ರೈತರಿಗೆ ಸಮರ್ಪಕ ಬೀಜ ಮತ್ತು ರಸಗೊಬ್ಬರ ವಿತರಿಸುವಂತೆ ಆಗ್ರಹಿಸಿ ಸುರಪುರ ತಹಸಿಲ್​ ಕಚೇರಿ ಎದುರು ಸೋಮವಾರ ಕರ್ನಾಟಕ ಪ್ರಾಂತ ರೈತ ಸಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್​-2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು. 
ರಾಜ್ಯ

ರೈತರಿಗೆ ಸಮರ್ಪಕ ಬೀಜ-ಗೊಬ್ಬರ ಪೂರೈಸಿ

ಸುರಪುರ: ತಾಲೂಕಿನಲ್ಲಿ ಮುಂಗಾರು ಬಿತ್ತನೆ ಆರಂಭವಾದ್ದು, ಹೀಗಾಗಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕವನ್ನು ಸಮರ್ಪಕವಾಗಿ ಮತ್ತು ಸಕಾಲದಲ್ಲಿ ವಿತರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮತ್ತು ತಾಲೂಕು ಸಮಿತಿ ಕಾರ್ಯಕರ್ತರು ತಹಸೀಲ್ದಾರ್​ ಮೂಲಕ ಜಂಟಿ ಕೃಷಿ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ತಾಲೂಕಿನಲ್ಲಿ ರಸಗೊಬ್ಬರದ ಅಗತ್ಯ ಹೆಚ್ಚಾಗಿದೆ. ಗೊಬ್ಬರ ವಿತರಣೆಯಲ್ಲಿ ಆನ್​ಲೈನ್​ ನೆಪ ಒಡ್ಡಿ ವಿಳಂಬ ಮಾಡುವುದನ್ನು ಕೈಬಿಟ್ಟು ಎಲ್ಲ ಅಂಗಡಿಗಳಲ್ಲಿ ರಸಗೊಬ್ಬರ ಸಿಗುವಂತೆ ನೋಡಿಕೊಳ್ಳಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ತಾಲೂಕು ಅಧ್ಯಕ್ಷ ಧರ್ಮಣ್ಣ ದೊರಿ, ಪ್ರಧಾನ ಕಾರ್ಯದರ್ಶಿ ರಾಮಯ್ಯ ಅಲ್ಹಾಳ, ಶಹಾಪೂರ ತಾಲೂಕು ಪ್ರಧಾನ ಕಾರ್ಯದರ್ಶಿ ಭೀಮಣ್ಣ ಟಪ್ಪೆದಾರ್​, ಸುರಪುರ ತಾಲೂಕು ಉಪಾಧ್ಯಕ್ಷರಾದ ಮಲ್ಲನಗೌಡ ಮಾಲಿ ಪಾಟೀಲ್​, ವೆಂಕೋಬ ಪಾಟೀಲ್​ ಕುಪಗಲ್​, ಸಹ ಕಾರ್ಯದರ್ಶಿ ಹುಲಗಪ್ಪ ಕವಡಿಮಟ್ಟಿ, ದೇವು ಕವಡಿಮಟ್ಟಿ, ಮಲ್ಲಣ್ಣ ಚನ್ನೂರ ಬಾದ್ಯಾಪೂರ, ರಫೀಕ್​, ಭೀಮರಾಯ ಚಂದಲಾಪುರ, ಮಲ್ಲಿಕಾರ್ಜುನ, ಕೃಷ್ಣಾ, ಯಲ್ಲಪ್ಪ, ವಿಶ್ವನಾಥ ಹೊಸಮನಿ, ಹೊಳೆಪ್ಪ ರೈತರಿದ್ದರು.