Provide basic facilities to Kurisante
ಚಿಕ್ಕನಾಯಕನಹಳ್ಳಿ: ಪಟ್ಟಣದ ಕುರಿ ಸಂತೆಯಲ್ಲಿ ಸೋಮವಾರ ಹಲವು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಕುರಿಗಾಹಿ ರೈತ ಮುಖಂಡರುಧ್ವಜಾರೋಹಣ ನೆರವೇರಿಸಿದರು. ಕೆಆರ್ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಮಾತನಾಡಿ, ನೂರಾರು ವರ್ಷದಿಂದ ಇಲ್ಲಿ ಕುರಿಸಂತೆ ನಡೆದುಕೊಂಡು ಬಂದಿದೆ. ಆದರೆ ಇಲ್ಲಿ ಹಲವು ಸಮಸ್ಯೆಗಳಿವೆ. ಕುರಿ ಸಂತೆಯಲ್ಲಿ ಆಡು, ಕುರಿ ಮಾರಾಟಕ್ಕೆ ಜೀವಂತ ತೂಕದ ವೈಜ್ಞಾನಿಕ ಮಾನದಂಡ (ತೂಕದ ಲೆಕ್ಕದಲ್ಲಿ ಬೆಲೆ) ನಿಗದಿಯಾಗಬೇಕು. ಪಾರದರ್ಶಕ ವ್ಯಾಪಾರಕ್ಕಾಗಿ ಸರ್ಕಾರವೇ ತೂಕದ ಯಂತ್ರಗಳನ್ನು ಸ್ಥಾಪಿಸಬೇಕು. ಗುತ್ತಿಗೆ ಮಾನದಂಡ ವ್ಯಾಪಾರವನ್ನು ನಿಲ್ಲಿಸಿದರೆ ಪ್ರತಿ ವಾರ ರೈತರಿಗೆ ಆಗುತ್ತಿರುವ ಲಕ್ಷಾಂತರ ರೂ. ನಷ್ಟವನ್ನು ನಿಲ್ಲಿಸಬಹುದು ಎಂದರು.
ಈ ಸ್ಥಳದಲ್ಲಿ ಎಪಿಎಂಸಿ ವತಿಯಿಂದ ಆಧುನಿಕ ವಧಾಗಾರವನ್ನು ಸ್ಥಾಪಿಸಿ ಆಡು, ಕುರಿ ಮಾರಾಟದ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು.ಕುರಿ ಸಂತೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಹಾಗೂ ತಾಲೂಕಿನ ಆಡು, ಕುರಿ ಸಂಘಗಳಿಗೆ ಸರ್ಕಾರವೇ ಆರ್ಥಿಕ ನೆರವು ನೀಡಿ ಬಲಪಡಿಸಬೇಕೆಂಬ ಎಂದು ಒತ್ತಾಯಿಸಿ ತಹಸೀಲ್ದಾರ್ ಎಂ.ಮಮತಾ ಅವರಿಗೆ ಮನವಿ ಸಲ್ಲಿಸಿದರು. +