ಯಾದಗಿರಿಯಲ್ಲಿ ಶುಕ್ರವಾರ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಜಿಲ್ಲಾಽಕಾರಿ ರಾಹುಲ್ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಪೌರಾಯುಕ್ತ ಉಮೇಶ ಚವ್ಹಾಣ್, ಶರಣಮ್ಮ ಇತರರಿದ್ದರು. 
ರಾಜ್ಯ

ನಗರ ಸೌಂದರ್ಯಕ್ಕೆ ಜನರ ಸಹಕಾರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಡಿಸಿ ರಾಹುಲ್ ಪಾಂಡ್ವೆ ಹೇಳಿಕೆ
  • ಎಂಟು ಎಕರೆಯಲ್ಲಿ ಬೃಹತ್ ಶಾಪಿಂಗ್ ಮಳಿಗೆ ನಿರ್ಮಾಣ
ಯಾದಗಿರಿ :

ಜಿ¯್ಲÁ ಕೇಂದ್ರ ಸ್ಥಾನದ ಈ ನಗರದ ಸೌಂದರ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜಿ¯್ಲÁಡಳಿತ ಮತ್ತು ನಗರಸಭೆ ಸ್ಥಳೀಯ ಶಾಸಕರ ಸಹಕಾರದಿಂದ ಕೆಲಸ ಮಾಡುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಬೇಕು ಎಂದು ಜಿ¯್ಲÁಽಕಾರಿ ರಾಹುಲï ಪಾಂಡ್ವೆ ಹೇಳಿದರು.

ನಗರ ಸಂಚಾರದ ಮೂರನೇ ದಿನವಾದ ಶುಕ್ರವಾರ ಜಿ¯್ಲÁ ಪೊಲೀಸ್ ವರಿಷ್ಠಾಽಕಾರಿ ಪೃಥ್ವಿಕ್ ಶಂಕರ್ ಅವರೊಂದಿಗೆ ನಗರದ ವಿವಿಧೆಡೆ ತೆರಳಿ ಅಲ್ಲಿನ ನೂನ್ಯತೆಗಳನ್ನು ಪರಿಶೀಲಿಸಿದರು.
ನಗರದ ಹೃದಯ ಭಾಗದಲ್ಲಿರುವ ಶಾಸಿö ಚೌಕ್ ಹತ್ತಿರ ನಗರಸಭೆಗೆ ಸೇರಿದ ಎಂಟು ಎಕರೆ ಅಮೂಲ್ಯ ಮತ್ತು ಅತ್ಯಽಕ ಬೆಲೆ ಬಾಳುವ ಜಾಗವಿದೆ. ಈಗ ಆ ಸ್ಥಳದಲ್ಲಿರುವ ಸಣ್ಣ, ಪುಟ್ಟ ಅಂಗಡಿಗಳನ್ನು ತೆರವುಗೊಳಿಸಿ ಬಹುದೊಡ್ಡ ಶಾಪಿಂಗ್ ಕಾಂಪ್ಲೆಸ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಇದರಿಂದ ನಗರಸಭೆ ಆದಾಯ ಹೆಚ್ಚಿಗೆ ಆಗುವ ಮೂಲಕ ನಗರದ ಅಭಿವೃದ್ಧಿ ಇನ್ನೂ ಹೆಚ್ಚು ಒತ್ತು ನೀಡಲಾಗುವುದು. ಶಾಸಿö ಸರ್ಕಲï ಬಳಿ ಇರುವ ಸಾರ್ವಜನಿಕರ ಮೂತ್ರಾಲಯದ ಪಕ್ಕದಲ್ಲಿನ ಹದಗೆಟ್ಟ ಚರಂಡಿ ದುರಸ್ತಿಗೊಳಿಸುವ ಮತ್ತು ಪೆಟ್ರೋಲï ಬಂಕ್ ಮುಂದಿನ ತೆಗ್ಗು ಮುಚ್ಚುವ ಕಾಮಗಾರಿ ಖುz್ದÁಗಿ ಪರಿಶೀಲಿಸಿದರು.
ಹೊಸ ಬಸ್ ನಿಲ್ದಾಣದ ಮುಂದೆ ಅತಿಕ್ರಮಣವಾಗಿರುವ ರಸ್ತೆ ತೆರವುಗೊಳಿಸಲು ಪೌರಾಯುಕ್ತ ಉಮೇಶ ಚವ್ಹಾಣ್ ಅವರಿಗೆ ಸೂಚಿಸಿದರು. ಈ ಕೆಲಸ ಈಗಿನಿಂದ¯್ಲೆ ಆರಂಭವಾಗಬೇಕು ಎಂದರು.
ಈ ವೇಳೆ ಮಾತನಾಡಿದ ಎಸ್‌ಪಿ ಪೃಥ್ವಿಕ್ ಶಂಕರ್, ಇದಕ್ಕೆ ಬೇಕಾದ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದರು. ನಗರದ ಎಲ್ಲ ರಸ್ತೆಗಳ ಅಕ್ಕ, ಪಕ್ಕದಲ್ಲಿರುವ ಪುಟ್ವಪಾತ್‌ಗಳ ಮೇಲೆ ವ್ಯಾಪಾರ, ವಾಹನ ನಿಲುಗಡೆ ಮಾಡಿದ್ದಲ್ಲಿ ಅದು ಕೂಡ ತೆರವುಗೊಳಿಸಲು ಸೂಚಿಸಿದರು. ರಸ್ತೆಗಳು ಇಕ್ಕಟ್ಟಾದರೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಇದನ್ನು ಜನರು ಕೂಡ ಅರ್ಥ ಮಾಡಿಕೊಂಡು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಳೇ ಬಸ್ ನಿಲ್ದಾಣದ ಮುಂದಿನ ರಸ್ತೆ ಮೇಲೆ ಕೈಬಂಡಿ ವ್ಯಾಪಾರಿಗಳು ವ್ಯವಹಾರ ಮಾಡುತ್ತಿರುತ್ತಿರುವುದು ನಿಲ್ಲಿಸಬೇಕು. ಮುಂದುವರೆಸಿದರೆ ತೆರವು ಮಾಡಿ ದಂಡ ವಿಽಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಡಿವೈಎಸ್‌ಪಿ ಸುರೇಶ ನಾಯಕ, ಶರಣಮ್ಮ ಇತರರಿದ್ದರು.