ಆನೇಕಲ್​ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಜ್ಯಾಧ್ಯ ಆನೇಕಲ್​ ಕೃಷ್ಣಪ್ಪ, ಬೆಂ. ದಣ ಜಿಲ್ಲಾಧ್ಯ ಚಿರಂಜೀವಿ, ಬೆಂ. ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್​, ತಾಲೂಕು ಅಧ್ಯ ಕೊಪ್ಪಗೆ ರವಿ, ಆರ್​.ವೆಂಕಟೇಶ್​, ಲವ, ಪರಶುರಾಮ್​, ಎಸ್​.ಬಾಬು, ಶಿವಮ್ಮ, ರುಕ್ಮಿಣಿ, ಮಂಜುನಾಥ್​, ಅಶೋಕ್​, ನಾಗಪ್ಪ, ಜಯರಾಮ್​ ಇತರರು ಇದ್ದರು. 
ರಾಜ್ಯ

ನಿವೇಶನಕ್ಕಾಗಿ ಸೆ.2ಕ್ಕೆ ಪ್ರತಿಭಟನೆ / ANEKAL

ಆನೇಕಲ್ :

ಬಡವರು ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿ ಸೆ.2ರಂದು ಆನೇಕಲ್​ ತಾಲೂಕು ಕಚೇರಿ ಮುಂದೆ ಬೃಹತ್​ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾ ವಿಮೋಚನ ಚಳವಳಿಯ ರಾಜ್ಯಾಧ್ಯ ಆನೇಕಲ್​ ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವು ವರ್ಷಗಳಿಂದ ಬಡವರು ಹಾಗೂ ನಿವೇಶನ ರಹಿತರು ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿದ್ದು, ಸ್ವಂತ ಸೂರಿಗಾಗಿ ಕಾಯುತ್ತಿದ್ದಾರೆ. ಸರ್ಕಾರ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಬೇಕು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲ ಬಡವರಿಗೂ ನಿವೇಶನ ಸಿಗಬೇಕು. ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ದಣ ಜಿಲ್ಲಾಧ್ಯ ಚಿರಂಜೀವಿ, ಬೆಂ. ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್​, ತಾಲೂಕು ಅಧ್ಯ ಕೊಪ್ಪಗೆ ರವಿ, ಆರ್​.ವೆಂಕಟೇಶ್​, ಲವ, ಪರಶುರಾಮ್​, ಎಸ್​.ಬಾಬು, ಶಿವಮ್ಮ, ರುಕ್ಮಿಣಿ, ಮಂಜುನಾಥ್​, ಅಶೋಕ್​, ನಾಗಪ್ಪ, ಜಯರಾಮ್​ ಇತರರು ಇದ್ದರು.