ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಕೇಂದ್ರ, ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು, ಕೇಂದ್ರ ಸರ್ಕಾರ ಕಾಂಪ್ಲೆಕ್ಸ್​ ಗೊಬ್ಬರಕ್ಕೆ ಸಹಾಯಧನ ನೀಡಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಕಲಬುರಗಿ ಎಪಿಎಂಸಿ ಎದುರು ಮಂಗಳವಾರ ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು. ಸಂದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ದಪ್ಪ ಪಾಟೀಲ್​, ಭೀಮಶಾ ಬಡದಾಳ್​, ದೇವು ಬಿರಾದಾರ್​, ಶರಣಪ್ಪ ವಚ್ಚಾ, ಸಿದ್ದು ಎಸ್​.ಎಲ್​ ಇತರರಿದ್ದರು. 
ರಾಜ್ಯ

ಸಮರ್ಪಕ ರಸಗೊಬ್ಬರ ಪೂರೈಸಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿಭಟನೆ
 ಕಲಬುರಗಿ: ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ಕೇಂದ್ರ, ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು, ಕೇಂದ್ರ ಸರ್ಕಾರ ಕಾಂಪ್ಲೆಕ್ಸ್​ ಗೊಬ್ಬರಕ್ಕೆ ಸಹಾಯಧನ ನೀಡಬೇಕು ಎಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಕಲಬುರಗಿ ಎಪಿಎಂಸಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರಸಗೊಬ್ಬರ ಕೊರತೆ ನೀಗಿಸಬೇಕು, ಪೆಟ್ರೋಲ್​, ಡೀಸೆಲ್​ ಬೆಲೆ ಇಳಿಕೆ ಮಾಡಬೇಕು, ವಿದ್ಯುತ್​ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು. ರಸಗೊಬ್ಬರ ದುಬಾರಿ ಬೆಲೆಯಿಂದಾಗಿ ರೈತರು ತತ್ತರಿಸಿದ್ದಾರೆ. ರೈತರು ಪಹಣಿ, ಆಧಾರ್​ ಕಾರ್ಡ್​ನೊಂದಿಗೆ ಎರಡು ದಿನ ಪಾಳಿಯಲ್ಲಿ ನಿಂತರೂ ಗೊಬ್ಬರ ದೊರೆಯುತ್ತಿಲ್ಲ ಎಂದು ದೂರಿದರು.
ಕೃಷಿ ನಷ್ಟದಲ್ಲಿ ನಡೆಯುತ್ತಿದೆ. ಕೃಷಿ ವೆಚ್ಚ ಏರಿಕೆಯಾಗಿ ರೈತ ಕುಟುಂಬಗಳು ಸಾಲ ಮಾಡಿ ತೊಂದರೆಗೆ ಸಿಲುಕಿವೆ. ಆಹಾರ ಭದ್ರತೆ, ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತರು ಆತ್ಮಸ್ಥೆರ್ಯ ಕಳೆದುಕೊಳ್ಳುತ್ತಿದ್ದಾರೆ. ಭೂಮಿ ಮತ್ತು ನೀರು ರೈತರ ಮೂಲಭೂತ ಅವಶ್ಯಕತೆ. ಇದನ್ನು ಪೂರೈಸುವ ಜವಾಬ್ದಾರಿ ಹೊಂದಿರುವ ಸರ್ಕಾರಗಳು ನುಣುಚಿಕೊಳ್ಳಲು ಯತ್ನಿಸುತ್ತಿವೆ ಎಂದು ದೂರಿದರು.
ದೇಶಾದ್ಯಂತ ವ್ಯಾಪಕವಾಗಿರುವ ರಸಗೊಬ್ಬರ ಬಿಕ್ಕಟ್ಟು ರೈತರನ್ನು ಲೂಟಿ ಮಾಡುತ್ತಿದ್ದು, ಕೃಷಿಯನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸುತ್ತಿವೆ. ಬಿತ್ತನೆ ಪ್ರಾರಂಭವಾಗುತ್ತಿದ್ದಂತೆ ರೈತರು ರಸಗೊಬ್ಬರ ತೀವ್ರ ಕೊರತೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್​ ಚವ್ಹಾಣರಿಗೆ ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮೂಲಕ ಮನವಿಪತ್ರ ಸಲ್ಲಿಸಿದರು. ಸಂದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ದಪ್ಪ ಪಾಟೀಲ್​, ಭೀಮಶಾ ಬಡದಾಳ್​, ದೇವು ಬಿರಾದಾರ್​, ಶರಣಪ್ಪ ವಚ್ಚಾ, ಸಿದ್ದು ಎಸ್​.ಎಲ್​ ಇತರರಿದ್ದರು.
"

ಕೋಟ್​ ಜೀವನ ವೆಚ್ಚ ಮತ್ತು ಬೇಸಾಯ ವೆಚ್ಚದ ಅಧಿಕ ಭಾರದಿಂದ ನರಳುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ನಿರ್ಧಾರ ತಕ್ಷಣ ಕೈಬಿಡಬೇಕು. ರಾಜ್ಯ, ಕೇಂದ್ರ ಸರ್ಕಾರಗಳು ರೈತರ ಗೋಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಲಿದೆ.

— ಶರಣಬಸಪ್ಪ ಮಮಶೆಟ್ಟಿ, ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘ.