ಕಕ್ಕೇರಾ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು. ಬಸವರಾಜ ಹೊಸಮನಿ, ಸಂಗಣ್ಣ ಅಡಗಲ್, ತಿಪ್ಪಣ್ಣ ಜಂಪಾ, ಅಯೂಬ್, ನಾಗರಾಜ ಚನ್ನಪಟ್ಟಣ ಇತರರಿದ್ದರು.
- ಡಿಎಸ್ಎಸ್ ತಾಲೂಕು ಪದಾಧಿಕಾರಿಗಳ ಆಗ್ರಹ
- ಪುರಸಭೆ ಮುಖ್ಯಾಧಿಕಾರಿಗೆ ಮನವಿ
ಕಕ್ಕೇರಾ: ಪಟ್ಟಣದ ಸಾರ್ವಜನಿಕ ಸ್ಮಶಾನ ಸ್ವಚ್ಛತೆ ಹಾಗೂ ಕಂಪೌಂಡ್ ನಿರ್ಮಾಣ, ವಾರ್ಡ್ 5 ಮತ್ತು 7ರಲ್ಲಿ ಶೌಚಗೃಹಗಳ ದುರಸ್ತಿ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೇನೆ ಪದಾಧಿಕಾರಿಗಳು, ಅಲ್ಲದೆ ಅಂಬೇಡ್ಕರ್ ಪುತ್ಥಳಿ ಬಳಿ ಇರುವ ಬಾವಿ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿರುವ ಸರ್ವೆ ನಂ.256ರಲ್ಲಿ ಸ್ಮಶಾನಕ್ಕೆ ಕಾಯ್ದಿರಿಸಿದ ಒಂದು ಎಕರೆ ಜಾಗದಲ್ಲಿ ಸ್ವಚ್ಛತೆ ಮಾಡಿ ಮತ್ತು ಕಂಪೌಂಡ್ ನಿರ್ಮಾಣ ಮಾಡಬೇಕು. ವಾರ್ಡ್ 5ರ ಗುರಿಕಾರ ಓಣಿ ಮತ್ತು ವಾರ್ಡ್ 7ರ ಅಂಬೇಡ್ಕರ್ ನಗರದಲ್ಲಿ ಕಳೆದ ಒಂದು ವರ್ಷದಿಂದ ಶೌಚಗೃಹಗಳ ದುರಸ್ತಿ ಇಲ್ಲದೇ ಮಹಿಳೆಯರು ಪರದಾಡುವಂತಾಗಿದೆ. ಮತ್ತು ಅಂಬೇಡ್ಕರ್ ಪುತ್ಥಳಿ ಬಳಿ ಇರುವ ಬಾವಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಸಮಸ್ಯೆಗಳನ್ನು ಕೂಡಲೇ ಈಡೇರಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಾಮೂಹಿಕ ಸಂಟನೆಗಳು, ರೈತ ಸಂಟನೆಗಳು, ನೂರಾರು ಮಹಿಳೆಯರೊಂದಿಗೆ ಪುರಸಭೆ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಬಸವರಾಜ ಹೊಸಮನಿ, ಸಂಗಣ್ಣ ಸುಬೇದಾರ್, ನಿಂಗಪ್ಪ ಚಲುವಾದಿ, ಮಲ್ಲಪ್ಪ ಬಂಢಾರಿ, ಅಯೂಬ್ ಸರ್ಕವಸ್, ಪರಮಣ್ಣ ಭಜಂತ್ರಿ, ವೆಂಕಟೇಶ, ಭೀಮರಾಯ ದಿವಾಕರ್, ಇಮಾಮಸಾಬ, ತಿಪ್ಪಣ್ಣ ಜಂಪಾ, ಜಟ್ಟೆಪ್ಪ ದೇವರಮನಿ, ಅಕ್ಬರ್ ದಖನಿ ಇತರರಿದ್ದರು.