ಹುಮನಾಬಾದ್​ ತಾಲೂಕಿನ ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್​ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ಸಂರ್ಷ ಸಮಿತಿ ಮುಖಂಡರು ಶನಿವಾರ ಬಸ್​ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಸಮಿತಿ ಅಧ್ಯ ರಾಹುಲ್​ ಉದ್ದಾ, ಪ್ರಮುಖರಾದ ಅಲಿಸಾಬ್​ ಮಚಕೂರಿ, ರೇವಪ್ಪ ದಾಗೆ, ಭೀಮರಾವ ಹಂಗರಗಿ, ಭಾರತಬಾಯಿ ಇತರರಿದ್ದರು. 
ರಾಜ್ಯ

ಚಿತ್ತಕೋಟಾ ಗ್ರಾಮಕ್ಕೆ ಬಸ್​ ಸೌಲಭ್ಯ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ದಲಿತ ಸಂಘರ್ಷ ಸಮಿತಿಯಿಂದ ಮನವಿಪತ್ರ ಸಲ್ಲಿಸಿ ಒತ್ತಾಯ
ಹುಮನಾಬಾದ್​: ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್​ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್​ ವಾದ) ಮುಖಂಡರು ಶನಿವಾರ ಪಟ್ಟಣದ ಬಸ್​ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಚಿತ್ತಕೋಟಾ ಗ್ರಾಮಕ್ಕೆ ನಿಯಮಿತ ಬಸ್​ ಸಂಚಾರ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು, ವಿದ್ಯಾರ್ಥಿಗಳು, ರೈತರು ಹಾಗೂ ಉದ್ಯೋಗಸ್ಥರು ನಿತ್ಯ ಸಂಚಾರದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆ&ಕಾಲೇಜು, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಲು ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲ ಉಂಟಾಗುತ್ತಿದ್ದು, ಗ್ರಾಮಕ್ಕೆ ಪ್ರತಿದಿನ ನಿಗದಿತ ವೇಳಾಪಟ್ಟಿಯಂತೆ ಬಸ್​ ಸೇವೆ ಆರಂಭಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ಸೌಲಭ್ಯ ಕಲ್ಪಿಸಿದ್ದರೂ, ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್​ಗಳು ಸಂಚರಿಸದಿದ್ದರೆ ಆ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಸ್​ ಸೇವೆ ಆರಂಭಿಸಬೇಕು. ಇಲ್ಲವಾದಲ್ಲಿ ದಲಿತ ಸಂರ್ಷ ಸಮಿತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಿತಿ ಅಧ್ಯ ರಾಹುಲ್​ ಉದ್ದಾ, ಪ್ರಮುಖರಾದ ಅಲಿಸಾಬ್​ ಮಚಕೂರಿ, ರೇವಪ್ಪ ದಾಗೆ, ಭೀಮರಾವ ಹಂಗರಗಿ, ಭಾರತಬಾಯಿ, ಸುವರ್ಣಾ, ಭೀಮಣ್ಣ ದಾಗೆ, ಶಶಿಕಲಾ, ಕಾಶಮ್ಮ, ಗೀತಾಬಾಯಿ ಇತರರಿದ್ದರು.