ಧುತ್ತರಗಾಂವದ ಆಕಾಶ ಮಾಂಗ ಕೊಲೆ ಖಂಡಿಸಿ ಶೋಷಿತ ಜನಜಾಗೃತಿ ವೇದಿಕೆ ಕಾರ್ಯಕರ್ತರು ಆಳಂದದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸಿಲ್ ಕಚೇರಿ ಅಧಿಕಾರಿ ರಾಕೇಶ ಶಿಲ್ಡ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಬಸವರಾಜ, ಮಹಾಂತಪ್ಪ ಸಾಲೆಗಾಂವ, ಶ್ಯಾಮರಾವ ಇತರರಿದ್ದರು.
- ಶೋಷಿತ ಜನಜಾಗೃತಿ ವೇದಿಕೆ ಒತ್ತಾಯ
- ಆಳಂದದಲ್ಲಿ ಪ್ರತಿಭಟನೆ
ಆಳಂದ: ಧುತ್ತರಗಾಂವ ಗ್ರಾಮದ ಪರಿಶಿಷ್ಟ ಮಾದಿಗ ಉಪಜಾತಿಗೆ ಸೇರಿದ ಆಕಾಶ ಮಾಂಗ ಎಂಬುವರನ್ನು ಕೊಲೆ ಮಾಡಿ ಮರಕ್ಕೆ ನೇಣು ಹಾಕಿರುವುದನ್ನು ಖಂಡಿಸಿ ಮತ್ತು ನೊಂದ ಕುಟುಂಬಕ್ಕೆ ಸರ್ಕಾರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶೋಷಿತ ಜನಜಾಗೃತಿ ವೇದಿಕೆ ಕಾರ್ಯಕರ್ತರು ತಾಲೂಕು ಆಡಳಿತ ಸೌಧ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ವಿವಾಹಿತ ಮಹಿಳೆ ಜತೆ ಮೂರು ತಿಂಗಳ ಹಿಂದೆ ಓಡಿಹೋಗಿದ್ದರ ವಿಷಯ ನಿಂರ್ಬಗಾ ಠಾಣೆ ಮೆಟ್ಟಿಲೇರಿತ್ತು. ಪೊಲೀಸರ ಬುದ್ಧಿಮಾತಿನಿಂದ ಇಬ್ಬರೂ ಬೇರೆ ಬೇರೆಯಾಗಿದ್ದರು. ಆದರೆ ಆಕಾಶ ಮಾಂಗ ಧುತ್ತರಗಾಂವಗೆ ಬಂದಾಗ ಶಿವಪ್ಪ, ರವಿ, ನಿಖಿಲ್, ಅಮರ, ಈರಣ್ಣ ಇತರರು ಸೇರಿ ಕೊಲೆ ಮಾಡಿರುವುದನ್ನು ಖಂಡಿಸಿದರು.
ವೇದಿಕೆಯ ಬಸವರಾಜ ಜವಳಿ, ಲಕ್ಕಪ್ಪ ಜವಳಿ, ಮಹಾಂತಪ್ಪ ಶಾಲೆಗಾಂವ, ಶ್ಯಾಮರಾವ ತಂಬಾಕವಾಡಿ, ಯಲ್ಲಪ್ಪ ನಿಂರ್ಬಗಾ, ಹನುಮಂತ ಖಣದಾಳ ಸೇರಿ ಮೃತನ ಕುಟುಂಬದವರು ಪಾಲ್ಗೊಂಡಿದ್ದರು. ವಯಸ್ಸಾದ ತಂದೆ&ತಾಯಿಗೆ 50 ಲ ರೂ. ಪರಿಹಾರ, ಎರಡು ಎಕರೆ ಕೃಷಿ ಭೂಮಿ ನೀಡಬೇಕೆಂಬ ಬೇಡಿಕೆಯ ಮನವಿಪತ್ರವನ್ನು ತಹಸೀಲ್ದಾರ್ ಪರ ರಾಕೇಶ ಶಿಲ್ಡ್ ಅವರಿಗೆ ಸಲ್ಲಿಸಲಾಯಿತು.