ಸುರಪುರ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ನಗರಸಭೆ ಅಧಿಕಾರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು.
- ಭಾರತೀಯ ದಲಿತ ಪ್ಯಾಂಥರ್ ಆಗ್ರಹ
- ನಗರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ
ಸುರಪುರ: ನಗರದ ರಸ್ತೆ, ತಗ್ಗು-ಗುಂಡಿ, ನೈರ್ಮಲ್ಯ, ಚರಂಡಿ ನಿರ್ಮಾಣ ಸೇರಿ ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ಶುಕ್ರವಾರ ನಗರಸಭೆ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ನಂತರ ಪ್ಯಾಂಥರ್ನ ಸಂಟನಾ ಕಾರ್ಯದರ್ಶಿ ಆದಪ್ಪ ಹೊಸ್ಮನಿ ಮಾತನಾಡಿ, ಇಲ್ಲಿನ ನಗರಸಭೆ ಕಚೇರಿ ಮುಂಭಾಗದ ರಸ್ತೆ, ರಂಗಂಪೇಟೆ ಎಸ್ಬಿಐ ಬ್ಯಾಂಕ್ ರಸ್ತೆ, ತಿಮ್ಮಾಪುರ ಬಸ್ ನಿಲ್ದಾಣ, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ, ಆದಿತಿ ಹೋಟೆಲ್ ಹತ್ತಿರ, ವೆಂಕಟಾಪುರ ಕಸ ವಿಲೇವಾರಿಗೆ ಹೋಗುವ ರಸ್ತೆ, ಪಾಳದಕೇರಿಯ ಇಳಿಮುಖ ರಸ್ತೆ, ಖಾನಾಪುರ ಎಸ್ಎಚ್ ಎಪಿಎಂಸಿ ರಸ್ತೆ ಸೇರಿ ಅನೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ದೂರಿದರು.
ನಗರದ ಬಹುತೇಕ ರಸ್ತೆಗಳು ಬೃಹತ್ ತಗ್ಗು&ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಬಾರದಂತಾಗಿವೆ. ಎಲ್ಲ ವಾಹಗಳು ಓಡಾಡಲು ಹರಸಾಹಸ ಪಡುತ್ತಿವೆ. ವೃದ್ಧರು ಹಾಗೂ ಶಾಲಾ ಮಕ್ಕಳು ರಸ್ತೆ ಗುಂಡಿಗಳಿಂದಾಗಿ ಬಿದ್ದು ಗಾಯಗೊಂಡಿರುವ ಟನೆ ನಡೆದಿವೆ. ನಗರದ ಮುಖ್ಯರಸ್ತೆಯ ತಗ್ಗು ಗುಂಡಿಗಳ ಗತಿ ಹೀಗಾದರೆ, ನಗರದ 31 ವಾರ್ಡ್ಗಳಲ್ಲಿ ಯಾವ ರೀತಿ ಇರಬಹುದು ಎಂದು ಪ್ರಶ್ನೀಸಿದರು.
ಒಂದು ವಾರದೊಳಗೆ ನಗರದಲ್ಲಿ ಎಲ್ಲ ವಾರ್ಡ್ಗಳಿಗೆ ಭೇಟಿ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತಾ ಪ್ಯಾಂಥರ್ ತಾಲೂಕು ಅಧ್ಯಕ್ಷ ಮಂಜುನಾಥ ಹೊಸ್ಮನಿ, ಉಪಾಧ್ಯಕ್ಷ ಗೋಪಾಲ ಚಲುವಾದಿ, ಹಣಮಂತ ಭದ್ರಾವತಿ, ಶೇಖರ ಜೀವಣಗಿ, ಗುರುಪುತ್ರ ಮುದನೂರು ಇತರರಿದ್ದರು.