Karnataka Lekhakiyara Sangha
- * ಸದಸ್ಯತ್ವವನ್ನು ಕಾಯ್ದುಕೊಳ್ಳಲು ಮಾಹಿತಿ ನೀಡಿ
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಆಜೀವ ಸದಸ್ಯರು ವಿಳಾಸ, ದೂರವಾಣಿ ಸಂಖ್ಯೆಗಳೊಂದಿಗೆ ಅಗತ್ಯ ಮಾಹಿತಿ ನೀಡಿ ತಮ್ಮ ಸದಸ್ಯತ್ವವನ್ನು ಕಾಯ್ದುಕೊಳ್ಳಬೇಕು ಎಂದು ಸಂಘ ತಿಳಿಸಿದೆ.
ಸಂಘದ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಳುಹಿಸುವ ಪೋಸ್ಟ್‌ಗಳಲ್ಲಿ ಬಹುತೇಕ ಪ್ರತಿಗಳು ವಾಪಸಾಗುತ್ತಿವೆ. ಅಲ್ಲದೆ ಸಂಘವು ಹೊಸದಾಗಿ ಸದಸ್ಯರ ಪಟ್ಟಿ ತಯಾರಿಸಿ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಕೈಗೊಂಡಿದೆ. ಹಾಗಾಗಿ ಸದಸ್ಯರೆಲ್ಲರೂ ತಮ್ಮ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಸೇರಿ ಅಗತ್ಯ ವಿವರಗಳನ್ನು ಸೆ. 10 ರೊಳಗೆ ನೀಡಬೇಕು. ಹಾಗೆಯೇ ಮಾಹಿತಿ ನೀಡದವರ ಸದಸ್ಯತ್ವವನ್ನು ಕೈಬಿಡಲಾಗುವುದು ಎಂದು ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ತಿಳಿಸಿದ್ದಾರೆ.
ವಿವರಗಳನ್ನು ಕಳುಹಿಸಿಕೊಡಲು ಮೊ: 8971232329, 9900523340, 9535227607 ಅಥವಾ 9449940818 ಸಂಪರ್ಕಿಸಲು ಕೋರಿದೆ. ಮಾಹಿತಿಗಾಗಿ ಕರ್ನಾಟಕ ಲೇಖಕಿಯರ ಸಂಘದ ವೆಬ್‌ಸೈಟ್: httpd://karnatakalekhakiyarasangha.org/ ಅನ್ನು ವೀಕ್ಷಿಸಬಹುದಾಗಿದೆ.