ಆಳಂದ ಎಪಿಎಂಸಿ ಆವರಣದಲ್ಲಿ ಕೆವೈಡಿಸಿಸಿ ಬ್ಯಾಂಕ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಆರ್.ಪಾಟೀಲ್ ಚಾಲನೆ ನೀಡಿದರು. ಅಶೋಕ ಸಾವಳೇಶ್ವರ, ಪವನಕುಮಾರ ರಾಠೋಡ್, ಶಿವಪುತ್ರಪ್ಪ ಪಾಟೀಲ್ ಇತರರಿದ್ದರು.
- ಶಾಸಕ ಬಿ.ಆರ್.ಪಾಟೀಲ್ ಸಲಹೆ
- ಆಳಂದನಲ್ಲಿ ಕೆವೈಡಿಸಿಸಿ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಆಳಂದ: ಗುಣಮಟ್ಟದ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಬೇಕು. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಸಾಲ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯರೂ ಆದ ಶಾಸಕ ಬಿ.ಆರ್.ಪಾಟೀಲ್ ಸಲಹೆ ನೀಡಿದರು.
ಎಪಿಎಂಸಿ ಆವರಣದಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ&ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಕೆವೈಡಿಸಿಸಿ) ಬ್ಯಾಂಕ್ನ ಸ್ಥಳಿಯ ಶಾಖೆ ಕಟ್ಟಡ ನಿರ್ಮಾಣ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರು ಬೆಳೆ ಸಾಲ, ಕೃಷಿ ಉಪಕರಣ ಖರೀದಿ, ಹೈನುಗಾರಿಕೆ, ಸಣ್ಣ ಉದ್ಯಮ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಹಕಾರಿ ಬ್ಯಾಂಕ್ಗಳನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ ಬ್ಯಾಂಕ್ಗಳು ರೈತಸ್ನೇಹಿ ಕಾರ್ಯವೈಖರಿ ಅನುಸರಿಸಬೇಕು ಎಂದು ಹೇಳಿದರು.
ರೈತಾಪಿ ವರ್ಗ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಬ್ಯಾಂಕ್ಗಳ ಆರ್ಥಿಕ ಸ್ಥಿತಿ ಮತ್ತಷ್ಟು ಸದೃಢಗೊಳ್ಳಲಿದೆ. ಇದರಿಂದ ಹೆಚ್ಚಿನ ರೈತರಿಗೆ ಹೊಸ ಬೆಳೆ ಸಾಲ, ಹೈನುಗಾರಿಕೆ ಸಾಲ ಹಾಗೂ ಸ್ವಸಹಾಯ ಚಟುವಟಿಕೆಗಳಿಗೆ ಹಣದ ನೆರವು ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಲಬುರಗಿ&ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಕೆವೈಡಿಸಿಸಿ) ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿ, ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ತೊಂದರೆ ಆಗುತ್ತಿತ್ತು. ರೈತರ ಬಹುದಿನಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ನಿವೇಶನ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿತ್ತು. ಹೊಸ ಕಟ್ಟಡ ನಿರ್ಮಾಣದಿಂದ ಬ್ಯಾಂಕ್ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಲಿವೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ ರಾಠೋಡ್ ಪ್ರಸ್ತಾವಿಕ ಮಾತನಾಡಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಶಿವುಪುತ್ರಪ್ಪ ಪಾಟೀಲ್, ಶಾಖೆ ವ್ಯವಸ್ಥಾಪಕ ಶರಣಬಸಪ್ಪ, ಪ್ರಮುಖರಾದ ಶರಣಪ್ಪ ಢಗೆ, ಭರತ್ ಪಾಟೀಲ್, ವೀರಭದ್ರ ಕೋರೆ, ಬಸವರಾಜ ಪಾಟೀಲ್, ಮಹಾದೇವ ಪಾಟೀಲ್, ಸಿದ್ದರಾಮ ಆಳಂಗೆ, ಕಲ್ಯಾಣರಾವ ಮೂಲಗೆ, ವಿಠ್ಠಲ್ ಹೂಗಾರ, ಶ್ರೀಕಾಂತ ಹೂಗಾರ, ಚನ್ನವಿರ ಇತರರಿದ್ದರು.