ಕೇಂದ್ರ ಸರ್ಕಾರದ ಪಿಂಚಣಿ ನೀತಿ ವಿರೋಧಿಸಿ ಸರ್ಕಾರಿ ನಿವೃತ್ತ ನೌಕರರ ಸಂದಿಂದ ಚಿತ್ತಾಪುರದ ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ರೇವಣಸಿದ್ದಪ್ಪ ರೋಣದ, ವಿಜಯಕುಮಾರ ಲೋಡ್ಡೆನೋರ, ಶಶಿಧರ ಉಟಗೂರ, ಮಹಾದೇವಪ್ಪ ಉಪ್ಪಾರ, ಕಿಶನ್ ರಾಠೋಡ್ ಇತರರಿದ್ದರು.
- ಚಿತ್ತಾಪುರದ ಪ್ರಜಾಸೌಧ ಎದುರು ಸಂದಿಂದ ಪ್ರತಿಭಟನೆ
- ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಚಿತ್ತಾಪುರ : ಕೇಂದ್ರ ಸರ್ಕಾರ ನಿವೃತ್ತ ಸರ್ಕಾರಿ ನೌಕರರ ಹಿತ ಕಾಪಾಡಲು ಮುಂದಾಗಬೇಕು ಎಂದು ಸರ್ಕಾರಿ ನಿವೃತ್ತ ನೌಕರರ ಸಂದ ತಾಲೂಕು ಅಧ್ಯ ರೇವಣಸಿದ್ದಪ್ಪ ರೋಣದ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಪಿಂಚಣಿ ನೀತಿ ಖಂಡಿಸಿ ಪ್ರಜಾಸೌಧ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮನ್ ಅವರು ಸರ್ಕಾರಿ ನಿವೃತ್ತ ನೌಕರರಿಗೆ 5 ವರ್ಷಕ್ಕೊಮ್ಮೆ ಜರುಗುವ ವೇತನ ಶ್ರೇಣಿಯಲ್ಲಿ ವೇತನ ಷರಿಷ್ಕರಣೆ ಮಾಡಲು ನಿರಾಕರಿಸಿದ್ದಾರೆ. ವರ್ಷಕ್ಕೆ ಎರಡು ವೇತನ ತುಟ್ಟಿ ಮೊತ್ತ ತಡೆಹಿಡಿಯಲು ಮುಂದಾಗಿದ್ದಾರೆ. ಇದು ಖಂಡನೀಯ. ನಿವೃತ್ತ ನೌಕರರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ವಿಜಯಕುಮಾರ ಲೋಡ್ಡೆನೋರ, ಶಶಿಧರ ಉಟಗೂರ, ಮಹಾದೇವಪ್ಪ ಉಪ್ಪಾರ, ಕಿಶನ್ ರಾಠೋಡ್, ಮಲ್ಲಣ್ಣ ಮಾಸ್ತರ್ ಮುಡಬೂಳ, ಸುಭಾಷ ಮೇಂಗಜಿ, ಶಿವನಾಗಪ್ಪ ಮುತ್ತಲಗಡ್ಡಿ, ದೇವಪ್ಪ ನಂದೂರಕರ, ತುಕಾರಾಮ ನಾಯಕ್ ರಾಠೋಡ್, ಮೋನಯ್ಯ ಪಂಚಾಳ, ಮಾಯಾದೇವಿ ರೋಣದ, ಸರಸ್ವತಿ ಪಾಟೀಲ್, ಶಾಂತಾಬಾಯಿ, ಸರಳಾಬಾಯಿ, ಬಾಬು ಕರದಾಳ, ಸಿದ್ದಯ್ಯ ಸ್ಥಾವರಮಠ, ಮೋತಿಲಾಲ್ ಚವ್ಹಾಣ್, ಶಬ್ಬೀರ್ಮಿಯ್ಯ, ದೇವಿಂದ್ರಪ್ಪ ಶಹಾಬಾದಕರ್, ಮಲ್ಲಿಕಾರ್ಜುನ ಮಲಕೂಡ, ಬಸವರಾಜ ಕಲಬುರಗಿ ಇತರರಿದ್ದರು.