ನಿವೃತ್ತ ಐಎಎಸ್ ಅಧಿಕಾರಿ ಎನ್.ಪಿ. ಸಿಂಗ್  
ರಾಜ್ಯ

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಲಿ-education

ಬೆಂಗಳೂರು: ಬುಡಕಟ್ಟು ಮತ್ತು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಭದ್ರಪಡಿಸುವುದು ಗುರುಕುಲದ ಉದ್ದೇಶವಾಗಿದೆ ಎಂದು ಭಾರತೀಯ ಶಿಕ್ಷಣ ಮಂಡಳಿ ಅಧ್ಯಕ್ಷ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎನ್.ಪಿ. ಸಿಂಗ್ ಹೇಳಿದ್ದಾರೆ.
ಜಕ್ವಾರ್ ಫೌಂಡೇಶನ್ ಮತ್ತು ‘ತಥಾಗತ ಟ್ರಸ್ಟ್’, ಬಲೋಡ್ ಜಿಲ್ಲೆಯ ಗುರುರ್ ಅಭಿವೃದ್ಧಿ ಬ್ಲಾಕ್‌ನ ಬೇಖಾ ಜಂಗ್ಲಿಯ ಬುಡಕಟ್ಟು ಗ್ರಾಮದಲ್ಲಿ ಆಯೋಜಿಸಿದ್ದ ‘ತಥಾಗತ ಗ್ಲೋಬಲ್ ಗುರುಕುಲ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು, ನಗರಗಳಿಗೆ ಸಮಾನವಾದ ಶಿಕ್ಷಣ ಪಡೆಯುವವರೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವುದಿಲ್ಲ. ಮಕ್ಕಳಿಗೆ ಶೈಕ್ಷಣಿಕ ಶಿಕ್ಷಣ ಮಾತ್ರವಲ್ಲದೆ ಜೀವನ ಮೌಲ್ಯ, ಸಂಸ್ಕಾರ ಕಲಿಸಲಾಗುತ್ತದೆ. ಉಚಿತ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನ, ಕೇಂದ್ರ ಪಡೆಗಳು, ಸೇನಾ ನೇಮಕಾತಿಗೆ ತಯಾರಿ, ಉದ್ಯೋಗ ಆಧಾರಿತ ಕೋರ್ಸ್ ಮತ್ತು ಗುಡಿ ಕೈಗಾರಿಕೆಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅವರು ಸ್ವಾವಲಂಬಿಗಳಾಗಲು ಸಾಧ್ಯವಾಗಲಿದೆ ಎಂದರು.
ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ಜಿ.ಆರ್. ರಾಣಾ, ನೂರಾರು ಬುಡಕಟ್ಟು ಗ್ರಾಮಸ್ಥರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ರಾಜಾರಾವ್ ಬಾಬಾ ಮತ್ತು ಕಂಕಾಲಿನ್ ಮಾತಾಗೆ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಹುತಾತ್ಮ ವೀರ್ ನಾರಾಯಣ್ ಸಿಂಗ್ ಭಾವಚಿತ್ರಕ್ಕೆ ಪುಪ್ಪನಮನ ನೆರವೇರಿತು.