ಔರಾದ್​ ತಾಲೂಕಿನ ಶೆಂಬೆಳ್ಳಿ&ಚಟ್ನಾಳದಲ್ಲಿ ಅಗತ್ಯ ಮೂಲಸೌಕರ್ಯಗಳಿಗೆ ಅನುದಾನ ಒದಗಿಸುವಂತೆ ಸಂಸದ ಸಾಗರ್​ ಖಂಡ್ರೆ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು. ದತ್ತಾತ್ರಿ ಪಾಟೀಲ್​, ಸಂದೀಪ ಮೂಲಗೆ, ಬಾಲಾಜಿ ಕುಂಬಾರ, ಮಹಾದೇವ ಮಸೂರೆ, ಬಾಲಾಜಿ ಪಾಟೀಲ್​, ಚಿರಂಜೀವಿ ಪಾಟೀಲ್​, ಸಂಗಮೇಶ ಬಂಡೆ, ಮಹಾದೇವ ದೇಶಮುಖ ಇತರರಿದ್ದರು. 
ರಾಜ್ಯ

ಚಟ್ನಾಳ ಗ್ರಾಮ ಅಭಿವೃದ್ಧಿಗೆ ಅನುದಾನ ಒದಗಿಸಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಿಂದ ಸಂಸದ ಸಾಗರ್​ ಖಂಡ್ರೆಗೆ ಮನವಿ
ಔರಾದ್​: ತಾಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಟ್ನಾಳ ಗ್ರಾಮದಲ್ಲಿ ಹಲವು ಮೂಲ ಸೌಕರ್ಯಗಳ ಕೊರತೆಯಿದ್ದು, ಗ್ರಾಮಾಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸೋಮವಾರ ಚಟ್ನಾಳ ಗ್ರಾಮಕ್ಕೆ ಸಂಸದ ಸಾಗರ್​ ಖಂಡ್ರೆ ಭೇಟಿ ನೀಡಿ ವೇಳೆ ಗ್ರಾಮಸ್ಥರು ಮನವಿಪತ್ರ ಸಲ್ಲಿಸಿ, ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಸೋಲಾರ್​ ಬೆಳಕು ಸೇರಿ ಹಲವು ಮೂಲ ಸೌಲಭ್ಯಗಳ ಕೊರತೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಚಟ್ನಾಳ ಗ್ರಾಮದಿಂದ ಭವಾನಿ ಮಂದಿರಕ್ಕೆ ತೆರಳುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು, ಸರ್ಕಾರಿ ಶಾಲೆ ಸಮೀಪದಿಂದ ಮಹಾದೇವ ಮಂದಿರಕ್ಕೆ ರಸ್ತೆ ನಿರ್ಮಿಸುವುದು, ಹನುಮಾನ ಮಂದಿರ, ಸರ್ಕಾರಿ ಶಾಲೆ ಹಾಗೂ ಮಹೇಶ ಬಂಡೆ ಅವರ ಮನೆ ಬಳಿ ಮೂರು ಹೈಮಾಸ್ಟ್​ ದೀಪ ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ತಹಸೀಲ್ದಾರ್​ ಮಹೇಶ ಪಾಟೀಲ್​, ತಾಪಂ ಇಒ ಕಿರಣ ಪಾಟೀಲ್​, ತಾಲೂಕು ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರಾಜಕುಮಾರ, ಗ್ರಾಮಸ್ಥರಾದ ದತ್ತಾತ್ರಿ ಪಾಟೀಲ್​, ಸಂದೀಪ ಮೂಲಗೆ, ಬಾಲಾಜಿ ಕುಂಬಾರ, ಮಹಾದೇವ ಮಸೂರೆ, ಬಾಲಾಜಿ ಪಾಟೀಲ್​, ಚಿರಂಜೀವಿ ಪಾಟೀಲ್​, ಸಂಗಮೇಶ ಬಂಡೆ, ಮಹಾದೇವ ದೇಶಮುಖ, ಸಂಗಮೇಶ ಕತ್ತೆ ಇತರರಿದ್ದರು.