: ಅಭಯ ದಿನದ ನಿಮಿತ್ತ ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸೂಸೈಟಿ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿದ್ದ ಜಾಗೃತಿ ರ್ಯಾಲಿಯಲ್ಲಿ ಬಿಕೆಒಜಿಎಸ್ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಮಾತನಾಡಿದರು. ಡಾ.ಮಹೇಶ ಪಾಟೀಲ್, ಡಾ.ಸುಶೀಲಾ ಹೊಳಕುಂದೆ, ಜ್ಯೋತಿ ಹಂಚಾಟೆ, ಡಾ.ಜಿ.ಎಸ್.ಭುರಳೆ, ಡಾ.ಬಸವರಾಜ ಸ್ವಾಮಿ, ಉಮೇಶ ಶೀಲವಂತ ಇತರರಿದ್ದರು.
ಬಸವಕಲ್ಯಾಣ: ಮಹಿಳೆಯರ ಮತ್ತು ವೈದ್ಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಬಸವಕಲ್ಯಾಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸೂಸೈಟಿ(ಬಿಕೆಒಜಿಎಸ್) ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಜಾಗೃತಿ ರ್ಯಾಲಿ ನಡೆಸಲಾಯಿತು.
ಅಭಯ ದಿನದ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ರ್ಯಾಲಿ ನಡೆಸಿ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲಾಯಿತು. ರ್ಯಾಲಿಯಲ್ಲಿ ಬಿಕೆಒಜಿಎಸ್ ಅಧ್ಯಕ್ಷೆ ಡಾ.ಶಾಂತಾ ದುರ್ಗೆ, ಕಾರ್ಯದರ್ಶಿ ಡಾ.ಪ್ರಿಯಾಂಕಾ ವರವಟ್ಟೆ, ಭಾರತೀಯ ವೈದ್ಯಕಿಯ ಸಂಘ. ಆಯುಷ್ ಅಸೋಸಿಯೇಷನ್, ಸ್ಕೌಟ್ಸ್ ಸಂಸ್ಥೆ, ರೋಟರಿ ಕ್ಲಬ್, ಬಸವೇಶ್ವರ ಪ್ರೌಢಶಾಲೆ ಹಾಗೂ ಸಂಕಲ್ಪ ಕಾಲೇಜಿನ ವೈದ್ಯರು, ಸಂಘ-& ಸಂಸ್ಥೆ ಪದಾಧಿಕಾರಿಗಳು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ್ಯಾಲಿಗೆ ಚಾಲನೆ ನೀಡಿದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ.ಮಹೇಶ್ ಪಾಟೀಲ್ ಮಾತನಾಡಿ, ವೈದ್ಯೋ ನಾರಾಯಣೋ ಹರಿ@ ಎಂದರೆ ವೈದ್ಯರು ಸಾಕ್ಷಾತ್ ಭಗವಂತನ ಸ್ವರೂಪ ಎಂರ್ಬಥವಿದೆ. ರೋಗಿಗಳ ನೋವನ್ನು ನಿವಾರಿಸಿ ಜೀವ ಉಳಿಸುವ ವೈದ್ಯರನ್ನು ನಮ್ಮ ದೇಶದಲ್ಲಿ ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ. ಸಮಾಜದಲ್ಲಿ ವೈದ್ಯರು ಮತ್ತು ಮಹಿಳೆಯರ ಸುರಕ್ಷತೆ ಅತ್ಯಂತ ಜರೂರಾಗಿದೆ ಎಂದು ಹೇಳಿದರು.
ಬಿಕೆಒಜಿಎಸ್ ಅಧ್ಯಕ್ಷೆ ಡಾ.ಶಾಂತಾ ದುರ್ಗೆ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಸ್ವಾಸ್ಥ$್ಯಸಮಾಜಕ್ಕೆ ಮಾರಕವಾಗಿವೆ. ಆರೋಗ್ಯವಂತ ಸಮಾಜದ ನಿಮಾರ್ಣಕ್ಕಾಗಿ ವೈದ್ಯರು ಹಾಗೂ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಸಿಗಬೇಕು ಎಂದರು.
ನಿವೃತ್ತ ಟಿಎಚ್ಒ ಡಾ.ಜಿ.ಎಸ್.ಭುರಳೆ ಮಾತನಾಡಿ, ವೈದ್ಯರು ಮತ್ತು ವಿಶೇಷವಾಗಿ ಮಹಿಳಾ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಸುರಕ್ಷಿತ ಕೆಲಸದ ವಾತಾವರಣವನ್ನು ನಿರ್ಮಿಸುವುದು ಅವಶ್ಯಕ ಎಂದು ಹೇಳಿದರು.
ಸಿಪಿಐ ಅಲಿಸಾಬ್, ಅನುಭವ ಮಂಟಪದ ಕಾರ್ಯದರ್ಶಿ ಡಾ. ಎಸ್.ಬಿ.ದುರ್ಗೆ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಸುಶೀಲಾ ಹೊಳಕುಂದೆ, ನಿವೃತ್ತ ಟಿಎಚ್ಒ ಡಾ.ವಿ.ಎಸ್.ಮಠಪತಿ, ಐಎಂಎ ಕಾರ್ಯದರ್ಶಿ ಡಾ.ಶಿವರಾಜ್ ಮಾಲಿಪಾಟೀಲ್, ಡಾ.ಬಸವರಾಜ್ ಸ್ವಾಮಿ, ಉಮೇಶ ಶೀಲವಂತ, ಡಾ.ಜ್ಯೋತಿ ಹಂಚಾಟೆ, ಡಾ.ದೀಪಾ ಹೊಳಕುಂದೆ, ಡಾ.ಬಬಿತಾ ಬಿರಾದಾರ್, ಡಾ.ನಂದಿನಿ ಮಾಲಿಪಾಟೀಲ್ ಹಾಗೂ ಸ್ಕೌಟ್ಸ್ ತಾಲೂಕು ಕಾರ್ಯದರ್ಶಿ ಅನಿಲ್ ಶಾಸ್ತ್ರಿ ಇದ್ದರು.