ಲಚ್ಚಪ್ಪ ಜಮಾದಾರ 
ರಾಜ್ಯ

ಎಫ್​ಐಆರ್​ ರದ್ದಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಲಚ್ಚಪ್ಪ ಜಮಾದಾರ ಹೇಳಿಕೆ
  • ಮಲ್ಲಿಕಾರ್ಜುನ ಮುತ್ಯಾ ಪರನಿಂತ ಕೋಲಿ ಸಮಾಜ
ಕಲಬುರಗಿ:ಶಹಾಪುರ ತಾಲೂಕಿನ ಮಹಲರೋಜ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕೆಲವರು ಷಡ್ಯಂತ್ರ ಮಾಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುವಂತೆ ಮಾಡಿ, ಅವರ ಚಾರಿತ್ರವಧೆ ಮಾಡುತ್ತಿದ್ದಾರೆ ಎಂದು ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುತ್ಯಾ ಅಂತಹವರಲ್ಲ, ಅವರು ಎಲ್ಲರನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಅದರಲ್ಲೂ ಮಗುವಿನ ವಿಚಾರವಾಗಿ ಈ ತೆರನಾಗಿ ಮಾಡುತ್ತಿರುವುದು ಭಕ್ತರನ್ನು ಕೆರಳುವಂತೆ ಮಾಡಿದೆ. ವಿಡಿಯೋ ತಿರುಚಲಾಗಿದೆ. ಅಲ್ಲದೆ ಬಾಲಕಿ ಪೋಷಕರು ಸಹ ಇದರ ಬಗ್ಗೆ ಹೇಳಿಕೊಂಡಿದ್ದಾರೆ. ಆದರೂ, ಮುತ್ಯಾನ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಇಲ್ಲದನ್ನು ಬರೆಯುತ್ತಿರುವುದು ಸರಿಯಲ್ಲ ಎಂದರು.
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸಿ, ಪ್ರಕರಣ ಮುಕ್ತಾಯಗೊಳಿಸಬೇಕು ಎಂದು ಆಗ್ರಹಿಸಿ ಮಾ.2 ರಂದು ಕಲಬುರಗಿ ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಗುವುದು. ಅಂದು 11 ಗಂಟೆಗೆ ಜಗತ್​ ವೃತ್ತದಿಂದ ಡಿಸಿ ಕಚೇರಿಯವರೆಗೂ ಮೆರವಣಿಗೆ ನಡೆಸಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪೋಕ್ಸೋ ಪ್ರಕರಣ ದಾಖಲಾದ ನಂತರ ಮಗುವಿನ ಪೋಟೋ ಬಳಸಬಾರದು ಎಂದಿದೆ. ಅದರೆ, ಕೆಲವರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಿರುವುದು ಅಲ್ಲದೆ ಇಲ್ಲದ್ದನ್ನು ಬರೆಯುತ್ತಿದ್ದು ಅವೆಲ್ಲವನ್ನು ಸಂಗ್ರಹಿಸಲಾಗುತ್ತಿದ್ದು ಅವರ ವಿರುದ್ಧ ದೂರು ನೀಡಲಾಗುವುದು ಎಂದು ಜಮಾದಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಮಲಿಂಗ ನಾಟೀಕಾರ, ಮಲ್ಲಿಕಾರ್ಜುನ ಗುಡುಬಾ, ಅಂಬಾರಾಯ ಜವಳಗಾ, ಸತೀಶ ಜಮಾದಾರ, ಉಮೇಶ ಕುರಿಕೋಟಾ,ನಾಗೇಂದ್ರಪ್ಪ ಧಮ್ಮೂರ, ರಾಮು,ರಾಹುಲ್​ ಇತರರಿದ್ದರು.