ರಾಷ್ಟ್ರೀಯ ಹೆದ್ದಾರಿ 748ರಲ್ಲಿ ಅಂಡರಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಎಸಿ ಪ್ರವೀಣ ಜೈನ, ರೆಸಿಡೆಂಟ್ ಇಂಜಿನಿಯರ್ ಭೀಮಶಿ ಎಂ.ಬಿ. ಅವರಿಗೆ ಮನವಿ ಸಲ್ಲಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಕಾರ್ತಿಕ ಪಾಟೀಲ ಇತರರು ಇದ್ದರು.
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ತಾಲೂಕಿನಲ್ಲಿ ಹಾಯ್ದು ಹೋಗುತ್ತಿರುವ ಹೈದ್ರಾಬಾದ-ಪಣಜಿ ಗ್ರೀನ್ ಕಾರಿಡಾರ್ 748ಏ ಹೆದ್ದಾರಿಯಲ್ಲಿ ರೈತರಿಗೆ, ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಸಮರ್ಪಕ ಸೇತುವೆ, ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ ನೇತತ್ವದಲ್ಲಿ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಬಹತ್ ಪ್ರತಿಭಟನೆ ನಡೆಸಲಾಯಿತು.
ಮುರಗೋಡ ರಸ್ತೆಯ ಮರಕುಂಬಿ ಗ್ರಾಮದ ಹಾರುಗೊಪ್ಪ ಕ್ರಾಸ್ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಹೈದ್ರಾಬಾದ್-ಪಣಜಿ ನೂತನ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ಅಂಡರಪಾಸ್ ಹಾಗೂ ಸರ್ವಿಸ್ ರಸ್ತೆ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ರೈತರು ಹಾಗೂ ಸ್ಥಳೀಯ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟ್ರಾೃಕ್ಟರ್, ಚಕ್ಕಡಿ, ಎತ್ತುಗಳ ಮೂಲಕ ಆಗಮಿಸಿದ ರೈತರು, ವಿವಿಧ ಸಂಘಟನೆಗಳು ನೂರಾರು ಪದಾಧಿಕಾರಿಗಳು ಮುರಗೋಡ- ಬೈಲಹೊಂಗಲ ರಸ್ತೆ ತಡೆ ನಡೆಸಿದರು. ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.
ಎಸಿ ಪ್ರವೀಣ ಜೈನ, ಎನ್‌ಎಚ್ 748ರ ರೆಸಿಡೆಂಟ್ ಇಂಜಿನಿಯರ್ ಭೀಮಶಿ ಎಂ.ಬಿ. ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿ, ಸರ್ಕಾರ ಗಮನಸೆಳೆಯುವ ಭರವಸೆ ನೀಡಿದರು.
ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಮುರಗೋಡ ಸಿಪಿಐ ಐ.ಎಂ.ಮಠಪತಿ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಮುರಗೋಡ, ಕರುನಾಡ ರಕ್ಷಣಾ ವೇದಿಕೆ ಉತ್ತರ ಕರ್ನಾಟಕದ ರೈತ ಘಟಕದ ಅಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ, ಮಲ್ಲಿಕಾರ್ಜುನ ಗುರಕ್ಕನವರ, ಸೋಮಪ್ಪ ಬೈಲವಾಡ, ಕ್ರುಸಾಬ್ ಮುಜಾವರ, ಈರಣ್ಣ ಅಂಬಡಗಟ್ಟಿ, ಮಲ್ಲಿಕಾರ್ಜುನ ತಿಗಡಿ, ಶಿವಪ್ಪ ಗುರಕ್ಕನವರ, ಸತೀಶ ಚಿಕ್ಕಮಠ, ಮಹಾಂತೇಶ ಮಾವಿನಕಟ್ಟಿ, ರೇವಪ್ಪ ತಿಗಡಿ, ಪ್ರಶಾಂತ ಮುರಕೀಭಾವಿ, ಮಡಿವಾಳಪ್ಪ ಅಕ್ಕಿಸಾಗರ, ಶಂಕರ ತೋಟಗಿ ಇತರರಿದ್ದರು.
ರೈತ ನಾಡಿನ ಅನ್ನದಾತ, ಆತನಿಗೆ ಸಮಾಜದಲ್ಲಿ ಬಹು ಪ್ರಾಶಸ್ತ್ಯ ಸಿಗಬೇಕು. ಸದ್ಯ ಈ ಭಾಗದಲ್ಲಿ ಪ್ರಾರಂಭ ಮಾಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಡರಪಾಸ್ ಮತ್ತು ಸರ್ವಿಸ್ ರಸ್ತೆಗಳಿಗೆ ಆದ್ಯತೆ ನೀಡಬೇಕು. ರೈತರಿಗೆ ನ್ಯಾಯ ಸಿಗುವವರೆಗೆ ಹೆದ್ದಾರಿ ಕಾಮಗಾರಿ ಬಂದ್ ಮಾಡಬೇಕು.