧಾರಿತ ಕಚ್ಚಾ ಬಾಂಬ್) ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ತನಿಖೆ ವೇಳೆ ಬಯಲಾಗಿದೆ.
ಅಸ್ಸಾಂ ರಾಜ್ಯದ ಬುರ‌್ಹಾನ್ ಅಹ್ಮದ್ ಬರ್ಭುಯ್ಯ (21), ಜಾಹಿದ್‌ಪುಲ್ ಹುಸೇನ್ (27), ಸಾಜಿದುಲ್ ಇಸ್ಲಾಮ್ ಲಶ್ಕರ್ (22) ಬಂಧಿತರು. ಮೂವರು ಆರೋಪಿಗಳು ಹಾಗೂ ಹತ್ಯೆಗೆ ಸಂಚು ರೂಪಿಸಿದ್ದ ಸೆಕ್ಯೂರಿಟಿ ಗಾರ್ಡ್ ಒಂದೇ ಗ್ರಾಮದವರು. ಪುಲೀಕೆಶಿನಗರದ ಜರ್ಮಿಯಾ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದ 5ನೇ ಮಹಡಿಯಲ್ಲಿ ಅ.20ರ ಮಧ್ಯಾಹ್ನ ಐಇಡಿ ಸ್ಫೋಟಗೊಳಿಸಿದ್ದಾರೆ. ಆದರೆ, ಅ.19ರಂದೇ ಐಇಡಿ ಸ್ಫೋಟಗೊಳಿಸಲು ಸಂಚು ರೂಪಿಸಿದ್ದರು.
ಸ್ಫೋಟದ ಗಂಭೀರತೆ ಅರಿತ ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ನೇತೃತ್ವದಲ್ಲಿ 100 ಸಿಬ್ಬಂದಿಗಳನ್ನು ಒಳಗೊಂಡ 10 ವಿಶೇಷ ತಂಡ ರಚನೆ ಮಾಡಿ ಕೃತ್ಯ ಎಸಗಿದ್ದವರನ್ನು ಬಂಧಿಸಿದ್ದಾರೆ.
ಮಸ್ಕಿಯಲ್ಲಿ ಐಇಡಿ ತಯಾರು:
ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಐಇಡಿಯನ್ನು ಬುರ‌್ಹಾನ್ ಅಹ್ಮದ್ ಬುರ್ಭುಯ್ಯ ಸಿದ್ಧಪಡಿಸಿದ್ದ. ಇದಕ್ಕೆ ಬೇಕಾದ ವಸ್ತುಗಳ ಖರೀದಿಗೆ ಸಾಜಿದುಲ್ ಹಾಗೂ ಜಾಹಿದ್‌ವುಲ್ ಹಣಕಾಸು ನೆರವು ಮಾಡಿದ್ದರು. ಮೂವರು ಬಾಲ್ಯ ಸ್ನೇಹಿತರು. ಮಸ್ಕಿಯಲ್ಲಿ ಬುರ‌್ಹಾನ್ ಅಹ್ಮದ್ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡು ಕಳೆದ ಒಂದೂವರೆ ವರ್ಷದಿಂದ ವಾಸವಾಗಿದ್ದ. ಜಾಹಿದ್‌ವುಲ್ ಮತ್ತು ಸಾಜಿದುಲ್ ಬೆಂಗಳೂರಿನ ಬೇಕರಿ ಮತ್ತು ಕೆೆಯಲ್ಲಿ ಕೆಲಸ ಮಾಡಿಕೊಂಡು ಕಳೆದ 8 ವರ್ಷಗಳಿಂದ ವಾಸವಾಗಿದ್ದರು. ಸಮಯ ಸಿಕ್ಕಾಗ ಬುರ‌್ಹಾನ್ ಅಹ್ಮದ್ ಬೆಂಗಳೂರಿಗೆ ಬಂದು ಹೋಗುತ್ತಿದ್ದ.
ಬಸ್‌ನಲ್ಲಿ ಸ್ಫೋಟಕ ವಸ್ತು ಐಇಡಿ ಸಾಗಾಟ:
ಎಲೆಕ್ಟ್ರಿಕಲ್ ಕೆಲಸದ ನಡುವೆಯೂ ಬುರ‌್ಹಾನ್ ಅಹ್ಮದ್ ತಿಂಗಳಿಂದ ಹಂತ ಹಂತವಾಗಿ ಕಚ್ಚಾ ಬಾಂಬ್ ಮನೆಯಲ್ಲಿಯೇ ತಯಾರಿಸಿದ್ದ. ಅದನ್ನು ಅ.16ರಂದು ರಾಯಚೂರುನಿಂದ ಬೆಂಗಳೂರಿಗೆ ಬಸ್‌ನಲ್ಲಿ ತಂದಿದ್ದ. ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್ ಹತ್ಯೆ ಮಾಡಲು ಎರಡು ದಿನ ಮುಂಚೇಯ ಬೆಂಗಳೂರಿಗೆ ಆಗಮಿಸಿ ನಂತರ ಸಾಜಿದುಲ್ ಇಸ್ಲಾಮ್ ಮನೆಯಲ್ಲಿ ಆಶ್ರಯ ಪಡೆದಿದ್ದ.
ಕಟ್ಟಡದ ಮಾಲೀಕ ಪಾರು:
ಅ.19ರಂದು ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟದ ಪಕ್ಕದ ಅಂಗಡಿಯಲ್ಲಿ ಪಾರ್ಸೆಲ್ ಇಟ್ಟಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರೊಬ್ಬರ ಮೊಬೈಲ್ ಪಡೆದು ಅಲ್ಲಾವುದ್ದೀನ್‌ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಬುರ‌್ಹಾನ್ ಅಹ್ಮದ್ ಮಾತನಾಡಿದ್ದಾನೆ. ಆದರೆ ಸೆಕ್ಯೂರಿಟಿ ಗಾರ್ಡ್‌ಗೆ ಹಿಂದೆ ಮಾತನಾಡು ಬಾರದ ಪರಿಣಾಮ ಪಾರ್ಸೆಲ್ ಅನ್ನು ಕಟ್ಟಡ ಮಾಲೀಕ ರೆಹಮಾನ್‌ಗೆ ನೀಡಿದ್ದಾನೆ. ಅವರು ಅದನ್ನು ಪರಿಶೀಲಿಸಿ ಇದು ನನ್ನದಲ್ಲ ಬೇರೆ ಯಾರದ್ದೋ ಇರಬೇಕು ಕೇಳಿ ನೋಡು ಎಂದು ಕಳುಹಿಸಿದ್ದಾರೆ. ಇದರಿಂದ ಕಟ್ಟಡದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆ ಪಾರ್ಸೆಲ್‌ನ್ನು ಸೆಕ್ಯೂರಿಟಿ ಗಾರ್ಡ್ ತನ್ನ ಬಳಿಯ ಒಂದು ದಿನ ಇಟ್ಟುಕೊಂಡಿದ್ದಾನೆ.
ದುಷ್ಕರ್ಮಿಗಳು ರೂಪಿಸಿದ್ದ ಸಂಚು ಹಾಗೂ ಐಇಡಿ ಸ್ಫೋಟಗೊಳ್ಳದ ಪರಿಣಾಮ ಅನುಮಾನಗೊಂಡು ಅ.20ರಂದು ಮಧ್ಯಾಹ್ನ ಮತ್ತೆ ಅನಾಮಧೇಯ ವ್ಯಕ್ತಿಯೊಬ್ಬರ ಮೊಬೈಲ್‌ನಿಂದ ಸೆಕ್ಯೂರಿಟಿಗೆ ಕರೆ ಮಾಡಿ ಪಾರ್ಸೆಲ್ ಓಪನ್ ಮಾಡುವಂತೆ ಹೇಳಿದ್ದಾರೆ. ಹಿಂದಿ ಭಾಷೆ ಅರ್ಥವಾಗದ ಪರಿಣಾಮ ಸೆಕ್ಯೂರಿಟಿ ಗಾರ್ಡ್ ಐದನೇ ಮಹಡಿಗೆ ಪಾರ್ಸೆಲ್ ಸಮೇತ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದ ಇತರೆ ಕಾರ್ಮಿಕರಿಗೆ ಕೇಳಿದ್ದಾರೆ. ಯಾರೊಬ್ಬರು ತಮ್ಮದಲ್ಲ ಎಂದು ಹೇಳಿದ್ದಾರೆ. ಹಿಂದಿಯಲ್ಲಿ ಯಾರೋ ಮಾತನಾಡುತ್ತಿದ್ದಾರೆ ಅಲ್ಲಿಯೇ ಇದ್ದ ಪೆಂಟರ್ ಸೂರಜ್ ಕುಮಾರ್‌ಗೆ ೆನ್ ನೀಡಿದ್ದಾನೆ. ಅನಾಮಧೇಯ ವ್ಯಕ್ತಿಯೊಂದಿಗೆ ಮಾತನಾಡುತ್ತ ಪಾರ್ಸೆಲ್ ತೆರೆಯುತ್ತಿದ್ದಂತೆ ಐಇಡಿ ಸ್ಫೋಟಗೊಂಡಿದೆ.
ಸ್ಫೋಟದಲ್ಲಿ ಗಾಯಗೊಂಡಿದ್ದ ಪೆಂಟರ್ ಉತ್ತರ ಪ್ರದೇಶ ಸೂರಜ್ ಕುಮಾರ್, ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಸ್ಸಾಂ ಮೂಲದ ಎಂ. ಅಲ್ಲಾವುದ್ದೀನ್ ಗಾಯಗೊಂಡಿದ್ದರು. ಆದರೆ, ಸೂರಜ್ ಕುಮಾರ್‌ಗೆ ಕೈ, ಮುಖಕ್ಕೆ ಗಂಭೀರ ಗಾಯಗಳಾಗಿವೆ.
ತಂಗಿ ಮದುವೆ ನಿಲ್ಲಿಸಿದ್ದರ ದ್ವೇಷ:
ಆರೋಪಿ ಜಾಹಿದ್‌ವುಲ್ ಹಸುಏನ್ ಬರ್ಭುಯ್ಯ ತಂಗಿಯ ಮದುವೆ ಬೆರೆಯೊಬ್ಬನ ಜತೆ ನಿಶ್ಚಯವಾಗಿತ್ತು. ಆದರೆ, ಜಮೀನು, ಹಣದ ವಿಚಾರವಾಗಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅಲ್ಲಾವುದ್ದೀನ್ ಜಾಹಿವುಲ್ ತಂಗಿಯ ಮದುವೆಯನ್ನು ನಿಲ್ಲಿಸಿದ್ದ ಎಂಬ ಕಾರಣಕ್ಕೆ ಈತನನ್ನು ಹತ್ಯೆ ಮಾಡುವ ಯೋಜನೆ ರೂಪಿಸಿದ್ದ. ತಾಂತ್ರಿಕವಾಗಿ ಪರಿಣತಿ ಹೊಂದಿದ ಬುರ‌್ಹಾನ್ ಅಹ್ಮದ್ ಜತೆ ಸೇರಿ ಐಇಡಿ ತಯಾರಿ ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು.
ಮಸ್ಕಿಯಲ್ಲಿ ಪ್ರಯೋಗ:
ಆರೋಪಿ ಬುರ‌್ಹಾನ್ ಅಹ್ಮದ್ ಮಸ್ಕಿಯಲ್ಲಿ ಇಂಟರ್‌ನೆಟ್, ಯೂಟ್ಯೂಬ್ ನೋಡಿ ಐಇಡಿ ತಯಾರಿಸಿದ್ದ. ಅದಕ್ಕೆ ಬೇಕಾಗುವ ಹಣಕಾಸು, ವಸ್ತುಗಳ ನೆರವನ್ನು ಜಾಹಿದ್‌ವುಲ್ ಮತ್ತು ಸಾಜಿದುಲ್ ನೀಡಿದ್ದರು. ಪ್ರಾಯೋಗಿಕವಾಗಿ ತಾನು ಇದ್ದ ಮನೆಯಲ್ಲಿ ಅದನ್ನೂ ಸ್ಫೋಟಗೊಳಿಸಿ ಪರಿಶೀಲನೆ ನಡೆಸಿದ್ದ. ಅದು ಯಶಸ್ವಿಯಾದ ಬಳಿಕ ಬ್ಯಾಟರಿ ಬಾಕ್ಸ್‌ನಲ್ಲಿ ಮತ್ತೊಂದು ಐಇಡಿ ತಯಾರಿಸಿದ್ದ. ಸ್ಫೋಟ ಕೃತ್ಯದ ಬಗ್ಗೆ ಮೂವರು ವಾಟ್ಸ್‌ಪ್ ಗ್ರೂಪ್ ರಚನೆ ಮಾಡಿಕೊಂಡು ಸಂವಹನ ನಡೆಸುತ್ತಿದ್ದರು.
ತಾಂತ್ರಿಕ ಸಾಕ್ಷ್ಯದಿಂದ ಆರೋಪಿಗಳ ಪತ್ತೆ
ಆರೋಪಿಗಳ ಪತ್ತೆಗೆ ಪೊಲೀಸರು 1500 ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೂ 2ದಿನ ಮುಂಚಿವಾಗಿ ನಿರ್ಮಾಣ ಹಂತದ ಕಟ್ಟದ ಬಳಿ ಓಡಾಡಿದ್ದ ಮೊಬೈಲ್ ಟವರ್ ಲೋಕೆಷನ್ ಆಧಾದ ಮೇಲೆ ಸ್ಫೋಟ ನಡೆದ 72 ಗಂಟೆಯಲ್ಲಿ ಜಾಹಿದ್‌ವುಲ್ ಹುಸೇನ್ ಹಾಗೂ ಸಾಜಿದುಲ್ ಇಸ್ಲಾಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಮಸ್ಕಿಯಲ್ಲಿ ತಲೆಮರೆಸಿಕೊಂಡಿದ್ದ ಐಇಡಿ ತಯಾರಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಮೊಬೈಲ್ ಸಂಭಾಷಣೆ ಹಾಗೂ ವಾಟ್ಸ್‌ಪ್ ಚಾಟ್‌ನಲ್ಲಿ ಆರೋಪಿಗಳು ಸಿಲ್ಲೆಟಿ ಅಸ್ಸಾಮಿ ಭಾಷೆಯಲ್ಲಿ ಪರಸ್ಪರ ಮಾತನಾಡಿದ್ದರು.