ಹಟ್ಟಿ ಚಿನ್ನದ ಗಣಿ ಪಪಂ ಕಚೇರಿ ಮುಂದೆ ವಿವಿಧ ವಾರ್ಡ್‌ಗಳ ನಿವಾಸಿಗಳು ಕುಡಿವ ನೀರು ಸಮರ್ಪಕ ಪೂರೈಕೆ ಹಾಗೂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಪ್ರಮುಖರಾದ ರಮೇಶ ವೀರಾಪುರ, ಪಂಚಯ್ಯ, ಕೆಂಚಪ್ಪ, ಸಾಹೀರಾ ಬಾನು, ಪೆಂಚಲಯ್ಯ, ರಿಯಾಜ್ ಖುರೇಷಿ ಇತರರಿದ್ದರು. 
ರಾಜ್ಯ

ವಾರ್ಡ್‌ಗಳಿಗೆ ಮೂಲಸೌಲಭ್ಯ ಕಲ್ಪಿಸಿ

JAGADEESH KUMBAR

ಪ್ರಮುಖ ಮುಖ್ಯಾಂಶಗಳು

  • ಹಟ್ಟಿಯಲ್ಲಿ ಪಪಂ ಕಚೇರಿವರೆಗೆ ನಿವಾಸಿಗಳ ಪ್ರತಿಭಟನೆ
ಹಟ್ಟಿಚಿನ್ನದಗಣಿ: ವಿವಿಧ ವಾರ್ಡ್‌ಗಳಲ್ಲಿ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಸಿಪಿಐಎಂ, ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಾಂತ ರೈತ ಸಂಘ ನೇತೃತ್ವದಲ್ಲಿ ಸೋಮವಾರ ನಿವಾಸಿಗಳು ಕಾಕಾನಗರದಿಂದ ಪಪಂ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. 
ಹೈಟೆಕ್ ಶೌಚಗೃಹ ಪಕ್ಕದಲ್ಲಿರುವ ಟಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು, ಶೌಚಗೃಹವನ್ನು ಬಳಕೆಗೆ ನೀಡಬೇಕು. ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಬೇಕು. ನಿಯಮಿತವಾಗಿ ಕುಡಿವ ನೀರು ಪೂರೈಸಬೇಕು. 
ಹೊಸ ಬೋರ್‌ವೆಲ್‌ಗಳನ್ನು ಕೊರೆಸಬೇಕು. ಧೋಬಿಘಾಟ್ ನಿರ್ಮಾಣ, ಜಾಲಿ ಗಿಡಗಳ ತೆರವು, ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. 
ಹಟ್ಟಿ ಪಪಂ ವ್ಯಾಪ್ತಿಯಲ್ಲಿ ಮೂಲಸೌಲಭ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಡಳಿತವರ್ಗ ಗಮನ ಹರಿಸುತ್ತಿಲ್ಲ. ಜನರ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೆ ಪಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 
ನಂತರ ಪಪಂ ಮುಖ್ಯಾಧಿಕಾರಿ ಜಗನ್ನಾಥ ಜೋಶಿಗೆ ಮನವಿ ಸಲ್ಲಿಸಿದರು. 
ಸಿಪಿಐಎಂ ತಾಲೂಕು ಕಾರ್ಯದರ್ಶಿ ರಮೇಶ ವೀರಾಪುರ, ತಾಲೂಕು ಅಧ್ಯಕ್ಷ ಪಂಚಯ್ಯ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ, ಸದಸ್ಯರಾದ ಶಾಂತಕುಮಾರಿ, ವನಜಾಕ್ಷಿ, ಸಾಹೀರಾ ಬಾನು, ಪೆಂಚಲಯ್ಯ, ರಿಯಾಜ್ ಖುರೇಷಿ, ಹಾಜಿಬಾಬು ಕಟ್ಟಿಮನಿ, ಶಂಶುದ್ದೀನ್, ರಮೇಶ್ ಜೆ., ಮೌನೇಶ ಕಡ್ಡೋಣಿ, ಅಲ್ಲಾಬಕ್ಷ, ಮಹಾಂತೇಶ್ ಬುದ್ದಿನ್ನಿ, ದುರುಗಪ್ಪ, ಇಮ್ರಾನ್, ಖಾಜಾ ಮೊಯಿನುದ್ದೀನ್, ನಿಂಗಪ್ಪ, ದಾವೂದ್, ದೇವಮ್ಮ, ಬಿಪಾಷಾ, ಮಹಿಬೂಬ್, ಅಂಬಮ್ಮ ಇತರರಿದ್ದರು.