ಎಸ್ಐಆರ್ ವಿರೋಧಿಸಿ ವಿವಿಧ ಸಂಟನೆಗಳಿಂದ ಬಸವಕಲ್ಯಾಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್&2 ತಹಸೀಲ್ದಾರ್ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಂದೀಪ ಮುಕಿಂದೆ, ಇಕ್ರಮೋದ್ದಿನ್ ಖಾದಿವಾಲೆ, ಸುರೇಶ ಮೋರೆ, ಚೇತನ ಕಾಡೆ, ನಿತ್ಯಾನಂದ ಮಂಠಾಳಕರ್, ನಾಗೇಶ ಮೇತ್ರೆ, ದತ್ತು ಭೆಂಡೆ ಇತರರಿದ್ದರು.
- ಗ್ರೇಡ್-2 ತಹಸೀಲ್ದಾರ್ ಡಾ.ರಮೇಶಬಾಬು ಹಾಲು ಅವರಿಗೆ ಮನವಿಪತ್ರ ಸಲ್ಲಿಕೆ
ಬಸವಕಲ್ಯಾಣ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕ, ಎದ್ದೇಳು ಕರ್ನಾಟಕ, ಗ್ರಾಮ ಕ್ರಾಂತಿ ಸೇನೆ, ಹೊಸ ರೈತ ಸಂಘಟನೆ, ಭೀಮ್ ಆರ್ಮಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ), ವಾಯ್ಸ್ ಆಫ್ ಅಂಬೇಡ್ಕರ್, ಜಮಾತ್ ಎ ಇಸ್ಲಾಮಿ&ಹಿಂದ್, ತೇಹರಿಕ್ ಟಿಪ್ಪು ಸುಲ್ತಾನ್, ಆದಿ ಜಾಂಬವ, ಎನ್ಎಸ್ಯುಐ, ಯುಥ್ ಕಾಂಗ್ರೆಸ್, ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ಶನಿವಾರ ನಗರದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-2 ತಹಸೀಲ್ದಾರ್ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು.
ಎದ್ದೇಳು ಕರ್ನಾಟಕದ ಜಿಲ್ಲಾ ಸಂಯೋಜಕ, ಗ್ರಾಮ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಸಂದೀಪ ಮುಕಿಂದೆ ಮಾತನಾಡಿ, ನಾವು ಚುನಾವಣಾ ಆಯೋಗಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಯಾವುದೇ ಅರ್ಹ ಮತದಾರನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಇದು ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ರಸುವ ಹೋರಾಟವಾಗಿದೆ ಎಂದರು.
ವಾಯ್ಸ್ ಆಫ್ ಅಂಬೇಡ್ಕರ ಸಂಟನೆಯ ಅಧ್ಯಕ್ಷ ಸುರೇಶ ಮೋರೆ, ಎದ್ದೇಳು ಕರ್ನಾಟಕದ ತಾಲೂಕು ಸಂಯೋಜಕ ಇಕ್ರಾಮ್ ಖಾದಿವಾಲೆ, ಭೀಮ್ ಆರ್ಮಿ ಅಧ್ಯಕ್ಷ ಚೇತನ ಕಾಡೆ, ಯುಥ್ ಕಾಂಗ್ರೆಸ್ಸಿನ ನಗರ ಅಧ್ಯಕ್ಷ ಎಂಡಿ ಜಾಬೇರ್, ರಿಯಾಜ್ ಪಟೇಲ್, ಇಫ್ತಿಕಾರ್ ಅಹಮದ್ ಹಾಗೂ ವಿವಿಧ ಸಂಟನೆಯ ಪ್ರಮುಖರು ಮಾತನಾಡಿ, ಬೇಡಿಕೆ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಆಮಾತ್ ಏ- ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಅಸ್ಲಮ್ ಜನಾಬ್, ಆದಿ ಜಾಂಬವ ಸಂಟನೆಯ ಜಿಲ್ಲಾ ಉಪಾಧ್ಯಕ್ಷ ಯುವರಾಜ ಬೆಂಡೆ, ತಾಲೂಕು ಅಧ್ಯಕ್ಷ ದತ್ತು ಭೆಂಡೆ, ಮುಖಂಡರಾದ ನಾಗೇಶ ಮೇತ್ರೆ, ನಿತ್ಯಾನಂದ ಮಂಠಾಳಕರ್, ಮಿರ್ಜಾ ಖಾಸೀಂ ಬೇಗ, ಹುಜೂರ್ ಪಾಶಾ ಇತರರು ಭಾಗವಹಿಸಿದ್ದರು.