ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಅಖಿಲ ಭಾರತೀಯ ಕೋಲಿ ಸಮಾಜದ ಸಂಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ್​ ನೇತೃತ್ವದಲ್ಲಿ ಗ್ರಾಮಸ್ಥರು ಭಾನುವಾರ ಖಾಲಿ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು. ಭೀಮಾಶಂಕರ, ಮಲ್ಲೆಶಿ, ಹಣಮಂತ, ತಿಮ್ಮಯ್ಯ, ರೆಡ್ಡೆಪ್ಪ, ದ್ಯಾವಪ್ಪ, ಸಿದ್ರಾಮಪ್ಪ, ಹಣಮಂತ, ಶರಣಪ್ಪ, ಮಲ್ಲಪ್ಪ, ದೇವಪ್ಪ, ಮಲ್ಲಯ್ಯ, ನಾಗಪ್ಪ, ಅಂಜಪ್ಪ, ದೇವಿಂದ್ರಪ್ಪ, ಕಾಶಪ್ಪ ಇತರರಿದ್ದರು. 
ರಾಜ್ಯ

ವರ್ಕನಳ್ಳಿಗೆ ಕುಡಿಯುವ ನೀರು ಪೂರೈಸಿ

ಪ್ರಮುಖ ಮುಖ್ಯಾಂಶಗಳು

  • ಖಾಲಿ ಬಾಟಲಿಯೊಂದಿಗೆ ಪ್ರತಿಭಟನೆಗಿಳಿದ ಗ್ರಾಮಸ್ಥರು
  • ವಿಳಂಬ ಮಾಡಿದ ಗ್ರಾಪಂಗೆ ಬೀಗ
ಯಾದಗಿರಿ: ತಾಲೂಕಿನ ವರ್ಕನಳ್ಳಿ ಗ್ರಾಮಕ್ಕೆ ಕೂಡಲೇ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಅಖಿಲ ಭಾರತೀಯ ಕೋಲಿ ಸಮಾಜದ ಸಂಟನಾ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ್​ ಆಗ್ರಹಿದ್ದಾರೆ.
ಭಾನುವಾರ ಗ್ರಾಮದಲ್ಲಿ ಹೊಸ ನೀರಿನ ಟ್ಯಾಂಕ್​ಬಳಿ ಗ್ರಾಮಸ್ಥರೊಂದಿಗೆ ಖಾಲಿ ಬಾಟಲಿ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದ ಅವರು, ಕಳೆದ ಮೂರು ವರ್ಷಗಳ ಹಿಂದೆಯೇ ಇಲ್ಲಿ ಕುಡಿಯುವ ನೀರಿನ ಟ್ಯಾಂಕ್​ ನಿರ್ಮಿಸಿದರೂ ಇದುವರೆಗೂ ಅದನ್ನು ಉದ್ಘಾಟಿಸಿ ಜನರಿಗೆ ನೀರು ಕೊಡಲು ಜಿಲ್ಲಾಡಳಿತದಿಂದ ಆಗಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಹಾಹಾಕಾರವಿದೆ. ಜನರು ನೀರಿಗಾಗಿ ಕಿಮೀಗಟ್ಟಲ್ಲೆ ದೂರ ಹೋಗಿ ನೀರು ತಂದು ಕುಡಿಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಮತ್ತು ನಗರದ ಸಮೀಪದಲ್ಲಿರುವ ವರ್ಕನಳ್ಳಿ ಗ್ರಾಮದಲ್ಲಿ 2ರಿಂದ 3 ಜನರು ವಾಸ ಮಾಡುತ್ತಾರೆ. ಅರ್ಧದಷ್ಟು ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಇಂದಿಗೂ ಲಭ್ಯವಿಲ್ಲ. ಸಿಗುವ ಅಲ್ಪ ನೀರಿಗಾಗಿ ಜನರು ಕಚ್ಚಾಡುವಂತಹ ಸ್ಥಿತಿ ಇದೆ. ಹಗಲು ರಾತ್ರಿ ಬೇರೆ ಕೆಲಸ ಬಿಟ್ಟು ನೀರಿಗಾಗಿ ಸಮಯ ವ್ಯರ್ಥ ಮಾಡುವಂತಹ ಪರಸ್ಥಿತಿ ಇಲ್ಲಿದ್ದರೂ ಗ್ರಾಪಂ ಅಧಿಕಾರಿಗಳು ಸೇರಿ ಇಡೀ ಜಿಲ್ಲಾಡಳಿತ ರ್ನಿಲಕ್ಷ ವಹಿಸಿದೆ ಎಂದು ಅವರು ದೂರಿದರು.
ಮಳೆಗಾಲ ಆರಂಭವಾಗುತ್ತಿದ್ದು, ಕೂಡಲೇ ಶುದ್ಧಿ ನೀರು ಕೊಡದಿದ್ದರೇ ಕಲುಷಿತ ನೀರು ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವಂತಹ ವಾತವರಣ ನಿರ್ಮಾಣವಾಗಲಿದೆ. ಸಮಸ್ಯೆಯ ಗಂಭೀರತೆ ಅರಿತು ಕೂಡಲೇ ಹೊಸ ನೀರಿನ ಟ್ಯಾಂಕ್​ ಉದ್ಘಾಟಿಸಿ ಆ ಮೂಲಕ ನಿತ್ಯ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಹಾಗೊಂದು ವೇಳೆ ರ್ನಿಲಕ್ಷ ವಹಿಸಿದರೆ ವರ್ಕನಳ್ಳಿ ಗ್ರಾಮಸ್ಥರೊಂದಿಗೆ ಡಿಸಿ ಮತ್ತು ಜಿಪಂ ಕಚೇರಿ ಎದುರು ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಗ್ರಾಪಂ ಕಚೇರಿಗೆ ಸಾರ್ವಜನಿಕರಿಂದಲೇ ಬೀಗ ಹಾಕಿಸುವುದಾಗಿ ಹೇಳಿದರು. ಇನ್ನೇರಡು ದಿನಗಳಲ್ಲಿ ಡಿಸಿ, ಜಿಪಂ ಸಿಇಒ ಅವರು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಕುಡಿಯುವ ನೀರಿನ ಸ್ಥಿತಿ ಕಣ್ಣಾರೆ ಕಂಡು ಸ್ಥಳದಲ್ಲಿಯೇ ಪರಿಹಾರ ಸೂಚಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಭೀಮಾಶಂಕರ, ಮಲ್ಲೆಶಿ, ಹಣಮಂತ, ತಿಮ್ಮಯ್ಯ, ರೆಡ್ಡೆಪ್ಪ, ದ್ಯಾವಪ್ಪ, ಸಿದ್ರಾಮಪ್ಪ, ಹಣಮಂತ, ಶರಣಪ್ಪ, ಮಲ್ಲಪ್ಪ, ದೇವಪ್ಪ, ಮಲ್ಲಯ್ಯ, ನಾಗಪ್ಪ, ಅಂಜಪ್ಪ, ದೇವಿಂದ್ರಪ್ಪ, ಕಾಶಪ್ಪ, ಭೀಮವ್ವ, ತಾಯಮ್ಮ, ದ್ಯಾವಮ್ಮ, ಪಾರ್ವತಿ, ಶರಣಮ್ಮ, ದೊಡ್ಡಮ್ಮ, ಸೋಪಮ್ಮ, ಭಾಗಮ್ಮ, ದೇವಮ್ಮ, ಗಂಗಮ್ಮ, ಯಮನಮ್ಮ. ಗೌರಮ್ಮ, ಲಕ್ಷಿ$್ಮ, ಕಮಲಮ್ಮ ಇತರರಿದ್ದರು.
"

ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸಲಾಗುವುದು. ನಾನೇ ಖುದ್ದಾಗಿ ಅಲ್ಲಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಅರಿತು ಶ್ರೀ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು.

— > ಲವೀಶ್​ ಒರ್ಡಿಯಾ ಸಿಇಒ ಜಿಪಂ ಯಾದಗಿರಿ