ಸಿಜೆಪಿ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಸೋಗಿನಲ್ಲಿ ಸಂಸತ್ ಎದುರು ಗಲಭೆ ಮಾಡಿದ್ದು ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಕಾಂಗ್ರೆಸ್ ಪಕ್ಷದ ಗೂಂಡಾಗಳು ಹಲ್ಲೆ ಮಾಡಿದ್ದನ್ನು ಖಂಡಿಸಿ ಯಾದಗಿರಿಯಲ್ಲಿ ಶುಕ್ರವಾರ ಬಿಜೆಪಿ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಸ್ವಾಮಿದೇವ ದಾಸನಕೇರಿ, ಪರಶುರಾಮ ಕುರಕುಂದಿ, ವೆಂಕಟರೆಡ್ಡಿ ಅಬ್ಬೆತುಮಕೂರ ಇತರರಿದ್ದರು. 
ರಾಜ್ಯ

ದೆಹಲಿಯಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಪ್ರತಿಭಟನೆ

ಯಾದಗಿರಿ : ಸಿಜೆಪಿ(ಕಾಕ್ರೋಚ್ ಜನತಾ ಪಾರ್ಟಿ) ಪ್ರತಿಭಟನಾಕಾರರು ವಿದ್ಯಾರ್ಥಿಗಳ ಸೋಗಿನಲ್ಲಿ ಪಾರ್ಲಿಮೆಂಟ್ ಎದುರು ಗಲಭೆ ಮಾಡಿದ್ದು ಹಾಗೂ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ಆ ಪಕ್ಷದ ಗೂಂಡಾಗಳು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಹ¯್ಲೆ ಮಾಡಿದ್ದನ್ನು ಖಂಡಿಸಿ ನಗರದ ಸುಭಾಷ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಜಿ¯್ಲÁ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು.
ನೇತೃತ್ವ ವಹಿಸಿದ್ದ ಬಿಜೆಪಿ ಜಿ¯್ಲÁಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಮಾತನಾಡಿ, ಪ್ರಜÁಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಅದು ಶಾಂತಿಯುತವಾಗಿ ಮತ್ತು ಕಾನೂನು ಮಿತಿಗಳೊಳಗೆ ಇರಬೇಕು. ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇಂತಹ ಕೃತ್ಯಗಳು ದೇಶದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತವೆ. ಅದೇ ರೀತಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ವೇಳೆ ನಡೆದ ಘಟನೆಗಳು ಇನ್ನಷ್ಟು ದುಃಖಕರವಾಗಿವೆ. ಕಾಂಗ್ರೆಸ್‌ನ ಗೂಂಡಾಗಳು ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಹ¯್ಲÉ ನಡೆಸಿರುವುದು ಅತ್ಯಂತ ನಾಚಿಕೆಗೇಡಿನ ಘಟನೆ. ಜನಪ್ರತಿನಿಽಗಳ ಮೇಲೆ ಹ¯್ಲÉ ಪ್ರಜÁಪ್ರಭುತ್ವದ ಮೇಲೆ ದಾಳಿ ಮಾಡಿದಂತೆ. ಇದು ಕೇವಲ ಒಂದು ಪಕ್ಷದ ವಿಷಯವಲ್ಲ. ದೇಶದ ರಾಜಕೀಯ ಸಂಸ್ಕೃತಿ ಮಟ್ಟವನ್ನು ತೋರಿಸುತ್ತದೆ ಎಂದು ಛೇಡಿಸಿದರು.
ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ದೆಹಲಿ ಸೇರಿ ದೇಶದ ಇತರೆಡೆ ನಡೆದಿರುವ ಸಿಜೆಪಿ ಹೆಸರಿನ ಪ್ರತಿಭಟನೆಗಳು ನಾಗರಿಕರು ಅದರಲ್ಲೂ ಯುವ ಜನತೆಯನ್ನು ದಾರಿ ತಪ್ಪಿಸುವ ತಂತ್ರ ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಜನಪರ ಕೆಲಸ ಮತ್ತು ಅಭಿವೃದ್ಧಿಯನ್ನು ಜಗತ್ತೇ ಕೊಂಡಾಡುತ್ತಿರುವಾಗ ಸಹಿಸದವರು ಈ ರೀತಿ ಗಲಭೆ ಸೃಷ್ಟಿಸಿ ಹೋರಾಟ ಮಾಡುತ್ತಿರುವುದನ್ನು ಖಂಡಿಸಿದರು.
ಹಿರಿಯ ಮುಖಂಡ ಸಿದ್ದನಗೌಡ ಕಾಡಂನೋರ್, ಯುವ ಮೋರ್ಚಾ ಜಿ¯್ಲÁಧ್ಯಕ್ಷ ಶ್ರೀಧರ ಸಾಹುಕಾರ, ಮುಖಂಡರಾದ ಖಂಡಪ್ಪ ದಾಸನ್, ಸ್ವಾಮಿದೇವ ದಾಸನಕೇರಿ, ಪರಶುರಾಮ ಕುರಕುಂದಿ, ವೆಂಕಟರೆಡ್ಡಿ ಅಬ್ಬೆತುಮಕೂರು, ರಾಜಶೇಖರ ಕಾಡಂನೋರ್, ರಮೇಶ ದೊಡ್ಡಮನಿ, ಮಾರುತಿ ಕಲಾಲï ಸೇರಿ ನಗರ ಮತ್ತು ಗ್ರಾಮೀಣ ಮಂಡಲ, ಮಹಿಳಾ ಮತ್ತು ಯುವ ಮೋರ್ಚಾದ ಪದಾಽಕಾರಿಗಳು ಪಾಲ್ಗೊಂಡಿದ್ದರು.
"

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಆದರೆ ದೇಶದ ಮುಗ್ಧ ಜನರನ್ನು ದಾರಿ ತಪ್ಪಿಸುವ ಹೋರಾಟಗಳು ನಡೆಯಬಾರದು. ಜನರು ಕೂಡ ಸತ್ಯಾಸತ್ಯತೆ ಅರಿಯಬೇಕು.| ಚಂದ್ರಶೇಖರಗೌಡ ಮಾಗನೂರಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ


"

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಮತ್ತಿತರ ಪಕ್ಷಗಳ ಹೋರಾಟಗಳು ವಿಶೇಷವಾಗಿ ಯುವಜನತೆಗೆ ದಾರಿ ತಪ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿವೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೆ ಹೀಗೆ ಮಾಡಲಾಗುತ್ತಿದೆ.| ಶ್ರೀಧರ ಸಾಹುಕಾರ ಜಿಲ್ಲಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ