ವಿವಿಧ ಬೇಡಿಕೆಗೆ ಆಗ್ರಹಿಸಿ ಯಾದಗಿರಿ ಡಿಸಿ ಕಚೇರಿ ಎದುರು ಶುಕ್ರವಾರ ಸಮತಾ ಸೈನಿಕ ದಳ ಸಂಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಎ.ಬಿ.ಹೊಸಮನಿ, ಸತೀಶ, ಮಲ್ಲಿಕಾರ್ಜುನ ಸತ್ಯಂಪೇಟ್​, ಶರಣಪ್ಪ ಛಲವಾದಿ ಇತರರಿದ್ದರು. 
ರಾಜ್ಯ

ದಲಿತರಿಗೆ ಭೂ ಒಡೆತನ ಯೋಜನೆ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ಸಮತಾ ಸೇನಿಕ ದಳ ಜಿಲ್ಲಾ ಟಘಕ ಆಗ್ರಹ
  • ಯಾದಗಿರಿ ಡಿಸಿ ಕಚೇರಿ ಎದುರು ಪ್ರತಿಭಟನೆ
ಯಾದಗಿರಿ: ಜಿಲ್ಲೆಯ ವಿವಿಧ ಗ್ರಾಮಗಳ ದಲಿತರಿಗೆ ಭೂಮಿ, ವಸತಿ, ನಿವೇಶನ ಮತ್ತು ಭೂ ಒಡೆತನ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಜಿಲ್ಲಾ ಟಕದ ಪದಾಧಿಕಾರಿಗಳು, ಸಂಘಟನೆ ದಕ್ಷಿಣ ಭಾರತದ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ ಮತ್ತು ಅಧ್ಯಕ್ಷ ಸತೀಶ ನೇತೃತ್ವದಲ್ಲಿ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹೊಸಮನಿ, ಶಹಾಪುರ ತಾಲೂಕು ಹತ್ತಿಗೂಡುರ ಗ್ರಾಮದ ಸರ್ವೇ ನಂ.62/1/2/3/4/15 ಭೂ ಮಾಲಿಕರು ಅಂಬೇಡ್ಕರ್​ ಅಭಿವೃದ್ಧಿ ನಿಗಮಕ್ಕೆ ಭೂಮಿ ನೀಡಿದ್ದು, ಇದನ್ನು ಜಿಲ್ಲಾಧಿಕಾರ ಅಧ್ಯತೆಯಲ್ಲಿ ಸಭೆ ನಡೆಸಿ ಭೂಮಿ ಹಂಚಿಕೆ ಮಾಡಬೇಕು. ಹತ್ತಿಗುಡೂರ, ಯಕ್ಕಿಂತಿ, ಅನವಾರ, ಕೊಂಗಂಡಿ, ತುಮಕೂರ, ಬೊಮ್ಮನಹಳ್ಳಿ, ಹೈಯ್ಯಾರ (ಕೆ), ಗೋಗಿ, ಕಾಡಂಗೇರಾ, ಹೋತಪೇಟ, ಐಕೂರ, ವಿವೂರ, ಹಸನಾಪೂರ, ರಸ್ತಾಪೂರ, ಮಾಲಹಳ್ಳಿ, ಟಿ. ವಡಗೇರಾ ಈ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನ ವಸತಿ (ಮನೆಗಳು) ಮಂಜೂರು, ಸಿಸಿ ರಸ್ತೆ, ಚರಂಡಿ ನಿರ್ಮಾಣ ಮತ್ತು ಅಂಬೇಡ್ಕರ್​ ಸಮುದಾಯ ಭವನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಟನೆ ತಾಲೂಕು ಅಧ್ಯಕ್ಷ ಶರಣಪ್ಪ ಛಲವಾದಿ ಮಾತನಾಡಿ, ಶಹಾಪುರ ತಾಲೂಕಿನ ಶಿರವಾಳ ಸರ್ವೇ ನಂ. 120/1/6 ಏಕರೆ 1 ಗುಂಟಿ ಮತ್ತು ಇಟನಾ (ಎಸ್​) ಸರ್ವೇ ನಂ. 103/11/ 2& ಎಕರೆ ವಡಗೇರಾ ತಾಲೂಕಿನ ಹೈಯ್ಯಾಳ (ಬಿ) ಸರ್ವೇ ನಂ. 100/5/2&19 ಗುಂಟೆ. ವಡಗೇರಾ ತಾಲೂಕಿನ ಯಂತಿ ಗ್ರಾಮ ಕೃಷ್ಣ ನದಿ ಪ್ರವಾಹಕೊಳಗಾಗುತ್ತಿರುವ ದಲಿತ ಕುಟುಂಬಗಳಿಗೆ ನಿವೇಶನ ಹಾಗೂ ವಸತಿ ಶ್ರೀ ಕಲ್ಪಿಸಬೇಕು, ಅಲ್ಲದೆ ಯಕ್ಕಿಂತಿ ಗ್ರಾಮದ ಗೌಡೂರು ಸೀಮೆಯಿಂದ ಯಕ್ಕಿಂತಿ ರುದ್ರಭೂಮಿವರೆಗೆ ರಸ್ತೆ ಸುಧಾರಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂದ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟ್​ ಮಾತನಾಡಿದರು. ಪ್ರತಿಭಟನೆಯಲ್ಲಿ ಶರಣರೆಡ್ಡಿ, ನಿಂಗಣ್ಣ ಕರಡಿ, ಸಿದ್ದಪ್ಪ ಹೊಸ್ಮನಿ, ರಾಮಪ್ಪ ಮಾಲಹಳ್ಳಿ, ಮಲ್ಲಮ್ಮ, ಸಂಗೀತಾ, ಪಾರ್ವತಿ ಇತರರಿದ್ದರು.