ವಿವಿಧ ಬೇಡಿಕೆಗೆ ಆಗ್ರಹಿಸಿ ಬುಧವಾರ ಯಾದಗಿರಿ ಜಿಲ್ಲಾಽಕಾರಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಪದಾಽಕಾರಿಗಳು ಪ್ರತಿಭಟನೆ ನಡೆಸಿ ಡಿಸಿಗೆ ಮನವಿಪತ್ರ ಸಲ್ಲಿಸಿದರು. ಚನ್ನಪ್ಪ ಆನೆಗುಂದಿ, ಎಸ್.ಎಂ.ಸಾಗರ, ಭೀಮರಾಯ ಪೂಜಾರಿ, ಧರ್ಮಣ್ಣ ದೊರೆ ಇತರರಿದ್ದರು. 
ರಾಜ್ಯ

ಎಕರೆಗೆ ೫೦ ಸಾವಿರ ರೂ.ಪರಿಹಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಚನ್ನಪ್ಪ ಆನೆಗುಂದಿ ಆಗ್ರಹ
  • ಯಾದಗಿರಿಯಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಯಾದಗಿರಿ: ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ನೂರಾರು ಜನರು ಇಲ್ಲಿನ ಡಿಸಿ ಕಚೇರಿ ಎದುರು ಪ್ರತಿಟಭನೆ ನಡೆಸಿ ಜಿಲ್ಲಾಽಕಾರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ಕಳೆದ ಒಂದುವರೆ ತಿಂಗಳಿAದ ಮಳೆ ಕೈ ಕೊಟ್ಟಿದೆ. ರೈತರು ಬಿತ್ತಿದ ಬೆಳೆಗಳು ಒಣಗುತ್ತಿವೆ. ಹೀಗಾಗಿ ಸಾಲ-ಸೂಲ ಮಾಡಿಕೊಂಡು ಕೃಷಿ ಕಾಯಕ ಮಾಡಿಕೊಂಡಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದು, ಅವರಿಗೆ ನೈಸರ್ಗಿಕ ವಿಕೋಪದಡಿ ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಒಂದೇ ವಾರದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂ.ಪರಿಹಾರ ನೀಡಬೇಕು. ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ಜಿರಾಮಜಿ (ನರೇಗಾ) ಯೋಜನೆಯಡಿ ಕೆಲಸ ನೀಡುವ ಮೂಲಕ ಪ್ರತಿ ಹದಿನೈದು ದಿನಗಳೊಮ್ಮೆ ಕೂಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮಳೆ ಇಲ್ಲದೆ ಹಳ್ಳ, ಕೊಳ್ಳ ಮತ್ತು ಕೆರೆಗಳು ಬತ್ತಿಹೋಗಿವೆ. ದನಕರುಗಳಿಗೆ ಕುಡಿಯಲು ನೀರಿಲ್ಲ. ಸುರಪುರ ತಾಲೂಕಿನ ಮಾಲಗತ್ತಿ, ಮೊಸಗುಂಡಾಳ, ಭೈರಮಡ್ಡಿ, ಖಾನಾಪುರ, ಶಹಾಪುರ ತಾಲೂಕಿನ ಶೆಟ್ಟಿಕೇರಾ, ಹೊಸಕೇರಾ, ನಗರ, ಗುಂಡಳ್ಳಿ, ಖಾನಾಪುರ ಕೆರೆಗೆ ಆಲಮಟ್ಟಿಯಿಂದ ನೀರು ತುಂಬಿಸಿ ಹಳ್ಳ-ಕೊಳ್ಳಗಳಿಗೆ ನೀರು ಬೀಡಬೇಕು.
ಅಲ್ಲದೆ ಶಹಾಪುರ ತಾಲೂಕಿನ ಶೆಟ್ಟಿಕೇರಾ ಗ್ರಾಮದ ೧೩ ದಲಿತ ಬಡ ಕುಟುಂಬಗಳು ಕಳೆದ ೨೦ ವರ್ಷದಿಂದ ಆಶ್ರಯ ಯೋಜನೆಯಡಿ ೨ ಎಕರೆ ಜಮೀನಿನಲ್ಲಿ ವಾಸಕ್ಕಾಗಿ ಗುಡಿಸಲುಗಳು ಹಾಕಿಕೊಂಡಿದ್ದು, ಅದನ್ನು ಒಕ್ಕುಲೆಬ್ಬಿಸಲು ಯತ್ನಿಸುವವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು.
ಈಗಲಾದರೂ ಹಕ್ಕುಪತ್ರ ನೀಡಿ, ಮನೆಗಳನ್ನು ಕಟ್ಟಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಶಹಾಪುರದಲ್ಲಿ ಸಂಚಾರ ಪೊಲೀಸ್ ಠಾಣೆ ಆರಂಭಿಸಬೇಕು. ಜೆಜೆಎಂ ಕಾಮಗಾರಿ ಹೆಸರಲ್ಲಿ ೧ರಿಂದ ೩ಕೋಟಿ ರೂ. ಖರ್ಚು ಮಾಡಿ ಕೆಲಸ ಮಾಡಿದ್ದು ಕಳಪೆ ಮಟ್ಟದಲ್ಲಿದ್ದಾಗಿದೆ. ಇದಕ್ಕೆ ಕಾರಣರಾದ ಅಽಕಾರಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಗುಣಮಟ್ಟದ ಕೆಲಸ ಮಾಡಬೇಕು. ಅಲ್ಲದೆ ವಿಮಾ ಯೋಜನೆಯನ್ನು ವೈಜ್ಞಾನಿಕವಾಗಿ ಸರ್ಕಾರವೇ ನೇರವಾಗಿ ಗ್ರಾಮಗಳಿಗೆ ತೆರಳಿ ಸರ್ವೇ ಮಾಡಿ ಬೆಳೆ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಮೇಲಿನ ಕೇಸ್ ವಾಪಸ್ ಪಡೆಯಿರಿ

ಬಿಡದಿ ರೈತರ -Àಲವತ್ತಾದ ಭೂಮಿ ಒತ್ತಾಯಪೂರ್ವಕವಾಗಿ ಪಡೆದು ಟೌನಶಿ-ï ಮಾಡಲು ಹೊರಟಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ರಮ ಖಂಡಿಸಿ, ಅಲ್ಲಿನ ರೈತರು ಬೀದಿಗಿಳಿದು ನ್ಯಾಯಯುತ ಬೇಡಿಕೆಗಳಿಗೆ ಪ್ರತಿಭಟನೆ ನಡೆಸಿದಾಗ ಅವರನ್ನು ಬೆದರಿಸಿ ಅವರ ವಿರುದ್ಧ ಸುಳ್ಳು ಕೇಸ್ ಹಾಕಿರುವ ಸರ್ಕಾರದ ಕ್ರಮ ಖಂಡಿಸಿರುವ ಅವರು, ಕೂಡಲೇ ಅವರ ಮೇಲಿನ ಕೇಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು

ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ಸಾಗರ, ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಪದಾಽಕಾರಿಗಳಾದ ಧರ್ಮಣ್ಣ ದೊರೆ, ತಮ್ಮಣ್ಣ ಜಾಹಿರದಾರ, ಭೀಮಣ್ಣ ಟ-ೆÃದಾರ, ಮರೆಪ್ಪ ಬೀರನೂರ, ಸಿದ್ದು ನಾಯ್ಕೋಡಿ, ವಿಜಯಕುಮಾರ ದೊಡ್ಮನಿ, ಭೀರಪ್ಪ ಕುರಕುಂದಿ, ಹುಲಗಪ್ಪ ಕವಡಿಮಟ್ಟ, ವಿಜಪ್ಪ ಗುಂಡಾನೋರ, ವೆಂಕೋಟ ದೊರೆ, ಮಲ್ಲಣ್ಣ ದೊರೆ ಚನ್ನೂರ, ಮಹಾದೇವಪ್ಪ ಮಗ್ಗದ ಸೇರಿ ಇತರರಿದ್ದರು.