ರಾಯಚೂರು
ರೈತರ ಕೃಷಿ ಸಂರಕ್ಷಣಾ ಸಮಿತಿಯಿಂದ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ಫೆ.23 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆಂದು ಸಂಘಟನೆ ರಾಜ್ಯಾಧ್ಯಕ್ಷ ಮಸ್ತಾನ್ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರು ಅಮೆರಿಕಾದೊಂದಿಗೆ ಆಮದು ಒಪ್ಪಂದು ಮಾಡಿಕೊಂಡು ಕೃಷಿಯನ್ನು ಅಸ್ಥಿತರಗೊಳಿಸುವ ಪ್ರಯತ್ನವಾಗಿದೆ. ಬೇರೆ ದೇಶದಿಂದ ಬೆಳೆಗಳನ್ನು ಆಮದು ಮಾಡಿಕೊಳ್ಳುವದರಿಂದ ದೇಶದ ಕೃಷಿ ಸಮಸ್ಯೆಗೆ ಸಿಲುಕಲಿದೆ. ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿದೆ ಎಂದರು.
ಜಿಲ್ಲೆಯಲ್ಲಿ ಬೆಳೆ ಪರಿಹಾರದಲಿ ಭಾರಿ ಭ್ರಷ್ಟಚಾರ ನಡೆದಿದೆ. ಕಂದಾಯ ಅಧಿಕಾರಿಗಳು ಅಸಮರ್ಪಕ ಮಾಹಿತಿ ನೀಡಿ ರೈತರಿಗೆ 17 ರೂ. ಪರಿಹಾರ ನೀಡಿದ್ದಾರೆ ಮರ್ಚಟ್ಹಾಳ, ಖಾನಾಪುರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಕಳೆದುಕೊಂಡ ಬೆಳೆಹಾನಿ ಅಸಮರ್ಪಕ ಮಾಹಿತಿ ನೀಡಿ ಮನಬಂದಂತೆ ಪರಿಹಾರ ಒದಗಿಸಿದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್‌ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸಂಗಮೇಶ ನಾಯಕ, ಪ್ರಮುಖರಾದ ಬಸವರಾಜ ಗೌಡ, ಡಿ.ಸತ್ಯರೆಡ್ಡಿ, ಅಕ್ಕಮಹಾದೇವಿ, ಮುದಿಯಪ್ಪ, ನರಸಿಂಹನಾಯಕ ಇದ್ದರು.