ವಡಗೇರಾದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬುಧವಾರ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಲಾಯಿತು. ತಾಪಂ ಇಒ ಶಶಿಧರ ಹಿರೇಮಠ, ತಹಸೀಲ್ದಾರ್ ಮಂಗಳಾ, ಕಿರಣಬಾಬು, ಮಹೆಬೂಬ್ ಅಲಿ, ಶರಣಬಸವ, ಸಿದ್ದವೀರಪ್ಪ, ಬಿ.ಆರ್.ಪಾಟೀಲ್, ಟಿ.ಸಿ.ರವೀಂದ್ರ ದೇಸಾಯಿ, ದುರ್ಗೇಶ್ ಇತರರಿದ್ದರು.
- ತಾಪಂ ಇಒ ಶಶಿಧರ ಹಿರೇಮಠ ಮನವಿ
- ವಡಗೇರಾದಲ್ಲಿ ಎಸ್‌ಐಆರ್ ಕುರಿತು ಜಾಗೃತಿ
ವಡಗೇರಾ : ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬರುವ ಬಿಎಲ್‌ಒಗಳಿಗೆ ಸಾರ್ವಜನಿಕರು ಅಗತ್ಯ ದಾಖಲೆ ನೀಡಿ ಸಹಕರಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ಶಶಿಧರ ಹಿರೇಮಠ ಹೇಳಿದರು.
ಎಸ್‌ಐಆರ್ ಕುರಿತು ಪಟ್ಟಣದಲ್ಲಿ ಹಮ್ಮಿಕೊಂಡ ಬೈಕ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರ ಹೆಸರು ಸೇರ್ಪಡೆ ಹಾಗೂ ನಿಖರ ಮಾಹಿತಿ ದಾಖಲಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರ ಪರಿಶೀಲಿಸಲಿದ್ದು, ಈ ವೇಳೆ ಸಾರ್ವಜನಿಕರು ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿಯನ್ನು ನಿಖರ ಮತ್ತು ಪಾರದರ್ಶಕವಾಗಿಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಮಂಗಳಾ ಎಂ. ಮಾತನಾಡಿ, ಮತದಾರರ ಪಟ್ಟಿಯಲ್ಲಿನ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊAಡವರ ಹೆಸರು ಕೈಬಿಡುವುದು, ಒಂದಕ್ಕಿAತ ಹೆಚ್ಚು ಕಡೆ ಹೆಸರು ಇದ್ದರೆ ಒಂದೇ ಕಡೆ ಉಳಿಸುವ ಪ್ರಕ್ರಿಯೆ ಈ ವಿಶೇ?ಷ ಪರಿಷ್ಕರಣೆ ವೇಳೆ ನಡೆಯಲಿದೆ. ಮತದಾರರ ಗುರುತಿನ ಚೀಟಿಯಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸಹ ಅವಕಾಶವಿದೆ ಎಂದರು. ಈ ವೇಳೆ ಸಹಾಯಕ ನಿರ್ದೇಶಕ ಕಿರಣಬಾಬು, ಮಹೆಬೂಬ್ ಅಲಿ, ಸಹಾಯಕ ಲೆಕ್ಕಾಽಕಾರಿ ಶರಣಬಸವ, ಪಿಡಿಒ ಸಿದ್ದವೀರಪ್ಪ, ಬಿ.ಆರ್.ಪಾಟೀಲ್, ಟಿ.ಸಿ.ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್ ಇತರರಿದ್ದರು.