ಯಾದಗಿರಿ ಜಿಲ್ಲಾ ಕೋರ್ಟ್​ನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಮರುಳಸಿದ್ದಾರಾಧ್ಯ ಎಚ್​.ಜಿ. ಉದ್ಘಾಟಿಸಿದರು. ಆರ್​.ಎಸ್​.ಪಾಟೀಲ್​, ಮಲ್ಲಿಕಾರ್ಜುನ ಶಿರಗೋಳ, ನ್ಯಾಯಾಧೀಶ ಮರಿಯಪ್ಪ, ರಾಹುಲ್​ರಾವ್​, ಬಾಳಾಸಾಹೇಬ್​, ಈರಣ್ಣ, ಸುಪ್ರೀಯಾ ಇತರರಿದ್ದರು. 
ರಾಜ್ಯ

ಪ್ರಾಣಿ-ಪಕ್ಷಿಗೂ ನೀರು ಆಹಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಮರುಳಸಿದ್ದಾರಾಧ್ಯ ಸಲಹೆ
  • ಜಿಲ್ಲಾ ಕೋರ್ಟ್​ನಲ್ಲಿ ವಿಶ್ವ ಜಲದಿನ ಆಚರಣೆ
ಯಾದಗಿರಿ : ಪಕ್ಷಿ, ಪ್ರಾಣಿ ಸಂಕುಲಗಳಿಗೆ ನೀರು, ಆಹಾರ ಒದಗಿಸುವ ಮೂಲಕ ಮಾನವಿಯತೆ ಮೆರೆದು ಜೀವಪರ ಕಾಳಜಿ ಹೊಂದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಮರುಳಸಿದ್ದಾರಾಧ್ಯ ಎಚ್​.ಜಿ. ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು ಮೂಲಕ ವಾಟರ್​ ಫಾರ್​ ವೈಲೇಸ್​ ಸಂಸ್ಥೆ, ಜಿಲ್ಲಾ ವಕೀಲ ಸಂ ಮತ್ತು ಶಶಿ ಚಾರಿಟೇಬಲ್​ ಮತ್ತು ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಗುರುವಾರ ಜಿಲ್ಲಾ ನ್ಯಾಯವಾದಿಗಳ ಸಂದ ಕಟ್ಟಡದಲ್ಲಿ ವಿಶ್ವ ಜಲ ದಿನ ನಿಮಿತ್ತ ಮೂಕ ಪ್ರಾಣಿಗಳಿಗೆ ನೀರಿನ ದಾಹ ನೀಗಿಸುವ ಮಾನವೀಯ ಕರ್ತವ್ಯ ಕುರಿತು ಹಮ್ಮಿಕೊಂಡ ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಪ್ರತಿ ಪಕ್ಷಿ, ಪ್ರಾಣಿಗಳು ಕುಡಿಯುವ ಹನಿ ನೀರಿಗಾಗಿ ಪರಿತಪಿಸುತ್ತವೆ. ಇದಕ್ಕಾಗಿ ದೂರ, ದೂರ ಅಲೆಯುತ್ತವೆ. ಅವುಗಳು ನಮ್ಮಂತೆಯೇ ಜೀವ ಹೊಂದಿವೆ. ಕಾರಣ ಎಲ್ಲರೂ ತಮ್ಮ, ತಮ್ಮ ವಾಸದ ಸ್ಥಳದಲ್ಲಿ, ಗಿಡ&ಮರಗಳ ಸಮೀಪ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಕಾಡು ಕಡಿದು ನಾಡು ಮಾಡುವ ಭರದಲ್ಲಿ ಪರಿಸರಕ್ಕೆ ಪೆಟ್ಟು ಕೊಡಲಾಗುತ್ತಿದೆ. ಇದರಿಂದ ಕಾಡಿನಲ್ಲಿ ಇರಬೇಕಾದ ಪ್ರಾಣಿಗಳು ಊರು ಪ್ರವೇಶಿಸುತ್ತಿವೆ. ಇನ್ನೂ ಪಕ್ಷಿಗಳು ಕೆಂಡದಂತಹ ಬಿಸಿಲಿಗೆ ಬಳಲಿ ಬೆಂಡಾಗಿ ಎಲ್ಲೆಂದರಲ್ಲಿ ಹಾರುತ್ತ ನೀರಿಗಾಗಿ ಚಡಪಡಿಸುತ್ತಿವೆ. ಇದೆಲ್ಲವೂ ಗೊತ್ತಿದ್ದರೂ ನಾವೂಗಳು ಇಂತಹ ಬೇಸಿಗೆ ಕಾಲದಲ್ಲಿ ನೀರು, ಕಾಳಿನ ವ್ಯವಸ್ಥೆ ಮಾಡುತ್ತ ನೀಗಾ ವಹಿಸುತ್ತಿಲ್ಲ. ಕಾರಣ, ಇಂದಿನಂದಲ್ಲೇ ಎಲ್ಲರೂ ಈ ಕೆಲಸಕ್ಕೆ ಕೈಜೋಡಿಸೋಣ. ಅಲ್ಲದೆ ತುಮಕೂರು ಮೂಲಕ ಈ ಸಂಸ್ಥೆ ಪಕ್ಷಿ, ಪ್ರಾಣಿಗಳ ಸಂಕುಲವನ್ನು ಉಳಿಸುವಲ್ಲಿ ಮಾಡುತ್ತಿರುವ ಸೇವೆ ಶ್ಲಾನೀಯ ಎಂದರು.
ವಾಟರ್​ ಫಾರ್​ ವೈಸ್​ಲೇಸ್​ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸುಪ್ರೀಯಾ, ರಕ್ಷೀತ್​ ಅವರು, ಪಕ್ಷಿ, ಪ್ರಾಣಿಗಳ ಜೀವ ಉಳಿಯಲು ಮತ್ತು ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹಮ್ಮಿಕೊಂಡಿರುವ ಮತ್ತು ಮಾಡಿರುವ ಕೆಲಸಗಳ ಬಗ್ಗೆ ವಿವರಿಸಿದರು.
ಶಶಿ ಚಾರಿಟೇಬಲ್​ ಮತ್ತು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಮಲ್ಲಿಕಾರ್ಜುನ ಶಿರಗೋಳ ಮಾತನಾಡಿ, ಇದೊಂದು ಪರೋಪಕಾರದ ಕೆಲಸವಾಗಿದೆ. ಮೂಕ ಜೀವಗಳಿಗೆ ಆಹಾರ, ನೀರು ಕೊಡುವುದು ದೊಡ್ಡ ಪುಣ್ಯದ ಕೆಲಸ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಆರ್​.ಎಸ್​.ಪಾಟೀಲ್​ ಮಾತನಾಡಿದರು. ನ್ಯಾಯಾಧೀಶರಾದ ಈರಣ್ಣಾ, ಬಾಳಾಸಾಹೇಬ್​, ರಾಹುಲ್​ರಾವ್​, ಸಂದ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಆಶನಾಳ್​ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ನ್ಯಾಯಾಧೀಶ ಮರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಲಯ ಸಿಬ್ಬಂದಿ ನಿರ್ಮಲಾ ಪ್ರಾರ್ಥಿಸಿದರು. ಆರಂಭದಲ್ಲಿ ನ್ಯಾಯಲಯದ ಆವರಣದಲ್ಲಿ ಚಾರಿಟೇಬಲ್​ನಿಂದ ಕೊಡಲಾದ ನೀರು, ಆಹಾರ ಸಂಗ್ರಹಿಸಿ ಇಡುವ ಸ್ಟಾಂಡ್​ಗಳಲ್ಲಿ ಮಣ್ಣಿನ ಕಪ್​ಗಳಲ್ಲಿ ನ್ಯಾಯಾಧೀಶರು ಆಹಾರ, ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಇದನ್ನು ಉದ್ಘಾಟಿಸಿದರು.