ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ಸುರಪುರದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ನಾಯಕ ತಾಲೂಕು ಸಂಘದಿAದ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ಮಲ್ಲಯ್ಯ ದಂಡು ಅವರಿಗೆ ಮನವಿಪತ್ರ ಸಲ್ಲಿಸಿದರು. ರಮೇಶ ಧೊರೆ ಆಲ್ದಾಳ, ವೇಂಕಟೇಶ ಬೇಟೆಗಾರ, ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ, ಭೀಮುನಾಯಕ ಮಲ್ಲಿಭಾವಿ, ನಾಗರಾಜ ನಾಯಕ ಪ್ಯಾಪ್ಲಿ, ಬಸವರಾಜ ಪಾಟೀಲ್, ಕನಕಾಚಲ ಜಾಹಾಗೀರದಾರ ಇತರರಿದ್ದರು.
ಸುರಪುರ: ಸಚಿವ ಸತೀಶ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಖಂಡಿಸಿ ಗುರುವಾರ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಸದಸ್ಯರು, ಕೇಂದ್ರ ಸರ್ಕಾರ ಸಚಿವ ಸತೀಶ ಜಾರಕಿಹೊಳಿ ಅವರನ್ನು ಚುನಾವಣೆಯಲ್ಲಿ ಎದುರಿಸಲಾಗದೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತ ಸಂಸ್ಥೆ ಬಳಸಿಕೊಂಡು ರಾಜಕೀಯವಾಗಿ ಅವರನ್ನು ಮುಗಿಸಲು ತಂತ್ರಗಾರಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸತೀಶ ಜಾರಕಿಹೊಳಿ ಅವರು ಒಬ್ಬ ಕೆಳಮಟ್ಟದಿಂದ ಬಂದ ರಾಜಕಾರಣಿಯಾಗಿದ್ದಾರೆ. ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಅನುಸರಿಸುತ್ತಾ ಬಂದಿದ್ದು ಜನ ಸಾಮಾನ್ಯರಂತೆ ಜೀವನ ಸಾಗಿಸುವ ಕೆಲ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಇಂತಹ ದಲಿತ ನಾಯಕನನ್ನು ರಾಜಕೀಯವಾಗಿ ಹಣಿಯಲು ಕೇಂದ್ರದ ಬಿಜೆಪಿ ಸರ್ಕಾರ ಇಡಿ ದಾಳಿ ಮಾಡಿರುವುದು ಇಡೀ ಮಾನವ ಸಮಾಜ ಖಂಡಿಸುತ್ತದೆ ಎಂದರು.
ಈ ವೇಳೆ ರಮೇಶ ಧೊರೆ ಆಲ್ದಾಳ, ವೇಂಕಟೇಶ ಬೇಟೆಗಾರ, ಸಂಘದ ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ, ಭೀಮುನಾಯಕ ಮಲ್ಲಿಭಾವಿ, ನಾಗರಾಜ ನಾಯಕ ಪ್ಯಾಪ್ಲಿ, ಬಸವರಾಜ ಪಾಟೀಲ್, ಕನಕಾಚಲ ಜಾಹಾಗೀರದಾರ, ವೆಂಕಟಪ್ಪ ನಾಯಕ ದೇಸಾಯಿ, ರಂಗಣ್ಣ ದೊರೆ, ಬಿ.ನಿಂಗನಗೌಡ, ಹಣಮಂತ ಕಟ್ಟಮನಿ, ಹುಲಗಪ್ಪಗೌಡ, ನಾರಾಯಣಗೌಡ, ಮರೇಪ್ಪಗೌಡ, ಭೀಮಣ್ಣ ಇತರರಿದ್ದರು.