ಕೊಳ್ಳೇಗಾಲ ಪಟ್ಟಣದ 2ನೇ ವಾರ್ಡ್‌ನ ಜಿ.ಪಿ.ಮಲ್ಲಪ್ಪ ಪುರಂ ಬಡಾವಣೆ ಮನೆಗೆ ಬಿಎಲ್‌ಒ ತೆರಳಿ ಶನಿವಾರ ಮತದಾರರಿಗೆ ಇನ್ಯುಮರೇಷನ್ ಫಾಮ್ ವಿತರಿಸಿದರು. ನಟರಾಜು, ರವಿ ಶಂಕರ್, ರಮೇಶ್ ಇತರರು ಇದ್ದಾರೆ.
ಕೊಳ್ಳೇಗಾಲ: ಪಟ್ಟಣದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಮೇಲ್ವಿಚಾರಣೆಯನ್ನು ಶನಿವಾರ ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜು ನಡೆಸಿದರು.
ಈ ವೇಳೆ ನಗರಸಭೆ ಪ್ರಭಾರ ಪೌರಾಯುಕ್ತ ನಟರಾಜು ಮಾತನಾಡಿ, ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 46 ಬೂತ್‌ಗಳಿದ್ದು ಪ್ರತಿ ಬೂತ್‌ಗಳಿಗೂ ಒಬ್ಬ ಬಿಎಲ್‌ಒ ನೇಮಕ ಮಾಡಲಾಗಿದೆ. ಅವರು ಪ್ರತಿ ಮನೆಗಳಿಗೂ ತೆರಳಿ ಇನ್ಯುಮರೇಷನ್ ಫಾರ್ಮ್ ವಿತರಿಸಿ, ನಂತರ ಮಾಹಿತಿ ಸಂಗ್ರಹದ ಬಳಿಕ ಹಿಂಪಡೆಯಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ನನ್ನನ್ನು ಮೇಲ್ವಿಚಾರಕರಾಗಿ ನೇಮಕ ಮಾಡಿದ್ದು, ಬಿಎಲ್ ಒಗಳು ಮತದಾರರ ಪಟ್ಟಿ ಪರಿಷ್ಕರಿಸುವಾಗ ಸ್ಥಳದ ಮಾಹಿತಿಯನ್ನು ಬಿಎಲ್‌ಒಗಳಿಗೆ ನೀಡುವ ಮೂಲಕ ಸಹಕಾರ ನೀಡುತ್ತಿದ್ದೇವೆ. ಅಲ್ಲದೆ ಕಮ್ಯುನಿಟಿ ಮೊಬಿಲೈಜರ್ಸ್, ವಾಟರ್ ಮ್ಯಾನ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಜೂ.30 ರಿಂದ ಜು.29ರವರೆಗೆ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ನಡೆಯಲಿದ್ದು, ಸಾರ್ವಜನಿಕರು ಮನೆ ಬಳಿ ಬಂದ ಬಿಎಲ್‌ಒಗಳಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.