ಸಂಚಾರ ಸಿಕ್ಕಲ್ಲಿ ಸಾರ್ವಜನಿಕರ ಪರದಾಟ traffic jams
ಕಾಮಸಮುದ್ರ: ಬಂಗಾರಪೇಟೆ ತಾಲೂಕು ಕಾಮಸಮುದ್ರ ಗ್ರಾಮದಲ್ಲಿರುವ ರೈಲ್ವೆ ಗೇಟ್ನ ತಾಂತ್ರಿಕ ದೋಷದಿಂದಾಗಿ ಶುಕ್ರವಾರ ಸುಮಾರು 1 ಗಂಟೆ ಕಾಲ ಸಂಚಾರ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಿದರು.traffic jams
ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದವರು, ಶಾಲೆ&ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ತಲುಪಲು ಸಾಧ್ಯವಾಗದೆ ಸಂಕಷ್ಟ ಅನುಭವಿಸಿದರು.
ರೈಲ್ವೆ ಗೇಟ್ ದೀರ್ಕಾಲ ಮುಚ್ಚಿದ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ಕಂಡು ಬಂದಿತು. ಬೈಕ್, ಕಾರು, ಬಸ್ಗಳು ಸೇರಿ ಅನೇಕ ವಾಹನಗಳು ನಿಂತಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಕೆಲವು ವಿದ್ಯಾರ್ಥಿಗಳು ಪರೀೆ ಹಾಗೂ ತರಗತಿಗಳಿಗೆ ತಡವಾಗಿ ತಲುಪಿದರೆ, ಕೆಲಸಗಾರರು ಕಚೇರಿಗಳಿಗೆ ಸಕಾಲಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಈ ಸಮಸ್ಯೆ ಇದೆನೂ ಮೊದಲಲ್ಲ, ಪದೇಪದೆ ಇಂತಹ ತೊಂದರೆ ಉಂಟಾಗುತ್ತಿದ್ದು, ರೈಲ್ವೆ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ರ್ನಿಲಕ್ಷ$್ಯವಹಿಸುತ್ತಿದೆ. ಕಚೇರಿಗಳಲ್ಲಿ ಹೇಗೋ ಕಾರಣ ಹೇಳಿಕೊಳ್ಳಬಹುದು ಆದರೆ, ಪರೀಾ ಸಮಯದಲ್ಲಿ ವಿದ್ಯಾರ್ಥಿಗಳು ಕೇಂದ್ರಕ್ಕೆ ಹಾಜರಾಗುವುದು ತಡವಾದರೆ ಅವರ ಭವಿಷ್ಯವೇ ಅತಂತ್ರವಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಪರೀಾ ವೇಳೆಗಿಂತ ಮೊದಲೇ ಕೇಂದ್ರ ಸೇರಬೇಕಾಗಿರುವುದರಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಪರಿಸ್ಥಿತಿಯ ಸೂಕ್ಷ$್ಮತೆಯನ್ನು ಅರಿತು ತಣ ಸಮಸ್ಯೆ ನಿವಾರಣೆ ಮಾಡಿ, ಶಾಶ್ವತವಾಗಿ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.