ಚಿಂಚೋಳಿ ತಾಲೂಕಿನ ತುಮಕುಂಟಾಕ್ಕೆ ಶಾಸಕ ಡಾ.ಅವಿನಾಶ ಜಾಧವ್ ಭೇಟಿ ನೀಡಿ ಮಳೆಯಿಂದಾದ ಹಾನಿ ಪರಿಶೀಲಿಸಿದರು. ಸುಬ್ಬಣ್ಣ ಜಮಖಂಡಿ, ಸಂತೋಷಕುಮಾರ ಚವ್ಹಾಣ್, ಮಹ್ಮದ್ ಆರೀಫ್, ಗೌತಮ ಪಾಟೀಲ್, ಶರಣಪ್ಪ ತಳವಾರ ಇತರರಿದ್ದರು
ಚಿಂಚೋಳಿ: ತುಮಕುಂಟಾ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಭೀಕರ ಗಾಳಿ-ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಡಾ.ಅವಿನಾಶ ಜಾಧವ್ ಭಾನುವಾರ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಬಳಿಕ ಮಾತನಾಡಿ, ನಿಮ್ಮೊಂದಿಗೆ ತಾಲೂಕು ಆಡಳಿತವಿದೆ. ಯಾವುದಕ್ಕೂ ಭಯಪಡಬೇಡಿ. ಗಾಳಿ-ಮಳೆಯಿಂದ ಹಾನಿ ಸಂಭವಿಸಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲಾಗುವುದು. ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಪರಿಹಾರ ಹಾಗೂ ನೆರವು ನೀಡಲು ಕ್ರಮಕೈಗೊಳ್ಳಿ ಎಂದು ತಹಸೀಲ್ದಾರ್ಗೆ ಸೂಚನೆ ನೀಡಿದರು.
ಕೈವೈಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಪಂ ಇಒ ಸಂತೋಷಕುಮಾರ ಚವ್ಹಾಣ್, ಪ್ರಮುಖರಾದ ಮಹ್ಮದ್ ಆರೀಫ್, ಶರಣಪ್ಪ ತಳವಾರ, ಗೋಪಾಲರಾವ ಕಟ್ಟಿಮನಿ, ಸತೀಶರೆಡ್ಡಿ, ವಿಠ್ಠಲರೆಡ್ಡಿ, ವಿಜಯಕುಮಾರ ಚೆಂಗಟಾ, ರಾಜಕುಮಾರ ನಿಪ್ಪಾಣಿ, ಸಂಗಮನಾಥ ರೆಡ್ಡಿ, ಕೆ.ಎಂ.ಬಾರಿ, ಚಂದ್ರಶೇಖರ ಗುತ್ತೇದಾರ್, ಚನ್ನಪ್ಪ ದುಮಣಿ, ಅಂಬರೀಶ ಗೋಣಿ, ನಾಗರಾಜ ಅರೆಜಂಬಗ, ಗುರು ಪಾಟೀಲ್ ಮೋತಕಪಳ್ಳಿ ಇತರರಿದ್ದರು.