ಮನರೇಗಾ ಪ್ರತಿಭಟನೆಯ ಕುರಿತು ದೇವನಹಳ್ಳಿ ತಾಲೂಕಿನ ಕನ್ನಮಂಗಲದಲ್ಲಿ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಯಲ್ಲಿ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರಾಜಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಜಗನ್ನಾಥ್​ ಇತರರಿದ್ದರು. 
ರಾಜ್ಯ

23ರಂದು ಜಿ ರಾಮ್​ ಜಿ ಕಾಯ್ದೆ ವಾಪಸ್​ಗೆ ಪ್ರತಿಭಟನೆ / DEVANAHALLI

ದೇವನಹಳ್ಳಿ : ಚಿಕ್ಕಬಳ್ಳಾಪುರದಲ್ಲಿ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ಫೆ.23ರಂದು ಕೇಂದ್ರದ ವಿರುದ್ಧ ನಡೆಯಲಿರುವ ಬೃಹತ್​ ಪ್ರತಿಭಟನೆಗೆ ತಾಲೂಕಿನ ಕನ್ನಮಂಗಲದಲ್ಲಿ ಸಚಿವ ಕೆ.ಎಚ್​.ಮುನಿಯಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರೊಂದಿಗೆ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಅವರು, ಗ್ರಾಮೀಣ ಜನರಿಗೆ ಅನುಕೂಲವಾಗುವ ಮನರೇಗಾ ಯೋಜನೆ ಮುಂದುವರಿಸಿ, ಜಿ ರಾಮ್​ ಜಿ ಕಾಯ್ದೆ ವಾಪಸ್​ ಪಡೆಯುವ ಕುರಿತು ಚರ್ಚಿಸಿದರು. ಕಾರ್ಯಕರ್ತರಿಗೆ ಸಂಘಟನೆ ಶಕ್ತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿ, ಮುಂದಿನ ಪ್ರತಿಭಟನೆಯ ಯಶಸ್ಸಿಗೆ ಮಾರ್ಗದರ್ಶನ ನೀಡಿದರು. ಅಂದಿನ ಪ್ರತಿಭಟನಾ ಸಭೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಐದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಮೂಲಕ ಈ ಪ್ರತಿಭಟನೆಯಲ್ಲಿ ನಾವು ಮುಂಚೂಣೆಯಲ್ಲಿರೋಣ ಎಂದು ಹೇಳಿದರು.
ಸಭೆಯ ಬಳಿಕ ಸ್ಥಳಿಯ ಮತ್ತು ಜಿಲ್ಲಾಮಟ್ಟದ ಕಾರ್ಯ ಯೋಜನೆಗಳನ್ನು ಸಂಯೋಜಿಸಿ, ಪ್ರತಿಭಟನೆಯ ಪೂರ್ಣ ತಯಾರಿ ನಡೆಸಲು ಮುಖಂಡರಿಗೆ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಸಿ.ಆರ್​.ಗೌಡ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್​, ಬಯಪ ನಿರ್ದೇಶಕರಾದ ಪ್ರಸನ್ನಕುಮಾರ್​, ಮಂಜುನಾಥ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಮಂಜುನಾಥ್​, ವೆಂಕಟೇಶ್​, ಬಮುಲ್​ ನಿರ್ದೇಶಕ ಎ.ಪಿ.ಮುನಿರಾಜು, ಅಕ್ಕಯ್ಯಮ್ಮ ಸಿ.ಮುನಿಯಪ್ಪ, ಮುಖಂಡರು, ಕಾರ್ಯಕರ್ತರು ಇದ್ದರು.