ಯಕ್ಕಂಚಿ ಕ್ರಾಸ್​ ಬಳಿಯ ಇಂದಿರಾಗಾಂಧಿ ವಸತಿಶಾಲೆಯ ಅಡುಗೆ ಕೋಣೆಗೆ ಜಿಪಂ ಸಿಇಒ ರಾಹುಲ್​ ಸಂಕನೂರ ಭೇಟಿ ನೀಡಿ ಪರಿಶೀಲಿಸಿದರು. ರಮೇಶ ಪಾಟೀಲ್​, ರಾಮಚಂದ್ರ, ಜಗನ್ನಾಥ ರೆಡ್ಡಿ, ಕವಿತಾ ಇದ್ದರು. 
ರಾಜ್ಯ

ವಿದ್ಯಾರ್ಥಿಗಳಿಗೆ ಶುಚಿ, ರುಚಿ ಆಹಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಾಹುಲ್​ ಸಂಕನೂರ ಸೂಚನೆ
  • ಇಂದಿರಾಗಾಂಧಿ ವಸತಿಶಾಲೆಗೆ ಭೇಟಿ
ಕಮಲಾಪುರ: ಇಂದಿನ ಮಕ್ಕಳು ನಾಡಿನ ಭಾವಿ ಪ್ರಜೆಗಳಾಗಿದ್ದಾರೆ. ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶುಚಿ-ರುಚಿಯಾದ ಆಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಾಹುಲ್​ ಸಂಕನೂರ ಸೂಚನೆ ನೀಡಿದರು.
ಯಕ್ಕಂಚಿ ಕ್ರಾಸ್​ ಬಳಿಯ ಇಂದಿರಾಗಾಂಧಿ ವಸತಿಶಾಲೆಗೆ ಗುರುವಾರ ಭೇಟಿ ನೀಡಿ ಅಡುಗೆ ಕೋಣೆ, ಆಹಾರ ಪದಾರ್ಥ, ದವಸ& ಧಾನ್ಯ ಹಾಗೂ ತರಕಾರಿ ಪರಿಶೀಲಿಸಿದ ಅವರು, ಕಳಪೆ ಪದಾರ್ಥಗಳನ್ನು ಬಳಸಬೇಡಿ. ಕೆಲವೆಡೆ ತಿನ್ನಲು ಯೋಗ್ಯವಲ್ಲದ ಹಾಗೂ ದಿನಾಂಕ ಮುಗಿದಿರುವ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಾಸ್ಟೆಲ್​ ಆವರಣದಲ್ಲಿ ವಿಬಿ-ಜಿ ರಾಮ್​ ಜಿ ಯೋಜನೆಯಡಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಎಂದು ಸೂಚನೆ ನೀಡಿದರು.
ಮಹಾಗಾಂವ್​ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದ್ರನಗರದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಂಡ ಪೈಪ್​ಲೈನ್​, ನಾಗೂರ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಸಾರ್ವಜನಿಕ ಶೌಚಗೃಹ, ತಡಕಲ್​ನಲ್ಲಿ ವಿಬಿ-ಜಿ ರಾಮ್​ ಜಿ ಯೋಜನೆಯಡಿ ಕೈಗೊಂಡ ಕಾಮಗಾರಿ ಪರಿಶೀಲಿಸಿದರು.
ಕಮಲಾಪುರ ತಾಪಂ ಇಒ ರಮೇಶ ಪಾಟೀಲ್​, ಗ್ರಾಮೀಣ ಕುಡಿವ ನೀರು ಸರಬರಾಜು ನಿಗಮದ ಎಇಇ ರಾಮಚಂದ್ರ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಜಗನ್ನಾಥ ರೆಡ್ಡಿ, ಇಂದಿರಾಗಾಂಧಿ ವಸತಿಶಾಲೆ ಪ್ರಭಾರಿ ಪ್ರಾಂಶುಪಾಲೆ ಕವಿತಾ, ವಾರ್ಡನ್​ ರವಿಕುಮಾರ, ಪಿಡಿಒಗಳಾದ ಮಂಜುನಾಥ (ಮಹಾಗಾಂವ್​), ಅಭಿಜಿತ್​ (ಕುರಿಕೋಟಾ), ವಾಹೆದ್​ ಅಲಿ (ನಾಗೂರ), ಅಧಿಕಾರಿಗಳಾದ ಗಿರೀಶ ಇಂಡಿ, ಉಮೇಶ ಯಕ್ಕಂಚಿ ಇತರರಿದ್ದರು.
"

ನಾನು ಸರ್ಕಾರಿ ಹಾಸ್ಟೆಲ್​ಗಳಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಐಎಎಸ್​ ಅಧಿಕಾರಿಯಾಗಿದ್ದೇನೆ. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡಿದರೆ ಗುರಿ ತಲುಪಲು ಸಾಧ್ಯ.

— > ರಾಹುಲ್​ ಸಂಕನೂರ, ಜಿಪಂ ಸಿಇಒ, ಕಲಬುರಗಿ