ಕೆಂಭಾವಿ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಬೀರಲಿಂಗೇಶ್ವರ ಸಮಿತಿ ಪದಾಧಿಕಾರಿಗಳು ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು. ವಾಮನರಾವ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ಬಾಪುಗೌಡ ಡಿ.ಪಾಟೀಲ್, ಮಾಳಪ್ಪ ಸುಕಂದ, ಶಾಂತಪ್ಪ ಯಲಗಲ್, ರಾವುತಪ್ಪ ಯರಗಲ್ ಇದ್ದರು.
- ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಬೀರಲಿಂಗೇಶ್ವರ ಸಮಿತಿ ಪದಾಧಿಕಾರಿಗಳು ಮನವಿ
ಕೆಂಭಾವಿ: ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಆಗ್ರಹಿಸಿ ಬೀರಲಿಂಗೇಶ್ವರ ಸಮಿತಿ ಪದಾಧಿಕಾರಿಗಳು ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಭವನ ನಿರ್ಮಾಕ್ಕೆ ಬೇಕಾದ ಸ್ಥಳಾವಕಾಶವಿದ್ದು, ಹಾಲುಮತ ಸಮಾಜದ ಜನರ ಬಹುದಿನಗಳ ಬೇಡಿಕೆಯಾಗಿದೆ. ಹೀಗಾಗಿ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಅವರು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಶಾಸಕರು ಬರುವ ದಿನಗಳಲ್ಲಿ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ವಾಮನರಾವ ದೇಶಪಾಂಡೆ, ಬಾಪುಗೌಡ ಡಿ.ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ರಹೀಮಾನ್ ಪಟೀಲ್ ಯಲಗೋಡ, ರಂಗಪ್ಪ ವಡ್ಡರ, ಮಾಳಪ್ಪ ಸುಕಂದ, ಶಾಂತಪ್ಪ ಯಲಗಲ್, ರಾವುತಪ್ಪ ಯರಗಲ್, ರಾಜು ಯರಗಲ್, ರಮೇಶ ಕೋಡಗಾನೂರ, ಲಕ್ಷ$್ಮಣ ಯಲಗೋಡ, ಪ್ರಭು ಕವಲ್ದಾರ, ಪ್ರವಿಣ ಕವಲ್ದಾರ ಇತರರಿದ್ದರು.