ಸರ್ಕಾರ ಕೂಡಲೇ ಬರದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಸೇಡಂ ತಾಲೂಕಿನ ಮುಧೋಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ರಾಜಕುಮಾರ ಪಾಟೀಲ್​, ಸಂತೋಷಿರಾಣಿ ಪಾಟೀಲ್​, ಶರಣು ಮೆಡಿಕಲ್​, ನಾಗರೆಡ್ಡಿ ಪಾಟೀಲ್​, ಸಿದ್ದು ಬಾನರ್​, ವಿಜಯಕುಮಾರ ಆಡಕಿ ಇತರರಿದ್ದರು. 
ರಾಜ್ಯ

ಬೆಳೆ ಪರಿಹಾರ ನೀಡಿ, ಅಕ್ರಮ ದಂಧೆ ನಿಲ್ಲಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಬಿಜಪಿಯಿಂದ ಮುಧೋಳದಲ್ಲಿ ರಸ್ತೆ ಸಂಚಾರ ತಡೆದು ಹೋರಾಟ
  • ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಸೇಡಂ: ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್​ ಪಕ್ಷದ ಏಜೆಂಟರಂತೆ ವರ್ತಿಸುತಿದ್ದು, ಜನಸಾಮಾನ್ಯರಿಗೆ ಒಂದು ಹಾಗೂ ಕಾಂಗ್ರೆಸ್​ ಕಾರ್ಯಕರ್ತರಿಗೊಂದು ಕಾನೂನು ಪಾಲಿಸಲಾಗುತ್ತಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ ಕಿಡಿಕಾರಿದರು.
ಬರದಿಂದ ಬೆಳೆ ಕಳೆದುಕೊಂಡು ಬೀದಿಗೆ ಬಂದಿರುವ ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಮುಧೋಳದಲ್ಲಿ ವಾಗ್ದರಿ&ರೆಬ್ಬನಪಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆದು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಳೆ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಸ್ಪಂದಿಸಬೇಕಾದ ಸರ್ಕಾರ ಕೈಕಟ್ಟಿ ಕುಳಿತಿದೆ. ಇನ್ನು ಕಾಂಗ್ರೆಸ್​ ಶಾಸಕರು ಅಧಿಕಾರಕ್ಕಾಗಿ ಕಚ್ಚಾಟ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೂಡಲೇ ತಾಲೂಕಿನ ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರದ ಹಣ ಜಮಾಗೊಳಿಸಬೇಕು. ರೈತರ ಪಂಪ್​ಸೆಟ್​ಗಳಿಗೆ ನಿರಂತರ 7 ಗಂಟೆ ಕರೆಂಟ್​ ನೀಡಬೇಕು. ವಿದ್ಯುತ್​ ಪರಿವರ್ತಕ ಸುಟ್ಟ 24 ಗಂಟೆಗಳೊಳಗಾಗಿ ಬದಲಾಯಿಸಬೇಕು. ಕೆರೆ ಒಡೆದು ಅನೇಕ ಹಳ್ಳಿಗಳಿಗೆ ಸಮಸ್ಯೆ ಆಗಿದ್ದು, ಅದನ್ನು ಸರಿಪಡಿಸುವ ಕೆಲಸ ಆಗಬೇಕು. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ದಂಧೆಗಳು ಜೋರಾಗಿವೆ. ಕಾಂಗ್ರೆಸ್​ ಕಾರ್ಯಕರ್ತರು ಮರಳು ಸಾಗಣೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದಾರೆ. ಆದರೆ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದರು. ಸಣ್ಣ ನೀರಾವರಿ, ಕೃಷಿ, ಜೆಸ್ಕಾಂ ಅಧಿಕಾರಿಗಳು ವಾರದೊಳಗಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.
ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​, ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಪ್ರಮುಖರಾದ ವಿಜಯಕುಮಾರ ಆಡಕಿ, ಸಿದ್ದು ಬಾನರ್​, ಶಿವಕುಮಾರ ತೊಟ್ನಳ್ಳಿ, ನಾಗೇಂದ್ರಪ್ಪ ಸಾಹುಕಾರ, ವೆಂಕಟೇಶ ಪಾಟೀಲ್​, ಶೈಲಜಾ ಹಿತ್ತಲ್​, ನಾಗಪ್ಪ ಕೊಳ್ಳಿ, ವಿಠ್ಠಲರೆಡ್ಡಿ ಕೋಲಕುಂದಾ, ವಿಶ್ವನಾಥರೆಡ್ಡಿ ಪಾಟೀಲ್​, ನಾಗರೆಡ್ಡಿ ದೇಶಮುಖ, ನಾರಾಯಣರಾವ ಕುಲಕರ್ಣಿ, ಶ್ರೀಕಾಂತರೆಡ್ಡಿ ಪಾಟೀಲ್​, ನಾಗರೆಡ್ಡಿ ಪಾಟೀಲ್​, ಲ್ಮಕಾಂತ ಹೊನ್ನಕೇರಿ, ವಿಜಯಕುಮಾರ ಖೇವಜಿ, ರಾಮು ಕಣೇಕಲ್​, ಮಹಾದೇವಪ್ಪ ಗೋಣಿ, ಶಿವಾನಂದಸ್ವಾಮಿ, ಶ್ರೀಮಂತ ಅವಂಟಿ, ರಾಮು ರಾಠೋಡ್​, ವಿಜಯಲ್ಮ ವಿಶ್ವಕರ್ಮ, ವಿನೋದ ಸಾಹುಕಾರ, ತಿರುಪತಿ ಮದಕಲ್​, ರಾವೇಂದ್ರ ಮೆಕಾನಿಕ್​, ಡಾ.ಮದುಸೂಧನರೆಡ್ಡಿ ಸಿಲಾರಕೋಟ, ಗೋವಿಂದ ಮುಡಗುಲ್​, ಮಹಾವೀರ ಅಳ್ಳೊಳ್ಳಿ, ದತ್ತಾತ್ರೇಯ ಮುಧೋಳ, ಸಿದ್ದು ಊಡಗಿ, ನಾಗಭೂಷಣರೆಡ್ಡಿ ಹೂಡಾ, ವಿಷ್ಣು ಊಡಗಿ, ಶಿಲ್ಪಾ ಪಾಟೀಲ್​, ಸಿದ್ದಲಿಂಗಗೌತಂ ನಿಡಗುಂದಾ ಇತರರಿದ್ದರು.
ಡಿವೈಎಸ್​ಪಿ ಸಂಗಮನಾಥ ಹಿರೇಮಠ, ಪಿಐ ಸಂಜೀವಕುಮಾರ ಕುಂಬಾರಗೇರಿ, ಕಪಿಲದೇವ ಸೇರಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿತ್ತು. ಸುಮಾರು 3 ಗಂಟೆ ಸಂಚಾರ ತಡೆದಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.
"

ಸಚಿವ ಡಾ.ಶರಣಪ್ರಕಾಶ ಪಾಟೀಲ್​ ರೈತರ ನೋವಿಗೆ ಸ್ಪಂದಿಸಬೇಕು. ಪೊಲೀಸ್​ ಠಾಣೆಗಳು ಕಾಂಗ್ರೆಸ್​ ಕಚೇರಿಗಳಂತಾಗಿದ್ದು, ಜನಸಾಮಾನ್ಯರು ಠಾಣೆಗೆ ಬಂದರೆ ಸ್ಪಂದನೆ ಇಲ್ಲ. ಬಿಜೆಪಿ ಕಾರ್ಯಕರ್ತರಿಗೆ ಟಾರ್ಗೆಟ್​ ಮಾಡಿ ಕಿರುಕುಳ ನೀಡಲಾಗುತ್ತಿದೆ. ಪೇದೆ ಹಿಡಿದು ಅಧಿಕಾರಿಗಳವರೆಗೆ ಕಾಂಗ್ರೆಸ್​ ಏಜೆಂಟರಂತೆ ಕೆಲಸ ಮಾಡುವವರ ಪಟ್ಟಿ ಮಾಡಿಟ್ಟುಕೊಂಡಿದ್ದೇವೆ. ಕಾಲ ಬಂದಾಗ ಉತ್ತರ ನೀಡುತ್ತೇವೆ.

— > ರಾಜಕುಮಾರ ಪಾಟೀಲ್​ ತೆಲ್ಕೂರ, ಮಾಜಿ ಶಾಸಕ